ಕೋಲ್ಕತ್ತಾ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸೀಲ್ದಾಹ್ ಮೆಟ್ರೋ ನಿಲ್ದಾಣವನ್ನು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಮೇಯರ್ ಫಿರ್ಹಾದ್ ಹಕೀಮ್ ಹೆಸರನ್ನು ಉಲ್ಲೇಖ ಮಾಡಿಲ್ಲ. ಇದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದ್ದು, ಟಿಎಂಸಿ ಈ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿದೆ.
ಇಂದು ಮೆಟ್ರೋ ರೈಲು ವಿಭಾಗದವರು ನೀಡಿದ ಆಮಂತ್ರಣ ಪತ್ರದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲ ಜಗದೀಪ್ ಧಂಖರ್ ಅವರ ಹೆಸರುಗಳು ಕಂಡು ಬಂದಿಲ್ಲ. ನಗರ ಮೇಯರ್ ಫಿರ್ಹಾದ್ ಹಕೀಮ್ ಅವರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಆಮಂತ್ರಣ ಪತ್ರಿಕೆ ಗಮನಕ್ಕೆ ಬಂದ ಕೂಡಲೇ ರಾಜಕೀಯ ಗದ್ದಲ ಶುರುವಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಉತ್ತರ ಬಂಗಾಳದಲ್ಲಿದ್ದಾರೆ. ಮೇಯರ್ ಫಿರ್ಹಾದ್ ಹಕೀಂ ನಗರದಲ್ಲಿ ಇಲ್ಲ. ಉತ್ತರ ಕೋಲ್ಕತ್ತಾದ ಸಂಸದ ಸುದೀಪ್ ಬ್ಯಾನರ್ಜಿ ಕೂಡ ಸಮಾರಂಭದಿಂದ ಹೊರಗುಳಿಯಲು ಸಜ್ಜಾಗಿದ್ದಾರೆ.
ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಕಿಡಿಕಾರಿದ್ದು, ಸೀಲ್ದಾಹ್ ಮೆಟ್ರೋ ನಿಲ್ದಾಣದ ಉದ್ಘಾಟನೆಯೊಂದಿಗೆ ನಡೆಯುತ್ತಿರುವುದು ಕೊಳಕು ಹೊರತು ಬೇರೇನೂ ಅಲ್ಲ. ಕೇಂದ್ರ ಸಚಿವರೇ ಸೀಲ್ದಾಹ್ ಸ್ಟೇಷನ್ ಉದ್ಘಾಟನೆ ಮಾಡುತ್ತಿದ್ದಾರೆ, ಅವರಿಗಿಂತ ಮುಖ್ಯಮಂತ್ರಿ ಹುದ್ದೆಯ ಮೌಲ್ಯ ತುಂಬಾ ಹೆಚ್ಚಿದೆ ಎಂದು ಹಕೀಂ ಹೇಳಿದ್ದಾರೆ.
ನಿಯಮಗಳಂತೆಯೇ ನಡೆದುಕೊಂಡಿದ್ದೇವೆ: ಘಟನೆ ಸಂಬಂಧ ಮೆಟ್ರೋ ರೈಲು ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಅಥವಾ ಮೇಯರ್ ಹೆಸರು ಮಾತ್ರವಲ್ಲ, ರಾಜ್ಯಪಾಲ ಜಗದೀಪ್ ಧಂಖರ್ ಅವರ ಹೆಸರೂ ಇಲ್ಲ ಎಂದು ಹೇಳಿದೆ. ಪ್ರೋಟೋಕಾಲ್ ಪ್ರಕಾರ ಕಾರ್ಯಕ್ರಮ ನಡೆಯುವ ಪ್ರದೇಶದ ಸಂಸದರು ಮತ್ತು ಶಾಸಕರ ಹೆಸರನ್ನು ಮುಖ್ಯ ಅತಿಥಿಗಳೊಂದಿಗೆ ಆಹ್ವಾನಿಸಲಾಗಿದೆ ಎಂದು ಮೆಟ್ರೊ ರೈಲ್ವೆ ತಿಳಿಸಿದೆ.
ಇದನ್ನೂ ಓದಿ: ರಷ್ಯಾದ ರಾಕೆಟ್ ದಾಳಿಗೆ ಉಕ್ರೇನ್‌ನಲ್ಲಿ 15 ಜನ ಹತ: ರಷ್ಯಾದಿಂದ ಭಯೋತ್ಪಾದನೆ ಎಂದು ಕೀವ್ ಆಕ್ರೋಶ