ETV Bharat / bharat

ಬಸ್‌ ಆಳ ಕಂದಕಕ್ಕೆ ಉರುಳದಂತೆ ತಡೆದ ಮರಗಳು; ಉತ್ತರಾಖಂಡದಲ್ಲಿ 18 ಪ್ರಯಾಣಿಕರು ಬಚಾವ್‌ - 18 ಜನರ ಪ್ರಾಣ ರಕ್ಷಿಸಿದ ಮರಗಳು

ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್​ವೊಂದು ಬ್ರೇಕ್​ ಫೇಲ್​ ಆಗಿ ಕಂದಕಕ್ಕೆ ಉರುಳಿತು. ಈ ವೇಳೆ ಮರಗಳು ಬಸ್​ಗೆ ಅಡ್ಡಲಾಗಿದ್ದರಿಂದ ಅನೇಕ ಜನರ ಪ್ರಾಣ ರಕ್ಷಣೆಯಾಗಿದೆ.

Bus accident in Salt of Almora
Bus accident in Salt of Almora
author img

By

Published : Jan 11, 2022, 6:51 PM IST

ಅಲ್ಮೋರಾ(ಉತ್ತರಾಖಂಡ): ಉತ್ತರಾಖಂಡ್​​ನ ಕಣಿವೆ ಪ್ರದೇಶದ ರಸ್ತೆಯೊಂದರಲ್ಲಿ ತೆರಳುತ್ತಿದ್ದ ವೇಳೆ ಬಸ್​ವೊಂದು ನಿಯಂತ್ರಣ ಕಳೆದುಕೊಂಡು ಏಕಾಏಕಿ ಉರುಳಿ ಬಿದ್ದಿದ್ದು, ಈ ವೇಳೆ ಕಣಿವೆಯಲ್ಲಿನ ಮರಗಳು ಬಸ್​ ಮತ್ತಷ್ಟು ಕೆಳಕ್ಕೆ ಉರುಳಿ ಹೋಗದಂತೆ ತಡೆಹಿಡಿದಿವೆ.

ಉತ್ತರಾಖಂಡದ ಅಲ್ಮೋರಾದಲ್ಲಿ ಈ ಘಟನೆ ನಡೆದಿದೆ. ಮರಗಳಿಂದಾಗಿ 18 ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ. ಹೀಗಾಗಿ ಸಂಭಾವ್ಯ ಅನಾಹುತ ತಪ್ಪಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಪುತ್ರ ಅಕಿರ್​​ ನಂದನ್​ಗೆ ಕೋವಿಡ್​

ರಾಮನಗರದಿಂದ ಸರೈಖೇತ್​ಗೆ ಈ ಬಸ್​ ತೆರಳುತ್ತಿತ್ತು. ದೋಟಿಯಾಲ್​ ಚೌಕ್​ನಲ್ಲಿ ನಿಲ್ಲಿಸಿ, ಪ್ರಯಾಣಿಕರೆಲ್ಲರೂ ಊಟ ಮಾಡಿದ್ದಾರೆ. ದೋಟಿಯಾಲ್​ ಚೌಕ್​​ನಿಂದ ಕೇವಲ 100 ಮೀಟರ್​ ದೂರ ಕ್ರಮಿಸುವಷ್ಟರಲ್ಲಿ ಬಸ್​ ಬ್ರೇಕ್​ ಫೇಲ್​​ ಆಗಿ ಕಂದಕಕ್ಕೆ ಉರುಳಿತು. ಈ ವೇಳೆ ಪೈನ್​ ಮರಗಳು ಬಸ್​ಗೆ ತಡೆಯಾಗಿವೆ. ಹೀಗಾಗಿ ಬಸ್​ ಮತ್ತಷ್ಟು ಆಳ ಕಂದಕಕ್ಕೆ ಹೋಗುವುದು ತಪ್ಪಿದೆ. ಪ್ರಯಾಣಿಕರೆಲ್ಲರೂ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.