ETV Bharat / bharat

ಎಐಎಡಿಎಂಕೆ ಚುಕ್ಕಾಣಿ ಹಿಡಿದ ಪಳನಿಸ್ವಾಮಿ; ಚೆನ್ನೈನಲ್ಲಿ ಪಕ್ಷದ ಬೆಂಬಲಿಗರಿಂದ ಮಾರಾಮಾರಿ - ಎಐಎಡಿಎಂಕೆ ಕಾರ್ಯಕರ್ತ ಮಧ್ಯೆ ಕಲ್ಲು ತೂರಾಟ

ಜನರಲ್ ಕೌನ್ಸಿಲ್ ಸಭೆಗೂ ಮುನ್ನ ಪಕ್ಷದ ನಾಯಕರಾದ ಇ.ಪಳನಿಸ್ವಾಮಿ ಮತ್ತು ಒ.ಪನ್ನೀರಸೆಲ್ವಂ ಬೆಂಬಲಿಗರು ಪ್ರಧಾನ ಕಚೇರಿಯ ಮುಂದೆ ಸಾಕ್ಷಾತ್‌ ರೌದ್ರಾವತಾರ ತಾಳಿದರು. ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದರು. ತಮಿಳುನಾಡಿನ ಸದ್ಯದ ರಾಜಕೀಯ ಚಿತ್ರಣ ಇಲ್ಲಿದೆ.

Clash outside AIADMK headquarters in TN  supporters of party leaders E Palaniswami  O Panneerselvam burn posters and banners  TamilNadu AIADMK party news  ತಮಿಳುನಾಡಿನ ಏಕ ನಾಯಕತ್ವದ ಕೂಗು  ಸಭೆಗೆ ಹೈಕೋರ್ಟ್​ ಗ್ರೀನ್​ ಸಿಗ್ನಲ್  ಎಐಎಡಿಎಂಕೆ ಕಾರ್ಯಕರ್ತ ಮಧ್ಯೆ ಕಲ್ಲು ತೂರಾಟ  ತಮಿಳುನಾಡು ಸುದ್ದಿ
ಕಾರ್ಯಕರ್ತ ಮಧ್ಯೆ ಕಲ್ಲು ತೂರಾಟ
author img

By

Published : Jul 11, 2022, 10:26 AM IST

Updated : Jul 11, 2022, 12:10 PM IST

ಚೆನ್ನೈ(ತಮಿಳುನಾಡು): ಇಂದು ಎಐಎಡಿಎಂಕೆ ಪಕ್ಷದ ಮಹತ್ವದ ಜನರಲ್ ಕೌನ್ಸಿಲ್ ಸಭೆ ನಡೆಯುತ್ತಿದೆ. ಇದಕ್ಕೂ ಮುನ್ನ ಮದ್ರಾಸ್​ ಹೈಕೋರ್ಟ್​ ಈ ಸಭೆಗೆ ಸಮ್ಮತಿ ಸೂಚಿಸಿತ್ತು. ಈ ಮೂಲಕ ಪಕ್ಷದ ಇನ್ನೊಂದು ಬಣ ಒ.ಪನ್ನೀರಸೆಲ್ವಂಗೆ ಭಾರಿ ಹಿನ್ನಡೆಯಾಗಿದೆ. ಇದರಿಂದ ಆಕ್ರೋಶಗೊಂಡ ಒ.ಪನ್ನೀರಸೆಲ್ವಂ ಬೆಂಬಲಿಗರು ಇ.ಪಳನಿಸ್ವಾಮಿ ಕಾರ್ಯಕರ್ತರ ಜೊತೆ ಸಂಘರ್ಷಕ್ಕಿಳಿದರು.

ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಆಯ್ಕೆ, ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ಪ್ರಸ್ತಾಪಿಸುವ ಸಭೆ ಇಂದು ನಡೆಯುತ್ತಿದೆ. ಇದಕ್ಕೂ ಮುನ್ನ ಚೆನ್ನೈನ ಎಐಎಡಿಎಂಕೆ ಕೇಂದ್ರ ಕಚೇರಿಯ ಹೊರಗೆ ಇಬ್ಬರು ನಾಯಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆಯಿತು. ಒಂದೇ ಪಕ್ಷದ ನಾಯಕರಿಬ್ಬರ ಬೆಂಬಲಿಗರು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದರು.

ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಪ್ರಬಲ ಬಣಕ್ಕೆ ಎಐಎಡಿಎಂಕೆ ಪಕ್ಷದ ನಾಯಕತ್ವ ಸಿಕ್ಕಿದೆ. ಆದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪನ್ನೀರಸೆಲ್ವಂ ಬಣ ಎಐಎಡಿಎಂಕೆ ಕಚೇರಿ ಹೊರಗೆ ಸಂಘರ್ಷಕ್ಕಿಳಿಯಿತು.

ಇದನ್ನೂ ಓದಿ: ಏಕನಾಯಕತ್ವದ ಕೂಗು.. ಎಐಎಡಿಎಂಕೆ ಸಭೆಯಿಂದ ಹೊರನಡೆದ ಪನ್ನೀರ್​​ ಸೆಲ್ವಂ

ಇಬ್ಬರು ನಾಯಕರ ಬೆಂಬಲಿಗರು ಮತ್ತು ಎಐಎಡಿಎಂಕೆ ಧ್ವಜಗಳನ್ನು ಹೊತ್ತ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆಯಿತು. ಈ ಸಂದರ್ಭದಲ್ಲಿ ಉದ್ರಿಕ್ತರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಕೆಲವರು ರಸ್ತೆಬದಿ ನಿಲ್ಲಿಸಿದ ವಾಹನಗಳನ್ನು ಜಖಂಗೊಳಿಸಿದರು. ಅನೇಕ ಕಾರ್ಯಕರ್ತರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜುಲೈ 11 ಎಐಎಡಿಎಂಕೆ ಸಾಮಾನ್ಯ ಸಭೆ ವಿವಾದ: ವಿಚಾರಣೆಗೆ ಒಪ್ಪಿಕೊಂಡ ಮದ್ರಾಸ್​ ಹೈಕೋರ್ಟ್​

Last Updated : Jul 11, 2022, 12:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.