ETV Bharat / bharat

ಮೇಕೆ ವಿಚಾರಕ್ಕಾಗಿ ಎರಡು ಗುಂಪುಗಳ ನಡುವೆ ಗಲಾಟೆ.. ಪರಿಸ್ಥಿತಿ ಉದ್ವಿಗ್ನ - ನಿವಾಸಿಗಳು ಪ್ರತಿಭಟನೆ

ಇಲ್ಲಿನ ನಿವಾಸಿಯೊಬ್ಬರು ಎರಡು ಮೇಕೆಗಳನ್ನು ತಂದಿದ್ದರು, ಇದುವೇ ವಸತಿ ಕಟ್ಟಡದಲ್ಲಿ ಗಲಾಟೆಗೆ ಕಾರಣವಾಗಿದೆ.

Clash between two communities over the issue of Bakrid goat
ಎರಡು ಸಮುದಾಯಗಳ ನಡುವೆ ಗಲಾಟೆ
author img

By

Published : Jun 28, 2023, 1:56 PM IST

ಮೇಕೆ ವಿಚಾರಕ್ಕಾಗಿ ಎರಡು ಗುಂಪುಗಳ ನಡುವೆ ಗಲಾಟೆ.. ಪರಿಸ್ಥಿತಿ ಉದ್ವಿಗ್ನ

ಮೀರಾರೋಡ್ (ಮಹಾರಾಷ್ಟ್ರ): ಮುಂಬೈನ ಹೊರವಲಯದ ಮೀರಾ ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಮೇಕೆ ವಿಷಯಕ್ಕೆ ವಿವಾದದ ಸೃಷ್ಟಿಯಾದ ಘಟನೆ ನಡೆದಿದೆ. ಒಂದು ಗುಂಪು ಬಕ್ರೀದ್​ಗಾಗಿ ವಸತಿ ಕಟ್ಟಡಕ್ಕೆ ಮೇಕೆಯನ್ನು ತಂದಿದ್ದು, ಇದಕ್ಕೆ ಇತರ ಸಮಾಜದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ವಿರೋಧ ವ್ಯಕ್ತಪಡಿಸಲು ಮತ್ತೊಂದು ಸಮಾಜದ ನಿವಾಸಿಗಳು ಹಾಗೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜೋರಾಗಿ ಘೋಷಣೆ ಕೂಗಿದ ಘಟನೆ ನಡೆದಿದೆ.

ಜೆಪಿ ಇನ್ಫ್ರಾ ಮಿರಾರೋಡ್ ಪೂರ್ವದಲ್ಲಿರುವ ಒಂದು ಪ್ರತಿಷ್ಠಿತ ವಸತಿ ಕಟ್ಟಡದಲ್ಲಿ 400ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿವೆ. ಇಲ್ಲಿ ವಿವಿಧ ಜಾತಿ - ಧರ್ಮದ ಜನರು ವಾಸಿಸುತ್ತಿದ್ದು, ಸೋಮವಾರ ಮಧ್ಯಾಹ್ನ ಅಪಾರ್ಟ್​ಮೆಂಟ್​​​​ನ ವ್ಯಕ್ತಿಯೊಬ್ಬರು ಎರಡು ಮೇಕೆಗಳನ್ನು ಮನೆಗೆ ತಂದಿದ್ದು, ಇದನ್ನು ವಿರೋಧಿಸಿ ಇನ್ನೊಂದು ಸಮಾಜದ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ನಾವು ಮೇಕೆ ಬಲಿ ಕೊಡುವುದಿಲ್ಲ ಎಂದು ಮೇಕೆ ತಂದ ವ್ಯಕ್ತಿ ಹೇಳಿದರೂ ಇನ್ನೊಂದು ಗುಂಪು ಪ್ರತಿಭಟನೆ ಮುಂದುವರಿಸಿತ್ತು.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದ ಸಮಾಜದವರಿಗೆ ಮನವರಿಕೆ ಮಾಡಲು ಯತ್ನಿಸಿದರೂ, ಆ ಗುಂಪು ಅದನ್ನು ಕೇಳಲು ತಯಾರಿಲ್ಲದೇ ಕೆಲ ಕಾಲ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಉಂಟಾಗಿತ್ತು. ಒಂದು ಗುಂಪಿನ ನಿವಾಸಗಳಲ್ಲಿ ಕುರ್ಬಾನಿ ಆಚರಣೆಗಳನ್ನು ಮಾಡುವುದರ ವಿರುದ್ಧದ ಇನ್ನೊಂದು ಸಮುದಾಯ ಪ್ರತಿಭಟನೆ ಮಾಡಿದೆ.

ವಸತಿ ಸಮುಚ್ಛಯದಲ್ಲಿ ವಾಸವಿರುವ ವ್ಯಕ್ತಿ ಮಂಗಳವಾರ ರಾತ್ರಿ 8.30 ರ ಸುಮಾರಿಗೆ ಕುಟುಂಬ ಸಮೇತ ಕಾಂಪ್ಲೆಕ್ಸ್‌ಗೆ ಬರುತ್ತಿದ್ದಾಗ ಭದ್ರತಾ ಸಿಬ್ಬಂದಿ ಗೇಟ್ ಬಳಿ ನಿಲ್ಲಿಸಿ ವಾಹನವನ್ನು ಪರಿಶೀಲಿಸಿದ್ದಾರೆ. ಆಗ ಅಲ್ಲಿ ವಾಸವಿದ್ದ ಇನ್ನೊಂದು ಗುಂಪಿನ ನಿವಾಸಿಗಳೆಲ್ಲ ಮನೆಯಿಂದ ಹೊರಗೆ ಬಂದು ಆ ವ್ಯಕ್ತಿ ಜತೆ ವಾಗ್ವಾದಕ್ಕಿಳಿದಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು​ ಭೇಟಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಕಟ್ಟಡದಲ್ಲಿದ್ದ 200ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಗಲಾಟೆ ಸೃಷ್ಟಿಸಿ ಘೋಷಣೆ ಕೂಗಿದ್ದಾರೆ. ಸಂಬಂಧಪಟ್ಟವರು ಎರಡು ಮೇಕೆಗಳನ್ನು ಮನೆಯಿಂದ ಹೊರತರುವವರೆಗೂ ನಾವು ಮನೆಗೆ ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಕ್ರಮಣಕಾರಿ ವರ್ತನೆಯಿಂದ ವಾತಾವರಣ ಬಿಗಡಾಯಿಸಿದ್ದು, ಈ ವೇಳೆ ಕೆಲ ನಾಗರಿಕರು ಗಲಾಟೆ ಮಾಡಿ ಪೊಲೀಸರನ್ನು ತಳ್ಳಿರುವ ಘಟನೆಯೂ ನಡೆದಿದೆ.

ಉಪ ಪೊಲೀಸ್ ಆಯುಕ್ತ ಜಯಂತ್ ಬಜಬಲೆ ಪ್ರಕಾಶ್ ಗಾಯಕವಾಡ ಅವರು ವಸತಿ ಕಟ್ಟಡದ ಕೆಲ ಪ್ರಮುಖರೊಂದಿಗೆ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು. ಆದರೆ, ಈ ಚರ್ಚೆಯಿಂದ ಯಾವುದೇ ಪ್ರಯೋಜನವಾಗಲಿಲ್ಲ. ಮಧ್ಯರಾತ್ರಿ ಮೂರು ಗಂಟೆಯವರೆಗೂ ಉದ್ವಿಗ್ನತೆ ಉಂಟಾಗಿದ್ದರಿಂದ ಗಲಭೆ ನಿಯಂತ್ರಣ ದಳ ಹಾಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸದ್ಯ ವಾತಾವರಣ ಶಾಂತವಾಗಿದ್ದು, ಪೊಲೀಸ್ ಆಡಳಿತ ಈಗ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ: '7 ಸ್ಟಾರ್ ಸುಲ್ತಾನ' ಕುರುಬಾನಿ ಕೊಡದಿರಲು ನಿರ್ಧಾರ: ಫಲಿಸಿತು 'ಟಗರು ಪಲ್ಯ' ಚಿತ್ರತಂಡದ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.