ಶ್ರೀನಗರ: ಅಮರನಾಥ ಗುಹೆಯ ಬಳಿಯ ಬೇಸ್ ಕ್ಯಾಂಪ್ನಲ್ಲಿ ಮೇಘ ಸ್ಫೋಟಗೊಂಡಿದೆ. ಈ ಹಿನ್ನೆಲೆ ಬೇಸ್ಕ್ಯಾಂಪ್ ಹಾನಿಯಾಗಿದ್ದು, ಸಾವುನೋವುಗಳು ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಸ್ಡಿಆರ್ಎಫ್ನ ಎರಡು ತಂಡಗಳು ಅಮರನಾಥ ಗುಹೆಯಲ್ಲಿವೆ ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿವೆ.
ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಅಮರನಾಥ ಯಾತ್ರೆ ಮುಂದೂಡಲ್ಪಟ್ಟಿದೆಯಾದರೂ ಭದ್ರತಾ ಪಡೆ ಸಿಬ್ಬಂದಿ, ಆರೋಗ್ಯ ಇಲಾಖೆ, ಇತರ ಇಲಾಖೆಗಳ ನೌಕರರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಕೇಂದ್ರ ಪ್ರಾಂತ್ಯದ ಲಡಾಖ್ನ ಕಾರ್ಗಿಲ್ ಪ್ರದೇಶದ ಎರಡು ಸ್ಥಳಗಳಲ್ಲಿ ಇದೇ ರೀತಿಯ ಘಟನೆಯಿಂದ ಸುಮಾರು ಒಂದು ಡಜನ್ ಮನೆಗಳು ಮತ್ತು ಬೆಳೆಗಳು ಹಾನಿಗೊಳಗಾಗಿದ್ದವು. ಆದರೆ ಈ ಬಾರಿ ಅಂತಹ ಅನಾಹುತಗಳು ಸಂಭವಿಸಿಲ್ಲ ಎನ್ನಲಾಗಿದೆ.