ನವದೆಹಲಿ: ಪ್ರಸ್ತುತ ಸ್ಪೇನ್ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮ್ಯಾಡ್ರಿಡ್ನ ಉದ್ಯಾನವನದಲ್ಲಿ ಜಾಗಿಂಗ್ ಮಾಡುತ್ತಿರುವ ದೃಶ್ಯ ಗಮನಸೆಳೆದಿದೆ. ಸಿಎಂ ಮಮತಾ ಜಾಗಿಂಗ್ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. "ಉಲ್ಲಾಸದಾಯಕ ಬೆಳಗು. ಉತ್ತಮ ಜಾಗಿಂಗ್ ದಿನದ ಮುಂದಿನ ಕೆಲಸಗಳಿಗಾಗಿ ನಿಮ್ಮನ್ನು ಶಕ್ತಿಯುತಗೊಳಿಸುತ್ತದೆ. ಸದೃಢರಾಗಿರಿ, ಎಲ್ಲರೂ ಆರೋಗ್ಯವಾಗಿರಿ!" ಎಂದು ವೀಡಿಯೊಗೆ ಅವರು ಕ್ಯಾಪ್ಷನ್ ನೀಡಿದ್ದಾರೆ. ಇದೇ ವೀಡಿಯೊವನ್ನು ತೃಣಮೂಲ ಕಾಂಗ್ರೆಸ್ ಎಕ್ಸ್ನಲ್ಲಿ ಹಂಚಿಕೊಂಡಿದೆ.
-
Embracing the serene morning in Madrid!
— All India Trinamool Congress (@AITCofficial) September 14, 2023 " class="align-text-top noRightClick twitterSection" data="
Hon’ble CM @MamataOfficial rejuvenates us all with her energy and high spirits as she goes jogging.
Sharing a few glimpses 👇 pic.twitter.com/cGgx6RrZaE
">Embracing the serene morning in Madrid!
— All India Trinamool Congress (@AITCofficial) September 14, 2023
Hon’ble CM @MamataOfficial rejuvenates us all with her energy and high spirits as she goes jogging.
Sharing a few glimpses 👇 pic.twitter.com/cGgx6RrZaEEmbracing the serene morning in Madrid!
— All India Trinamool Congress (@AITCofficial) September 14, 2023
Hon’ble CM @MamataOfficial rejuvenates us all with her energy and high spirits as she goes jogging.
Sharing a few glimpses 👇 pic.twitter.com/cGgx6RrZaE
ಪಶ್ಚಿಮ ಬಂಗಾಳದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಮೂರು ದಿನಗಳ ವ್ಯಾಪಾರ ಶೃಂಗಸಭೆಯಲ್ಲಿ ಭಾಗವಹಿಸಲು ಬ್ಯಾನರ್ಜಿ ಮಂಗಳವಾರ ಸ್ಪೇನ್ಗೆ ಬಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಸಿಎಂ ಇದೇ ಸಂದರ್ಭದಲ್ಲಿ ಭೇಟಿಯಾದರು. ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ಬ್ಯಾನರ್ಜಿ ಅವರೊಂದಿಗೆ ಗಂಗೂಲಿ ಕುಳಿತಿರುವ ಫೋಟೋವನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಹಂಚಿಕೊಂಡಿದೆ.
ಭಾರತ ಮತ್ತು ಸ್ಪೇನ್ ನಡುವಿನ ಪರಸ್ಪರ ಸಹಯೋಗದ ಮೂಲಕ ಫುಟ್ಬಾಲ್ ಆಟಕ್ಕೆ ಉತ್ತೇಜನ ನೀಡಲು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಲಿಗಾ ನ್ಯಾಸಿಯೋನಲ್ ಡಿ ಫುಟ್ಬೋಲ್ ಪ್ರೊಫೆಷನಲ್ (ಲಾಲಿಗಾ) ತಿಳುವಳಿಕಾ ಒಡಂಬಡಿಕೆಯನ್ನು ಮಾಡಿಕೊಂಡಿವೆ ಎಂದು ಟಿಎಂಸಿ ಹೇಳಿದೆ. "ಬಂಗಾಳವು ಫುಟ್ಬಾಲ್ನ ಮೆಕ್ಕಾ ಆಗಿದೆ ಮತ್ತು ಈ ಸುಂದರವಾದ ಕ್ರೀಡೆಗಾಗಿ ಪ್ರತಿಯೊಬ್ಬ ಬಂಗಾಳಿಯಲ್ಲೂ ಭಾವನೆಗಳು ಆಳವಾಗಿ ಬೇರೂರಿವೆ. ಇಂದು, ಗೌರವಾನ್ವಿತ ಸಿಎಂ @MamataOfficial ನಮ್ಮ ರಾಜ್ಯದಲ್ಲಿ ಸುಂದರವಾದ ಆಟವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಹೂಡಿಕೆಯ ಸಾಧ್ಯತೆಗಳನ್ನು ಅನ್ವೇಷಿಸಲು ಲಾ ಲಿಗಾ ಅಧಿಕಾರಿಗಳೊಂದಿಗೆ ಫಲಪ್ರದ ಸಭೆ ನಡೆಸಿದರು" ಎಂದು ಎಐಟಿಸಿ ಮತ್ತೊಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
"ಮ್ಯಾಡ್ರಿಡ್ನಿಂದ ಬಂದಿರುವ ಮತ್ತೊಂದು ಗಮನಾರ್ಹ ಮಾಹಿತಿಯಲ್ಲಿ, ಪಶ್ಚಿಮ ಬಂಗಾಳದಲ್ಲಿ ಹೊಸ ಫುಟ್ಬಾಲ್ ಅಕಾಡೆಮಿಯನ್ನು ಸ್ಥಾಪಿಸಲು ಲಾ ಲಿಗಾನೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಇದು ನಮ್ಮ ಫುಟ್ಬಾಲ್ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ" ಎಂದು ಎಐಟಿಸಿ ಹೇಳಿದೆ.
ಈ ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿ, ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಚ್.ಕೆ. ದ್ವಿವೇದಿ, ಪಶ್ಚಿಮ ಬಂಗಾಳದ ಎರಡು ಪ್ರಮುಖ ಫುಟ್ಬಾಲ್ ಕ್ಲಬ್ಗಳ ಪ್ರತಿನಿಧಿಗಳಾದ ಮೋಹನ್ ಬಗಾನ್ ಅಥ್ಲೆಟಿಕ್ ಕ್ಲಬ್ನ ಪ್ರಧಾನ ಕಾರ್ಯದರ್ಶಿ ದೇಬಶಿಶ್ ದತ್ತಾ ಮತ್ತು ಮಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ನ ಪ್ರಧಾನ ಕಾರ್ಯದರ್ಶಿ ಇಶ್ತಿಯಾಕ್ ಅಹ್ಮದ್ ಭಾಗವಹಿಸಿದ್ದರು.
ಸ್ಪೇನ್ಗೆ ತೆರಳುವ ಮುನ್ನ ಮಾತನಾಡಿದ್ದ ಮಮತಾ ಬ್ಯಾನರ್ಜಿ, "ನಾವು 5 ವರ್ಷಗಳ ನಂತರ ಸ್ಪೇನ್ಗೆ ಹೋಗುತ್ತಿದ್ದೇವೆ. ಕೋಲ್ಕತಾ ಪುಸ್ತಕ ಮೇಳದಲ್ಲಿ ಸ್ಪೇನ್ ಪಾಲುದಾರ ದೇಶವಾಗಿತ್ತು. ಸ್ಪೇನ್ ಸಮೃದ್ಧ ಉತ್ಪಾದನಾ ಉದ್ಯಮವನ್ನು ಹೊಂದಿದೆ. ಅವರ ಆಹ್ವಾನದ ಮೇರೆಗೆ ನಾವು ಹೋಗುತ್ತಿದ್ದೇವೆ. ಯಾವ ಪ್ರಗತಿಯನ್ನು ಸಾಧಿಸಬಹುದು ಎಂದು ನೋಡೋಣ. ಬಂಗಾಳ ವ್ಯಾಪಾರ ಶೃಂಗಸಭೆ ನವೆಂಬರ್ 21-23 ರಂದು ನಡೆಯಲಿದೆ. ಸ್ಪೇನ್ ಅಧಿಕಾರಿಗಳು ಬಂಗಾಳಕ್ಕೆ ಅನೇಕ ಬಾರಿ ಭೇಟಿ ನೀಡಿದ್ದಾರೆ ಆದರೆ ನಾವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. ಆದ್ದರಿಂದ ನಾನು ಸ್ಪೇನ್ ಗೆ ಹೋಗುತ್ತಿದ್ದೇನೆ. ದುಬೈನಲ್ಲಿಯೂ ನಾವು ವ್ಯಾಪಾರ ಶೃಂಗಸಭೆಯನ್ನು ನಡೆಸಲಿದ್ದೇವೆ" ಎಂದು ಹೇಳಿದ್ದರು.
ಇದನ್ನೂ ಓದಿ : ವಾಟ್ಸ್ಆ್ಯಪ್ ಜಾಹೀರಾತು ಪ್ರದರ್ಶನ ಆರಂಭಿಸುತ್ತಿಲ್ಲ; ಕಂಪನಿಯ ಸ್ಪಷ್ಟನೆ