ETV Bharat / bharat

ಚೋಕ್ಸಿ ಕೇಸ್​​ ವಿಚಾರಣೆ ಮುಂದೂಡಿಕೆ: ಮತ್ತೊಮ್ಮೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಮೋಸ್ಟ್​ ವಾಂಟೆಡ್​ ಆರೋಪಿ - ಮೆಹುಲ್​ ಚೋಕ್ಸಿ ಪ್ರಕರಣ ವಿಚಾರಣೆ ಮುಂದೂಡಿಕೆ

ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿಗೆ ಬೇಕಾಗಿರುವ ಭಾರತದ ಮೋಸ್ಟ್​ ವಾಂಟೆಡ್​ ಆರೋಪಿ ಮೆಹುಲ್​ ಚೋಕ್ಸಿ ಪ್ರಕರಣದ ವಿಚಾರಣೆಯನ್ನು ಡೊಮಿನಿಕನ್ ಹೈಕೋರ್ಟ್ ಜೂನ್ 14 ಕ್ಕೆ ಮುಂದೂಡಿದೆ. ಮೇ 23 ರಂದು ಆಂಟಿಗುವಾದಿಂದ ನಾಪತ್ತೆಯಾಗಿದ್ದ ಅವನನ್ನು ಮೇ 26 ರಂದು ಡೊಮಿನಿಕಾದಲ್ಲಿ ಸೆರೆ ಹಿಡಿಯಲಾಗಿತ್ತು.

chowksi
chowksi
author img

By

Published : Jun 4, 2021, 10:41 PM IST

ನವದೆಹಲಿ: ಉದ್ಯಮಿ ಮೆಹುಲ್ ಚೋಕ್ಸಿ ಪ್ರಕರಣದ ವಿಚಾರಣೆಯನ್ನು ಡೊಮಿನಿಕನ್ ಹೈಕೋರ್ಟ್ ಮುಂದೂಡಿದ ನಂತರ, ಸಿಬಿಐ, ಇಡಿ ಅಧಿಕಾರಿಗಳು ಮತ್ತು ಎಂಇಎಗಳ ಎಂಟು ಸದಸ್ಯರ ತಂಡವು ಈಗ ಪಿಎನ್‌ಬಿ ಬಹುಕೋಟಿ ವಂಚನೆಯಲ್ಲಿ ಲಕ್ಷಾಂತರ ಜನರನ್ನು ವಂಚಿಸಿದ ವಜ್ರದ ಆಭರಣ ಮಾರಾಟಗಾರರ ಚೋಕ್ಸಿ ಇಲ್ಲದೇ ಭಾರತಕ್ಕೆ ಬರಿಗೈಯಲ್ಲಿ ಹಿಂತಿರುಗುವಂತಾಗಿದೆ.

ಚೋಕ್ಸಿ ಪ್ರಕರಣದ ಮುಂದಿನ ವಿಚಾರಣೆಯನ್ನು ಡೊಮಿನಿಕನ್ ಹೈಕೋರ್ಟ್ ಜೂನ್ 14 ಕ್ಕೆ ಮುಂದೂಡಿದೆ. ಏಜೆನ್ಸಿ ಮೂಲಗಳ ಪ್ರಕಾರ, ಖಾಸಗಿ ಕತಾರ್ ಜೆಟ್ ಡೊಮಿನಿಕಾದಿಂದ ಗುರುವಾರ ಕೇಂದ್ರ ತನಿಖಾ ದಳದ (ಸಿಬಿಐ) ಎಂಟು ಸದಸ್ಯರ ತಂಡ, ಜಾರಿ ನಿರ್ದೇಶನಾಲಯ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮತ್ತು ಇಬ್ಬರು ಸಿಆರ್‌ಪಿಎಫ್ ಕಮಾಂಡೋಗಳೊಂದಿಗೆ ಹೊರಟು, ಚೋಕ್ಸಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಭಾರತೀಯ ಅಧಿಕಾರಿಗಳ ತಂಡ ಶನಿವಾರ ಡೊಮಿನಿಕಾಗೆ ಬಂದಿಳಿದಿತ್ತು.

13,500 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ಭಾರತದಲ್ಲಿ ಬೇಕಾಗಿರುವ ಚೋಕ್ಸಿಯ ಹೇಬಿಯಸ್ ಕಾರ್ಪಸ್ ವಿಚಾರಣೆಯನ್ನು ಡೊಮಿನಿಕನ್ ಹೈಕೋರ್ಟ್ ನ್ಯಾಯಾಧೀಶ ಬರ್ನಿ ಸ್ಟೀಫನ್ಸನ್ ಗುರುವಾರಕ್ಕೆ ಮುಂದೂಡಿದ್ದಾರೆ.

ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿಯ ಭಾರತದ ಮೋಸ್ಟ್ ವಾಂಟೆಡ್​ ಆರೋಪಿ ಚೋಕ್ಸಿ, ಮೇ 23 ರಂದು ಆಂಟಿಗುವಾದಿಂದ ನಾಪತ್ತೆಯಾಗಿದ್ದ . ಅವನನ್ನು ಮೇ 26 ರಂದು ಡೊಮಿನಿಕಾದಲ್ಲಿ ಸೆರೆಹಿಡಿಯಲಾಯಿತು. ಚೋಕ್ಸಿ ಮತ್ತು ಅವನ ವಕೀಲರು ಆತನನ್ನು ಬಲವಂತವಾಗಿ ಹಡಗಿನಲ್ಲಿ ಬಲವಂತವಾಗಿ ಅಪಹರಿಸಲಾಗಿದೆ ಎಂದು ಹೇಳಿಕೊಂಡಿದ್ದರು.

ಜೂನ್ 2 ರಂದು, ಚೋಕ್ಸಿ ನ್ಯಾಯಾಲಯಕ್ಕೆ ಹಾಜರಾದಾಗ ಅಕ್ರಮ ಪ್ರವೇಶ ಕುರಿತು ತಪ್ಪೊಪ್ಪಿಕೊಂಡಿಲ್ಲ ಮತ್ತು ಜಾಮೀನು ನಿರಾಕರಿಸಲಾಯಿತು ಡೊಮಿನಿಕಾ ನ್ಯೂಸ್ ಆನ್‌ಲೈನ್ ಪ್ರಕಾರ, ಭಾರತದಲ್ಲಿ 11 ಅಪರಾಧಗಳು ಅವನ ವಿರುದ್ಧ ದಾಖಲಾಗಿವೆ, ಮತ್ತು ಆಂಟಿಗುವಾದಲ್ಲಿ ಹಸ್ತಾಂತರ ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾನೆ ಎಂದು ಸರ್ಕಾರಿ ಪ್ರಾಸಿಕ್ಯೂಟರ್ ವಾದಿಸಿದ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಚೋಕ್ಸಿಗೆ ಜಾಮೀನು ನಿರಾಕರಿಸಿತು.

62 ವರ್ಷದ ಚಾಲಾಕಿ ಚೋಕ್ಸಿ ಪಿಎನ್​ಬಿ ವಂಚನೆ ಪ್ರಕರಣದಲ್ಲಿ ಸಿಬಿಐ ಪ್ರಕರಣ ದಾಖಲಿಸುವ ಕೆಲವೇ ದಿನಗಳ ಮೊದಲು ಅಂದರೆ 2018 ರ ಜನವರಿಯಲ್ಲಿ ಭಾರತವನ್ನು ತೊರೆದಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.