ETV Bharat / bharat

ಜೈ ಶ್ರೀ ರಾಮ್​ ಘೋಷಣೆ: ಬಿಜೆಪಿ - ಟಿಎಂಸಿ ಕಾರ್ಯಕರ್ತರ ನಡುವೆ ಹೊಡೆದಾಟ! - ಟಿಎಂಸಿ-ಬಿಜೆಪಿ ನಡುವೆ ಫೈಟ್​​

ಪಶ್ಚಿಮ ಬಂಗಾಳದಲ್ಲಿ 6ನೇ ಹಂತದ ಮತದಾನ ನಡೆಯುತ್ತಿದ್ದು, ಇದರ ಮಧ್ಯೆ ಬಿಜೆಪಿ - ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟವಾಗಿರುವ ಘಟನೆ ನಡೆದಿದೆ.

TMC-BJP Fight
TMC-BJP Fight
author img

By

Published : Apr 22, 2021, 3:42 PM IST

ಬರಾಕ್​ಪೋರ್​(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವಿಧಾನಸಭೆಯ ಕೆಲವೊಂದು ಸ್ಥಾನಗಳಿಗೆ ಇಂದು 6ನೇ ಹಂತದ ಮತದಾನ ನಡೆಯುತ್ತಿದ್ದು, ಇದರ ಮಧ್ಯೆ ಟಿಎಂಸಿ - ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ಕೈ-ಕೈ ಮಿಲಾಯಿಸಿದ್ದಾರೆ.

ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಹೊಡೆದಾಟ

ಪಶ್ಚಿಮ ಬಂಗಾಳದ ಬರಾಕ್​ಪೋರ್​​​​ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಶಂಖಾರಿಪರಾ ಪ್ರದೇಶದಲ್ಲಿ ಪುರಸಭೆ ಆಡಳಿತಾಧಿಕಾರಿ ಉತ್ತಮದಾಸ್ ತಮ್ಮ ಸಹಚರರೊಂದಿಗೆ ಮತದಾ ಕೇಂದ್ರದತ್ತ ತೆರಳುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀ ರಾಮ್​ ಘೋಷಣೆ ಕೂಗಿದ್ದಾರೆ. ಮತದಾನ ಮಾಡಿ ವಾಪಸ್​ ಬರುವ ವೇಳೆ ಟಿಎಂಸಿ - ಬಿಜೆಪಿ ಕಾರ್ಯಕರ್ತರು ಘರ್ಷಣೆ ನಡೆದಿದೆ. ಘಟನೆಯಿಂದ ಎರಡು ಪಕ್ಷದ ನಾಲ್ವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್​ ಹಾಕಿಸಿಕೊಳ್ಳಲು ಬಂದ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ದಿಢೀರ್​ ದಾಳಿ!

ಪಶ್ಚಿಮ ಬಂಗಾಳದ 394 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನವಾಗುತ್ತಿದ್ದು, ಈಗಾಗಲೇ ಐದು ಹಂತ ಮುಕ್ತಾಯಗೊಂಡಿದೆ. ಇಂದು ಆರನೇ ಹಂತ ನಡೆಯುತ್ತಿದ್ದು, ಕೆಲವೊಂದು ಮತಗಟ್ಟೆಗಳ ಬಳಿ ಬಿಜೆಪಿ - ಟಿಎಂಸಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿರುವ ಬಗ್ಗೆ ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.