ETV Bharat / bharat

Cinematograph Bill: ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ ಅಂಗೀಕಾರ; ಪೈರಸಿಗೆ 3 ವರ್ಷ ಜೈಲು ಶಿಕ್ಷೆ ಅವಕಾಶ

author img

By

Published : Jul 31, 2023, 7:22 PM IST

Cinematograph Bill: ಪ್ರತಿಪಕ್ಷಗಳ ಬಾರಿ ಪ್ರತಿಭಟನೆಯ ಮಧ್ಯೆ ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಇಂದು ಪಾಸ್ ಆಗಿದೆ.

LS passes Cinematograph (Amendment) Bill

ನವದೆಹಲಿ : ಚಲನಚಿತ್ರ ಪೈರಸಿಯನ್ನು ತಡೆಗಟ್ಟುವ ಮತ್ತು ದೂರದರ್ಶನ ಅಥವಾ ಇತರ ಮಾಧ್ಯಮಗಳಲ್ಲಿ ಪ್ರದರ್ಶನವಾಗುವ ಚಲನಚಿತ್ರಗಳಿಗೆ ಪ್ರತ್ಯೇಕ ಪ್ರಮಾಣಪತ್ರಗಳನ್ನು ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಹೆಚ್ಚಿನ ಅಧಿಕಾರವನ್ನು ನೀಡುವ ಉದ್ದೇಶ ಹೊಂದಿರುವ ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023 ಅನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ.

ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿ ಮತ್ತು ಪ್ರತಿಕ್ರಿಯೆಯನ್ನು ಕೋರಿ ಪ್ರತಿಪಕ್ಷಗಳು ಸದನದ ಬಾವಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಅರ್ಧ ಗಂಟೆಯೊಳಗೆ ಸಂಕ್ಷಿಪ್ತ ಚರ್ಚೆಯ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು. ಸಭಾಪತಿ ಕಿರಿತ್ ಸೋಲಂಕಿ ಅವರು ಮಸೂದೆ ಅಂಗೀಕಾರದ ನಂತರ ಸದನವನ್ನು ಮರುದಿನಕ್ಕೆ ಮುಂದೂಡಿದರು. ಮಸೂದೆಯು ಸಿನಿಮಾಟೋಗ್ರಾಫ್ ಕಾಯಿದೆ, 1952ಕ್ಕೆ ತಿದ್ದುಪಡಿ ತರಲಿದೆ. ಈ ಮಸೂದೆಯನ್ನು ರಾಜ್ಯಸಭೆ ಕಳೆದ ವಾರ ಅಂಗೀಕರಿಸಿತ್ತು.

ಲೋಕಸಭೆಯಲ್ಲಿ ಮಸೂದೆಯನ್ನು ಮಂಡನೆ ಮಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಭಾರತವು ವಿಶ್ವದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಯಾಗಿದೆ. ಇಲ್ಲಿ ಹೆಚ್ಚಿನ ಚಲನಚಿತ್ರಗಳನ್ನು ತಯಾರಿಸಲಾಗುತ್ತದೆ. "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರ ಮತ್ತು "ಆರ್ ಆರ್​ ಆರ್​" ನಂತಹ ದಕ್ಷಿಣ ಭಾರತೀಯ ಚಲನಚಿತ್ರಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಹೆಸರು ಮಾಡಿವೆ ಮತ್ತು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ಇದು ವಿಶ್ವ ಚಿತ್ರರಂಗದಲ್ಲಿ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

ಈ ಮಸೂದೆಯ ಮೂಲಕ ಸರ್ಕಾರವು ಪೈರಸಿಯನ್ನು ನಿಗ್ರಹಿಸಲು ಉದ್ದೇಶಿಸಿದೆ. ಸಾಕಷ್ಟು ಶ್ರಮವಹಿಸಿ ಚಲನಚಿತ್ರವನ್ನು ನಿರ್ಮಿಸುವ ಚಲನಚಿತ್ರ ತಯಾರಕರಿಗೆ ಪೈರಸಿಯಿಂದ ದೊಡ್ಡ ಹಾನಿಯಾಗುತ್ತಿದೆ. ಚಿತ್ರದ ಕಾಪಿಗಳು ಸೋರಿಕೆಯಾದಾಗ ಎಲ್ಲವೂ ವ್ಯರ್ಥವಾಗುತ್ತದೆ ಎಂದು ಠಾಕೂರ್ ಹೇಳಿದರು. ಪ್ರತಿಭಟನಾ ನಿರತ ವಿಪಕ್ಷ ಸದಸ್ಯರನ್ನು ಟೀಕಿಸಿದ ಸಚಿವರು, ಭಾರತೀಯ ಚಿತ್ರರಂಗದ ಹಿತದೃಷ್ಟಿಯಿಂದ ಇರುವ ಮಸೂದೆ ಬಗ್ಗೆ ಪ್ರತಿಪಕ್ಷಗಳು ಆಸಕ್ತಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಸೂದೆಯು ಚಲನಚಿತ್ರ ಪೈರಸಿಯನ್ನು ತಡೆಗಟ್ಟುವ ಉದ್ದೇಶ ಹೊಂದಿದೆ ಮತ್ತು ದೂರದರ್ಶನ ಅಥವಾ ಇತರ ಯಾವುದೇ ಮಾಧ್ಯಮದಲ್ಲಿ ಚಲನಚಿತ್ರದ ಪ್ರದರ್ಶನಕ್ಕಾಗಿ ಪ್ರತ್ಯೇಕ ಪ್ರಮಾಣಪತ್ರಗಳನ್ನು ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಹೆಚ್ಚಿನ ಅಧಿಕಾರವನ್ನು ನೀಡುವ ಗುರಿಯನ್ನು ಹೊಂದಿದೆ. ಹೊಸ ಕಾಯ್ದೆಯ ಪ್ರಕಾರ ಚಲನಚಿತ್ರ ಪೈರಸಿ ಮಾಡುವವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು ಮತ್ತು ಅದರ ಪೈರೇಟೆಡ್ ಪ್ರತಿಗಳನ್ನು ಮಾಡುವವರಿಗೆ ಚಲನಚಿತ್ರದ ನಿರ್ಮಾಣ ವೆಚ್ಚದ 5 ಪ್ರತಿಶತದವರೆಗೆ ದಂಡ ವಿಧಿಸಬಹುದು.

ಹೊಸ ಕಾಯ್ದೆಯ ಪ್ರಕಾರ 'UA' ವರ್ಗದ ಅಡಿಯಲ್ಲಿ ಮೂರು ಪ್ರಮಾಣೀಕರಣಗಳನ್ನು ನೀಡಲಾಗಿದೆ. ಅವು ಯಾವುವೆಂದರೆ- UA 7+, UA 13+ ಮತ್ತು UA 16+. ಅಂದರೆ ನಿರ್ದಿಷ್ಟ ವಯಸ್ಸಿನ ಮಿತಿಗಳಿಗಿಂತ ಕಿರಿಯ ಮಕ್ಕಳು ಪೋಷಕರ ಮಾರ್ಗದರ್ಶನದೊಂದಿಗೆ ಅಂಥ ಚಲನಚಿತ್ರಗಳನ್ನು ವೀಕ್ಷಿಸಬಹುದು.

ಇದನ್ನೂ ಓದಿ : Mystery Object: ಆಸ್ಟ್ರೇಲಿಯಾ ಸಮುದ್ರದಲ್ಲಿ ಪತ್ತೆಯಾದ ನಿಗೂಢ ವಸ್ತು ಭಾರತಕ್ಕೆ ಸೇರಿದ್ದಾ? ಇಸ್ರೊ ಹೇಳುವುದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.