ETV Bharat / bharat

ಕಾರ್ತಿಕ್ ಪೂರ್ಣಿಮಾ: ಖರುನ್ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಸಿಎಂ

ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ಖರುನ್ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಕಾರ್ತಿಕ್ ಪೂರ್ಣಿಮಾವನ್ನು ಆಚರಿಸಿದರು.

CM Bhupesh Bagel who took a holy bath in Kharun river
ರಾಮ ಭಜನೆ ಮತ್ತು ಖರುನ್ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಭೂಪೇಶ್ ಬಾಗೆಲ್
author img

By

Published : Nov 30, 2020, 12:58 PM IST

ರಾಯಪುರ: ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ಕಾರ್ತಿಕ್ ಪೂರ್ಣಿಮಾದ ಹಿನ್ನೆಲೆ ಮಹಾದೇವ್ ಘಾಟ್‌ನಲ್ಲಿರುವ ಖರುನ್ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ನಂತರ ದೀಪ ದಾನ ಮಾಡಿದರು.

ರಾಮ ಭಜನೆ ಮತ್ತು ಖರುನ್ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಭೂಪೇಶ್ ಬಾಗೆಲ್

ನಿನ್ನೆ ಸಿಎಂ ಭೂಪೇಶ್ ಅವರು ಶಿವರಿನಾರಾಯಣ್‌ ಪ್ರವಾಸದಲ್ಲಿದ್ದರು. ಶಿವರಿನಾರಾಯಣ್‌ನಲ್ಲಿ ರಾಮ್ ಕಥಾ ಕಾರ್ಯಕ್ರಮವನ್ನು ಆಯೋಜಿಸಿದ ಹಿನ್ನೆಲೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಂಜೀರಾ ನುಡಿಸುವ ಮೂಲಕ ರಾಮ ಭಜನೆಯನ್ನು ಹಾಡಿದರು. ಈ ವೇಳೆ, ಕ್ಯಾಬಿನೆಟ್​ನ ಕೆಲ ಸಹೋದ್ಯೋಗಿಗಳು ಉಪಸ್ಥಿತರಿದ್ದರು.

ಇಂದು ದೇಶಾದ್ಯಂತ ಕಾರ್ತಿಕ್ ಪೂರ್ಣಿಮಾವನ್ನು ಸಂತಸದಿಂದ ಆಚರಿಸಲಾಗುತ್ತಿದ್ದು, ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ಖರುನ್ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ನಂತರ ಮಹಾದೇವ್ ಘಾಟ್‌ನಲ್ಲಿ ದೀಪ ದಾನ ಮಾಡಿದರು. ಜೊತೆಗೆ ನಾಡಿನ ಜನತೆಗೆ ಕಾರ್ತಿಕ್ ಪೂರ್ಣಿಮಾದ ಅಭಿನಂದನೆ ತಿಳಿಸಿದರು.

ಇದನ್ನೂ ಓದಿ: ಕನ್ಯಾಕುಮಾರಿಗೆ ಭೇಟಿ ನೀಡಿದ ಛತ್ತೀಸ್‌ಗಢದ ಸಿಎಂ ಭೂಪೇಶ್ ಬಾಗೆಲ್

ಈ ವೇಳೆ, ಶಾಸಕ ಮತ್ತು ಸಂಸದೀಯ ಕಾರ್ಯದರ್ಶಿ ವಿಕಾಸ್ ಉಪಾಧ್ಯಾಯ, ಮೇಯರ್ ಇಜಾಜ್ ಧೇಬರ್ ಮತ್ತು ಮಹಂತ್ ರಾಮ್ ಸುಂದರ್ ದಾಸ್ ಅವರು ಸಿಎಂಗೆ ಸಾಥ್​ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.