ಪುರಿ(ಒಡಿಶಾ) : ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಇಲ್ಲಿನ ಜಗನ್ನಾಥ ದೇವಸ್ಥಾನದಲ್ಲಿ ಶನಿವಾರ ಪ್ರಾರ್ಥನೆ ಸಲ್ಲಿಸಿದರು. ಎರಡು ದಿನಗಳ ಒಡಿಶಾ ಪ್ರವಾಸದಲ್ಲಿರುವ ಸಿಜೆಐ ರಮಣ ಅವರು, ತಮ್ಮ ಕುಟುಂಬ ಸದಸ್ಯರು ಮತ್ತು ಇತರ ನ್ಯಾಯಾಧೀಶರು ಜೊತೆಗೆ ದೇವರ ದರ್ಶನ ಪಡೆದರು.
ಅವರನ್ನು ಸಿಂಗಾದ್ವಾರ ದೇವಸ್ಥಾನದಲ್ಲಿ ಮುಖ್ಯ ಆಡಳಿತಾಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಸ್ವಾಗತಿಸಿದರು. ಪುರಿ ಜಗನ್ನಾಥ ದೇವಸ್ಥಾನದಲ್ಲಿ ಸುಮಾರು 45 ನಿಮಿಷಗಳವರೆಗೆ ಕಾಲ ಕಳೆದರು.
ಬಳಿಕ ಮುಖ್ಯ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಕಟಕ್‌ಗೆ ತೆರಳಿದರು. ಒಡಿಶಾ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಹೊಸ ಕಟ್ಟಡವನ್ನು ರಮಣ ಉದ್ಘಾಟಿಸಿದರು. ಶನಿವಾರ ಸಂಜೆ ದೆಹಲಿಗೆ ತೆರಳಲಿದ್ದು, ಇದಕ್ಕೂ ಮುನ್ನ ನಗರದಲ್ಲಿ ಇನ್ನೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಓದಿ: ಕಪಿಲ್ ಶರ್ಮಾಗೆ ವಂಚನೆ ಪ್ರಕರಣ: ಕಾರು ಡಿಸೈನರ್ ದಿಲೀಪ್ ಛಾಬ್ರಿಯಾ ಪುತ್ರನ ಬಂಧನ