ETV Bharat / bharat

ವಿದ್ಯಾರ್ಥಿಗಳ ಮಧ್ಯೆ ಲವ್​ ತಗಾದೆ.. ಆಕೆಗಾಗಿ ಬಸ್​ ಏರಿ ಚಾಕು ಚುಚ್ಚಿದ ಯುವಕ! - ವಿಜಯನಗರ ಅಪರಾಧ ಸುದ್ದಿ

ವಿದ್ಯಾರ್ಥಿಗಳ ಮಧ್ಯೆ ಲವ್ ತಗಾದೆ ನಡೆಯುತ್ತಿದ್ದು, ಯುವಕನೋರ್ವ ಬಸ್​ ಹತ್ತಿ ಚಾಕುವಿನಿಂದ ಮತ್ತೋರ್ವ ಯುವಕನಿಗೆ ಇರಿದಿರುವ ಘಟನೆ ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

clash between students, clash between students and attack with knife, clash between students and attack with knife in vizianagaram, vizianagaram crime news, vizianagaram crime 2021 news, ವಿದ್ಯಾರ್ಥಿಗಳ ಮಧ್ಯೆ ಗಲಾಟೆ, ವಿದ್ಯಾರ್ಥಿಗಳ ಮಧ್ಯೆ ಗಲಾಟೆ ಮತ್ತು ಚಾಕುವಿನಿಂದ ದಾಳಿ, ವಿಜಯನಗರದಲ್ಲಿ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ಮತ್ತು ಚಾಕುವಿನಿಂದ ದಾಳಿ, ವಿಜಯನಗರ ಅಪರಾಧ ಸುದ್ದಿ, ವಿಜಯನಗರ ಅಪರಾಧ 2021 ಸುದ್ದಿ,
ವಿದ್ಯಾರ್ಥಿಗಳ ಮಧ್ಯೆ ಲವ್​ ತಗಾದೆ
author img

By

Published : Feb 13, 2021, 11:13 AM IST

ವಿಜಯನಗರ: ಲವ್​ ವಿವಾದ ಹಿನ್ನೆಲೆ ಇಬ್ಬರು ಡಿಗ್ರಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಲ್ಲಿ ವಿದ್ಯಾರ್ಥಿವೋರ್ವ ಚಾಕುವಿನ ದಾಳಿಗೊಳಾಗಿರುವ ಘಟನೆ ಗಜಪತಿನಗರದಲ್ಲಿ ನಡೆದಿದೆ.

ನಾಲ್ಕು ದಿನಗಳಿಂದ ಕರ್ರಿ ಚೇತನ್​ ಮತ್ತು ಸಿಂಹಾದ್ರಿ ಮುರುಳಿ ಮಧ್ಯೆ ಲವ್​ ವಿವಾದ ನಡೆದಿತ್ತು ಎನ್ನಲಾಗ್ತಿದೆ. ಈ ವಿಷಯ ಮುರಳಿಗೆ ತಲೆಗೆಡಿಸಿತ್ತು. ಹೀಗಾಗಿ ಚೇತನ್​ ಮೇಲೆ ಹಲ್ಲೆ ನಡೆಸಲು ಸಜ್ಜಾಗಿದ್ದ.

ಗಜಪತಿನಗರದಲ್ಲಿರುವ ಕಾಲೇಜ್ ಸಮಯ​ ಮುಗಿಸಿಕೊಂಡು ಮನೆಗೆ ತೆರಳಲು ಚೇತನ್​ ಬಸ್​ ಹತ್ತಿದ್ದಾನೆ. ಮುರಳಿ ಮುಂದಿನ ನಿಲ್ದಾಣ ಅಂದ್ರೆ ಕೊತ್ತರೋಡ್ಡು ಬಳಿ ಬಸ್​ ಹತ್ತಿದ್ದಾನೆ. ಮತ್ತೆ ಇಬ್ಬರ ಮಧ್ಯೆ ಬಸ್​ನಲ್ಲಿ ಜಗಳವಾಗಿದೆ. ಈ ವೇಳೆ ಮುರಳಿ ತಾನೂ ತಂದಿದ್ದ ಚಾಕುವಿನಿಂದ ಚೇತನ್​ಗೆ ಚುಚ್ಚಿ ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಚೇತನನ್ನು ಬಸ್​ ಪ್ರಯಾಣಿಕರು ಮತ್ತು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಚೇತನ್​ ಪಾರಾಗಿದ್ದಾನೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಬಳಿಕವೇ ಅಸಲಿ ವಿಷಯ ಹೊರ ಬೀಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.