ETV Bharat / bharat

ಕ್ರಿಸ್ಮಸ್-ಹೊಸ ವರ್ಷದ ಬಂಪರ್ ಲಾಟರಿ ಖರೀದಿಸಿ 12 ಕೋಟಿ ಗೆದ್ದ ಪೇಂಟರ್​​ ! - C N Sadanandan of Aymanam on the Kottayam town bought the winning ticket

ಕೊಟ್ಟಾಯಂ ಪಟ್ಟಣದ ಐಮನಂನ ಸಿ ಎನ್ ಸದಾನಂದನ್ ಅವರು ಮನೆಗೆ ಮಾಂಸವನ್ನು ಖರೀದಿಸಿ ಹಿಂದಿರುಗುತ್ತಿದ್ದಾಗ ತಮ್ಮ ಸ್ನೇಹಿತ ಹಾಗೂ ಲಾಟರಿ ಏಜೆಂಟ್ ಸೆಲ್ವಕುಮಾರ್ ಅವರಿಂದ ಈ ಲಾಟರಿ ಖರೀದಿ ಮಾಡಿದ್ದರು.

ಕ್ರಿಸ್ಮಸ್-ಹೊಸ ವರ್ಷದ ಬಂಪರ್ ಲಾಟರಿ ಖರೀದಿಸಿ 12 ಕೋಟಿ ಗೆದ್ದ ಪೇಂಟರ್​​ !

author img

By

Published : Jan 18, 2022, 5:35 AM IST

ಕೊಟ್ಟಾಯಂ: ಇಲ್ಲೋರ್ವ ಕಾರ್ಮಿಕ ಬರೋಬ್ಬರಿ 12 ಕೋಟಿ ರೂ. ಗಳನ್ನು ಲಾಟರಿ ಮೂಲಕ ಗೆದ್ದಿದ್ದಾರೆ. ಸದಾನಂದನ್ ಎಂಬುವರು ಕ್ರಿಸ್‌ಮಸ್-ಹೊಸ ವರ್ಷದ ಬಂಪರ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು.

ಕೊಟ್ಟಾಯಂ ಪಟ್ಟಣದ ಐಮನಂನ ಸಿ ಎನ್ ಸದಾನಂದನ್ ಅವರು ಮನೆಗೆ ಮಾಂಸವನ್ನು ಖರೀದಿಸಿ ಹಿಂದಿರುಗುತ್ತಿದ್ದಾಗ ತಮ್ಮ ಸ್ನೇಹಿತ ಹಾಗೂ ಲಾಟರಿ ಏಜೆಂಟ್ ಸೆಲ್ವಕುಮಾರ್ ಅವರಿಂದ ಈ ಲಾಟರಿ ಖರೀದಿ ಮಾಡಿದ್ದರು.

ಮಧ್ಯಾಹ್ನ 3 ಗಂಟೆ ವೇಳೆಗೆ ಅವರಿಗೆ ಪ್ರಥಮ ಬಹುಮಾನ ಬಂದಿರುವುದು ತಿಳಿದಿದೆ. ಇನ್ನು ವಿಜೇತ ಪಟ್ಟಿಯನ್ನು ಬಿಡುಗಡೆ ಮಾಡುವ 5 ಗಂಟೆಗಳ ಮುನ್ನ ಲಾಟರಿ ಖರೀದಿ ಮಾಡಿದ್ದರು. ಇದೆಲ್ಲವೂ ಪರಮಾತ್ಮನ ಆಶೀರ್ವಾದದಿಂದಾಗಿ ಬಂದಿದೆ. ನನ್ನ ಮಕ್ಕಳು ಸಾಲಗಾರರಾಗಿದ್ದಾರೆ, ಅದನ್ನು ತೀರಿಸಬೇಕಾಗಿದೆ. ನಾನು ಮನೆಯನ್ನು ಮರುನಿರ್ಮಾಣ ಮಾಡಲು ಬಯಸುತ್ತೇನೆ ಎನ್ನುತ್ತಾರೆ ವೃತ್ತಿಯಲ್ಲಿ ಪೇಂಟರ್ ಆಗಿರುವ ಸದಾನಂದನ್. ಆದಾಯ ತೆರಿಗೆ ಮತ್ತು ಲಾಟರಿ ಏಜೆಂಟರ ಕಮಿಷನ್ ಕಡಿತದ ನಂತರ ಸದಾನಂದನ್ 7.39 ಕೋಟಿ ರೂ. ಪಡೆಯಲಿದ್ದಾರೆ.

ಕ್ರಿಸ್ಮಸ್-ಹೊಸ ವರ್ಷದ ಬಂಪರ್ ಲಾಟರಿ ಖರೀದಿಸಿ 12 ಕೋಟಿ ಗೆದ್ದ ಪೇಂಟರ್​​ !
ಕ್ರಿಸ್ಮಸ್-ಹೊಸ ವರ್ಷದ ಬಂಪರ್ ಲಾಟರಿ ಖರೀದಿಸಿ 12 ಕೋಟಿ ಗೆದ್ದ ಪೇಂಟರ್​​ !

ಸದಾನಂದನ್ ಅವರು ಬಹುಮಾನ ವಿಜೇತ ಟಿಕೆಟ್ ಅನ್ನು ಅಯ್ಮನಂನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ವ್ಯವಸ್ಥಾಪಕರಿಗೆ ಹಸ್ತಾಂತರಿಸಲು ಸಿದ್ಧರಾಗಿದ್ದಾರೆ.

ಕೇರಳ ರಾಜ್ಯ ಲಾಟರಿ ಇಲಾಖೆಯು ಮುದ್ರಿಸಲಾದ 47,40,000 ಕ್ರಿಸ್ಮಸ್-ಹೊಸ ವರ್ಷದ ಬಂಪರ್ ಟಿಕೆಟ್‌ಗಳಲ್ಲಿ 47,36,528 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

ಕ್ರಿಸ್‌ಮಸ್ ಬಂಪರ್‌ನ ಟಿಕೆಟ್ ದರ 300 ರೂ. ಆಗಿದ್ದು, ಈ ಲಾಟರಿಯ ಎರಡನೇ ಬಹುಮಾನ 3 ಕೋಟಿ ರೂ. ಗಳಾಗಿದೆ. (6 ಟಿಕೆಟ್‌ಗಳಿಗೆ ನೀಡಲಾಗುತ್ತದೆ) ಮತ್ತು ಮೂರನೇ ಬಹುಮಾನ 60 ಲಕ್ಷ (6 ಟಿಕೆಟ್‌ಗಳಿಗೆ ನೀಡಲಾಗುತ್ತದೆ).

ಲಾಟರಿ ಇಲಾಖೆ ಆರಂಭದಲ್ಲಿ 24 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಿತ್ತು. ಹೆಚ್ಚೆಚ್ಚು ಟಿಕೆಟ್‌ಗಳು ಮಾರಾಟವಾದ ಹಿನ್ನೆಲೆ ಟಿಕೆಟ್‌ಗಳನ್ನು ಮತ್ತೆ ಎರಡು ಬಾರಿ ಮುದ್ರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.