ETV Bharat / bharat

'ಗೌರ- ಗೌರಿ' ಪೂಜೆಯಲ್ಲಿ ಚಾಟಿ ಏಟು ತಿಂದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್​ - ಚಾಟಿ ಏಟು ತಿಂದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್​

ಜನರ ಕಲ್ಯಾಣಕ್ಕಾಗಿ 'ಗೌರ- ಗೌರಿ' ಪೂಜೆಯಲ್ಲಿ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್​ ಅವರು ಬುಡಕಟ್ಟು ಸಂಪ್ರದಾಯದ ಪ್ರಕಾರ ಚಾಟಿ ಏಟು ತಿಂದರು.

CM Baghel
'ಗೌರ- ಗೌರಿ' ಪೂಜೆಯಲ್ಲಿ ಚಾಟಿ ಏಟು ತಿಂದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್​
author img

By ETV Bharat Karnataka Team

Published : Nov 14, 2023, 9:19 AM IST

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಚುನಾವಣೆ ಕಾವು ಜೋರಾಗಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಸೋಮವಾರ ಜನರ ಕಲ್ಯಾಣಕ್ಕಾಗಿ 'ಗೌರ-ಗೌರಿ' ಪೂಜೆಯನ್ನು ನೆರವೇರಿಸಿದರು. ಮುಖ್ಯಮಂತ್ರಿ ಬಘೇಲ್ ಅವರು ದುರ್ಗ್ ಜಿಲ್ಲೆಯ ಜಾಂಜ್ಗೀರ್ ಗ್ರಾಮದಲ್ಲಿ ನಡೆದ 'ಗೌರ-ಗೌರಿ' ಪೂಜೆಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಅವರು ಬುಡಕಟ್ಟು ಸಂಪ್ರದಾಯದ ಪ್ರಕಾರ ತಮ್ಮ ಕೈಗಳಿಗೆ ಚಾಟಿಯಿಂದ ಹೊಡೆಸಿಕೊಂಡರು. ಭಕ್ತಾದಿಗಳು ಮತ್ತು ಜನರು ಪೂಜೆಯನ್ನು ವೀಕ್ಷಿಸಲು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

''ರಾಜ್ಯದ ಜನರ ಶ್ರೇಯೋಭಿವೃದ್ಧಿಗಾಗಿ ಚಾಟಿ ಏಟು ತಿಂದಿದ್ದೇನೆ'' ಎಂದು ಸಿಎಂ ಬಘೇಲ್ ಹೇಳಿದ್ದಾರೆ. "ಎಲ್ಲರ ಸಮೃದ್ಧಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. 'ಗೌರ-ಗೌರಿ' ಪೂಜೆಯನ್ನು ಪ್ರತಿಯೊಬ್ಬರೂ ಮಾಡುತ್ತಾರೆ. ಈ ಹಬ್ಬವು ಸಮಾನತೆಯ ಸಂಕೇತವಾಗಿರುವುದರಿಂದ ಎಲ್ಲಾ ಜನರು ಮುಂಜಾನೆಯೇ ಶಿವ ಹಾಗೂ ಪಾರ್ವತಿ ದೇವಿಯನ್ನು ಪೂಜಿಸುತ್ತಾರೆ" ಎಂದು ಬಾಘೇಲ್ ತಿಳಿಸಿದರು.

ಗೊಂಡ ಬುಡಕಟ್ಟು ಜನರು ದೀಪಾವಳಿ ಹಬ್ಬದ ಸಮಯದಲ್ಲಿ ಈ ಪೂಜೆಯನ್ನು ನೆರವೇರಿಸುತ್ತಾರೆ. ಮೊದಲು ನದಿ ದಂಡೆಗೆ ಹೋಗಿ ಜೇಡಿಮಣ್ಣು ಸಂಗ್ರಹಿಸುತ್ತಾರೆ. ಅದೇ ರಾತ್ರಿ ಒಬ್ಬರ ಮನೆಯಲ್ಲಿ ಗೌರ (ಶಿವ) ಮೂರ್ತಿಯನ್ನು ಮತ್ತು ಇನ್ನೊಬ್ಬರ ಮನೆಯಲ್ಲಿ ಗೌರಿಯ (ಪಾರ್ವತಿ ದೇವಿ) ಮೂರ್ತಿ ಸಿದ್ಧಪಡಿಸುತ್ತಾರೆ. ಆ ಬಳಿಕ ಶಿವ- ಪಾರ್ವತಿಯ ದಿವ್ಯ ವಿವಾಹ ನಡೆಯುತ್ತದೆ.

ಛತ್ತೀಸ್‌ಗಢದಲ್ಲಿ ನವೆಂಬರ್ 7 ರಂದು 20 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಉಳಿದ 70 ಸ್ಥಾನಗಳಿಗೆ ನವೆಂಬರ್ 17 ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ.

ದೀಪಾವಳಿ ಹಬ್ಬದಂದು ಗೃಹಲಕ್ಷ್ಮಿ ಯೋಜನೆ ಆರಂಭಿಸಲು ಸಿದ್ಧತೆ: ಗೃಹ ಲಕ್ಷ್ಮಿ ಯೋಜನೆಗೆ ತರಾತುರಿಯಲ್ಲಿ ಚಾಲನೆ ನೀಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ''ಛತ್ತೀಸ್‌ಗಢದ ಜನರಿಗೆ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಲಿದೆ. ಲಕ್ಷ್ಮಿ ಪೂಜೆಯ ದಿನದಂದು ಮಹಿಳೆಯರಿಗಾಗಿ ಗೃಹ ಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಘೋಷಿಸಿದೆ. ಅದಕ್ಕೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ'' ಎಂದು ತಿಳಿಸಿದರು.

ಪ್ರಧಾನಿ ಮೋದಿ ವಿರುದ್ಧ ಸಿಎಂ ಭೂಪೇಶ್ ಬಘೇಲ್ ವಾಗ್ದಾಳಿ: ಪ್ರಧಾನಿ ಮೋದಿ ಛತ್ತೀಸ್‌ಗಢ ಭೇಟಿಯ ಕುರಿತು ಸಿಎಂ ಭೂಪೇಶ್ ಬಘೇಲ್ ಮಾತನಾಡಿ, ''ಚುನಾವಣೆ ಇರುವವರೆಗೂ ಪ್ರಧಾನಿ ಮೋದಿ ಬರುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ. ಆದ್ರೆ, ಚುನಾವಣೆಗೂ ಮುನ್ನ ಛತ್ತೀಸ್‌ಗಢಕ್ಕೆ ಭೇಟಿ ನೀಡಿರಲಿಲ್ಲ. ರೈತರು ಮತ್ತು ಆದಿವಾಸಿಗಳು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದರ ಬಗ್ಗೆ ಅವರು ಗಮನಹರಿಸಿಲ್ಲ'' ಎಂದು ಕಿಡಿಕಾರಿದರು.

ಇದನ್ನೂ ಓದಿ: ಇಂದು ಮಕ್ಕಳ ದಿನಾಚರಣೆ: ಚಾಚಾ ನೆಹರು ಕುರಿತ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಯಿರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.