ಡೆಹ್ರಾಡೂನ್(ಉತ್ತರಾಖಂಡ): ಕಳೆದ ಕೆಲ ತಿಂಗಳ ಹಿಂದೆ ನಡೆದ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಿ, ಸೋಲು ಕಂಡಿದ್ದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಂಪಾವತ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಅದೃಷ್ಟ ಪರೀಕ್ಷೆಯಲ್ಲಿ ಜಯಭೇರಿ ಬಾರಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿಯಾಗಿ ಮುಂದುವರೆಯಲು ಪುಷ್ಕರ್ ಸಿಂಗ್ ಧಾಮಿ ಅವರಿಗೆ ಈ ಉಪ ಚುನಾವಣೆಯಲ್ಲಿ ಗೆಲ್ಲಬೇಕಿತ್ತು. ಇವರ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಗೆಹ್ತೊರ್ ಹಾಗೂ ಸಮಾಜವಾದಿ ಪಕ್ಷದ ಮನೋಜ್ ಕುಮಾರ್ ಭಟ್ ಹಾಗೂ ಸ್ವತಂತ್ರ ಅಭ್ಯರ್ಥಿ ಹಿಮಾಂಶು ಗಡ್ಕೊಟಿ ಸ್ಪರ್ಧೆ ಮಾಡಿದ್ದರು. ಚಂಪಾವತ್ನಲ್ಲಿ ಮೇ 31ರಂದು ಮತದಾನ ನಡೆದಿತ್ತು. ಈ ವೇಳೆ ಶೇ. 64.5ರಷ್ಟು ಮತದಾನವಾಗಿತ್ತು.
-
Uttarakhand CM Pushkar Singh Dhami says BJP registers win in Champawat by-elections pic.twitter.com/lVtmyCoCMC
— ANI UP/Uttarakhand (@ANINewsUP) June 3, 2022 " class="align-text-top noRightClick twitterSection" data="
">Uttarakhand CM Pushkar Singh Dhami says BJP registers win in Champawat by-elections pic.twitter.com/lVtmyCoCMC
— ANI UP/Uttarakhand (@ANINewsUP) June 3, 2022Uttarakhand CM Pushkar Singh Dhami says BJP registers win in Champawat by-elections pic.twitter.com/lVtmyCoCMC
— ANI UP/Uttarakhand (@ANINewsUP) June 3, 2022
ಇಂದಿನ ಫಲಿತಾಂಶದಲ್ಲಿ ಮುಖ್ಯಮಂತ್ರಿ ಧಾಮಿ ಎದುರಾಳಿ ಕಾಂಗ್ರೆಸ್ನ ನಿರ್ಮಲಾ ವಿರುದ್ಧ 54 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಈ ಚುನಾವಣೆಯಲ್ಲಿ ನಿರ್ಮಲಾ ಠೇವಣಿ ಸಹ ಕಳೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಉಪಚುನಾವಣೆಯಲ್ಲಿ ಒಟ್ಟು 61,771 ಮತಗಳು ಚಲಾವಣೆಯಾಗಿದ್ದವು. 13ನೇ ಸುತ್ತಿನವರೆಗೆ 61 ಸಾವಿರಕ್ಕೂ ಹೆಚ್ಚು ಮತಗಳ ಎಣಿಕೆ ನಡೆದಿದೆ. ಸಿಎಂ ಧಾಮಿ 54 ಸಾವಿರಕ್ಕೂ ಹೆಚ್ಚು ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಹುಟ್ಟಿನಿಂದಲೇ ಮಗುವಿಗೆ 4 ಕೈ-4 ಕಾಲು: ನಟ ಸೋನು ಸೂದ್ ನೆರವಿನಿಂದ ಶಸ್ತ್ರಚಿಕಿತ್ಸೆ ಆರಂಭ
ವಿಧಾನಸಭೆ ಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ಸೋಲು ಕಾಣುತ್ತಿದ್ದಂತೆ ಚಂಪಾವತ್ನ ಶಾಸಕ ಕೈಲಾಶ್ ಹೆತ್ತೊರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿ, ಧಾಮಿ ಅವರ ಸ್ಪರ್ಧೆಗೆ ಅವಕಾಶ ಕಲ್ಪಿಸಿದ್ದರು. ಈ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಪ್ರಚಾರ ನಡೆಸಿದ್ದರು. ಇದೀಗ ಅದೃಷ್ಟ ಪರೀಕ್ಷೆಯಲ್ಲಿ ಗೆಲುವಿನ ನಗೆ ಬೀರಿರುವ ಧಾಮಿ, ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.