ನವದೆಹಲಿ : ಕೊರೊನಾ ಸೋಂಕಿನಿಂದ ಕಳೆದ ಕೆಲ ದಿನಗಳ ಹಿಂದೆ ಶಿಕ್ಷಕ ಶಿಯೋಜಿ ಮಿಶ್ರಾ ಎಂಬುವರು ಸಾವನ್ನಪ್ಪಿದ್ದರು. ಅವರ ಮನೆಗೆ ಭೇಟಿ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದು, 1 ಕೋಟಿ ರೂ. ಪರಿಹಾರದ ಚೆಕ್ ವಿತರಿಸಿದ್ದಾರೆ.
ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕು ಹೆಚ್ಚಾಗಿದೆ. ಈ ವೇಳೆ ಶಿಕ್ಷಕ ಶಿಯೋಜಿ ಮಿಶ್ರಾ ಸಾವನ್ನಪ್ಪಿದ್ದರು. ದೆಹಲಿಯಲ್ಲಿ ಫ್ರಂಟ್ಲೈನ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವವರು ಕೋವಿಡ್ನಿಂದ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ದೆಹಲಿ ಸರ್ಕಾರ 1 ಕೋಟಿ ರೂ. ಪರಿಹಾರ ಘೋಷಣೆ ಮಾಡಿದೆ.
-
Delhi: CM Arvind Kejriwal meets the family of Sheoji Mishra, a teacher who succumbed to #COVID19. He handed over a cheque of Rs 1 crore to them. pic.twitter.com/XIdXSpA1og
— ANI (@ANI) May 20, 2021 " class="align-text-top noRightClick twitterSection" data="
">Delhi: CM Arvind Kejriwal meets the family of Sheoji Mishra, a teacher who succumbed to #COVID19. He handed over a cheque of Rs 1 crore to them. pic.twitter.com/XIdXSpA1og
— ANI (@ANI) May 20, 2021Delhi: CM Arvind Kejriwal meets the family of Sheoji Mishra, a teacher who succumbed to #COVID19. He handed over a cheque of Rs 1 crore to them. pic.twitter.com/XIdXSpA1og
— ANI (@ANI) May 20, 2021
ದೆಹಲಿಯಲ್ಲಿ ಇಳಿಕೆಯಾದ ಕೋವಿಡ್
ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಕಠಿಣ ಲಾಕ್ಡೌನ್ ಜಾರಿಗೊಳಿಸಿರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದ್ದು, ಸದ್ಯ ಪಾಸಿಟಿವ್ ರೇಟ್ ಶೇ 5ಕ್ಕೆ ಇಳಿಕೆಯಾಗಿದೆ.
ದೆಹಲಿಯಲ್ಲಿಂದು ಕೇವಲ 3,231 ಸೋಂಕಿತ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 40,214 ಆಗಿದೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಪ್ರತಿದಿನ 20 ಸಾವಿರಕ್ಕೂ ಅಧಿಕ ಕೋವಿಡ್ ಸೋಂಕಿನ ಪ್ರಕರಣ ದಾಖಲಾಗುತ್ತಿದ್ದವು.