ETV Bharat / bharat

ಮಮತಾ ಬ್ಯಾನರ್ಜಿ ಫೋನ್​​ ಮಾಡಿ ಸಹಾಯ ಕೇಳಿದ್ರು... ಬಿಜೆಪಿ ಮುಖಂಡನಿಂದ ಆಡಿಯೋ ರಿಲೀಸ್​!

ಮಮತಾ ಬ್ಯಾನರ್ಜಿ ತನಗೆ ಕರೆ ಮಾಡಿ ಚುನಾವಣೆಯಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾಗಿ ಬಿಜೆಪಿ ಮುಖಂಡ ಹೇಳಿಕೊಂಡಿದ್ದು, ಅದರ ಆಡಿಯೋ ರಿಲೀಸ್ ಮಾಡಿದ್ದಾರೆ.

CM Mamata Banerjee seeks BJP Help
CM Mamata Banerjee seeks BJP Help
author img

By

Published : Mar 28, 2021, 3:13 AM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ರಂಗೇರಿದ್ದು, 30 ಕ್ಷೇತ್ರಗಳಿಗೆ ನಿನ್ನೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಇದರ ಮಧ್ಯೆ ಮಮತಾ ಬ್ಯಾನರ್ಜಿ ತಮಗೆ ಫೋನ್ ಕರೆ ಮಾಡಿ ಸಹಾಯ ಕೇಳಿದ್ದಾರೆ ಎಂದು ಬಿಜೆಪಿ ಮುಖಂಡ ಪ್ರಲೋಯ್​ ಪಾಲ್​ ಹೇಳಿಕೊಂಡಿದ್ದಾರೆ.

ನಿನ್ನೆ ಬೆಳಗ್ಗೆ 9 ಗಂಟೆಗೆ ನಾನು ಮಮತಾ ಅವರಿಂದ ಫೋನ್ ಕರೆ ಸ್ವೀಕಾರ ಮಾಡಿದ್ದು, ಈ ವೇಳೆ ಅವರು ನೀವು ಹೋರಾಟಗಾರರು ನಮ್ಮೊಂದಿಗೆ ಬರಬೇಕು. ಮರಳಿ ಟಿಎಂಸಿಗೆ ಬಂದು ಬಿಜೆಪಿ ನಾಯಕ ಸುವೇಂದು ವಿರುದ್ಧ ಗೆಲುವು ಸಾಧಿಸಲು ಸಹಾಯ ಮಾಡುವಂತೆ ತಿಳಿಸಿದ್ದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಲೋಯ್​​ ಇದು ಪ್ರತಿಷ್ಠೆಯ ವಿಷಯ. ಸುವೇಂದು ಅವರ ಹೋರಾಟಕ್ಕೆ ನಾನು ಬೆಂಬಲ ಸೂಚಿಸಿದ್ದು, ಇದೀಗ ಬಿಜೆಪಿ ಪರ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ಇದೇ ವಿಷಯ ಇದೀಗ ಆಡಳಿತ ಪಕ್ಷ ಟಿಎಂಸಿ ಹಾಗೂ ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಒಬ್ಬರ ಮೇಲೆ ಇನ್ನೊಬ್ಬರ ಆರೋಪ ಮುಂದುವರೆದಿದೆ.

  • Around 9 am today, I received a phone call from Mamata Banerjee. She said -- you are a fighter and you should come with us. I said it is a matter of prestige and for Suvendu Da's fight: Pralay Pal, BJP vice president of Purba Medinipur district in West Bengal pic.twitter.com/cwOYlvJ9NY

    — ANI (@ANI) March 27, 2021 " class="align-text-top noRightClick twitterSection" data=" ">

ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ 8 ಹಂತದಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತ ಮುಕ್ತಾಯಗೊಂಡಿದೆ. ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯಿಂದ ಸುವೇಂದು ಅಧಿಕಾರಿ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: ಪಂಜಾಬ್​ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿದ ರೈತರು!

ಇದರ ಮಧ್ಯೆ ಉಭಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಸರ್ವೆ ಸಾಮಾನ್ಯವಾಗಿದ್ದು, ಇದೀಗ ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ತಮಗೆ ಕರೆ ಮಾಡಿ ಸಹಾಯ ಯಾಚನೆ ಮಾಡಿದ್ದಾರೆ ಎಂಬ ಆಡಿಯೋ ಹೆಚ್ಚು ಕುತೂಹಲ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.