ETV Bharat / bharat

ಸೆರಂ ಇನ್ಸ್​ಟಿಟ್ಯೂಟ್​, ಭಾರತ್ ಬಯೋಟೆಕ್​ ಮೇಲೆ ಚೀನಾ ಹ್ಯಾಕರ್ಸ್ ಕಣ್ಣು!?

ಚೀನಾದ ಹ್ಯಾಕಿಂಗ್​ ಗುಂಪು ಭಾರತೀಯ ಲಸಿಕಾ ತಯಾರಿಕೆ ಐಟಿ ವ್ಯವಸ್ಥೆ ಗುರಿಯಾಗಿಸಿಕೊಂಡು ಅವುಗಳ ಮೇಲೆ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

author img

By

Published : Mar 1, 2021, 9:03 PM IST

Chinese Hackers
Chinese Hackers

ನವದೆಹಲಿ: ಭಾರತ-ಚೀನಾ ಎರಡೂ ದೇಶ ಕೋವಿಡ್ ಲಸಿಕೆ ಉತ್ಪಾದನೆ ಮಾಡ್ತಿದ್ದು, ವಿವಿಧ ದೇಶಗಳಿಗೆ ಉಡುಗೊರೆ ಹಾಗೂ ಮಾರಾಟ ಮಾಡುತ್ತಿವೆ. ಆದರೆ ಭಾರತದಲ್ಲಿ ಶೇ 60ರಷ್ಟು ಲಸಿಕೆ ಹೆಚ್ಚಾಗಿ ಉತ್ಪಾದನೆಯಾಗುತ್ತಿದೆ.

ಇದರ ಮಧ್ಯೆ ಇದೀಗ ಮತ್ತೊಂದು ಮಹತ್ವದ ಸುದ್ದಿ ವರದಿಯಾಗಿದ್ದು, ಚೀನಾದ ಹ್ಯಾಕಿಂಗ್​ ಗುಂಪು ಭಾರತೀಯ ಲಸಿಕಾ ತಯಾರಿಕೆ ಕಂಪನಿಗಳ ಐಟಿ ವ್ಯವಸ್ಥೆ ಗುರಿಯಾಗಿಸಿಕೊಂಡು ಅವುಗಳ ಮೇಲೆ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದೆ ಎಂಬ ಮಾಹಿತಿ ಇದೀಗ ಸೈಬರ್ ಗುಪ್ತಚರ ಸಂಸ್ಥೆ ಸೈಫಿರ್ಮಾ ತಿಳಿಸಿದೆ ಎನ್ನಲಾಗಿದೆ.

ಸಿಂಗಾಪುರ ಮತ್ತು ಟೋಕಿಯೋ ಮೂಲದ ಸೈಫಿರ್ಮಾ ಕಂಪನಿ ಈ ಮಾಹಿತಿ ನೀಡಿದ್ದು, ಚೀನಾದ ಹ್ಯಾಕಿಂಗ್​ ಗುಂಪು ಭಾರತ್​ ಬಯೋಟೆಕ್​ ಹಾಗೂ ಸೀರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾ ಮೇಲೆ ದಾಳಿ ನಡೆಸಲು ಮುಂದಾಗಿದೆ ಎಂದಿದೆ. ಈ ಮೂಲಕ ಭಾರತೀಯ ಔಷಧೀಯ ಕಂಪನಿಗಳಿಗಿಂತಲೂ ಹೆಚ್ಚಿನ ಲಾಭ ಪಡೆದುಕೊಳ್ಳುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತವನ್ನು ಕತ್ತಲಿಗೆ ತಳ್ಳಲು ಚೀನಾ ಪ್ಲ್ಯಾನ್.. ಸರ್ಕಾರಿ ಕಂಪ್ಯೂಟರ್ ನೆಟ್​ವರ್ಕ್​ ಹ್ಯಾಕಿಂಗ್ ಯತ್ನ

ವೆಬ್​​ ಅಪ್ಲಿಕೇಶನ್​ಗಳ ಮೂಲಕ ಈ ರೀತಿಯ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ಭಾರತ್ ಬಯೋಟೆಕ್​ ಹಾಗೂ ಸೆರಂ ಇನ್ಸ್​ಟಿಟ್ಯೂಟ್​ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿವೆ. ಭಾರತ, ಕೆನಡಾ, ಫ್ರಾನ್ಸ್​, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್​ ಸ್ಟೇಟ್ಸ್​​ ಕೋವಿಡ್ ಲಸಿಕೆ ಕಂಪನಿ ಗುರಿಯಾಗಿಸಿಕೊಂಡು ರಷ್ಯಾ ಮತ್ತು ಉತ್ತರ ಕೊರಿಯಾದಿಂದ ಸೈಬರ್ ದಾಳಿಯಾಗುವುದಾಗಿ ಈ ಹಿಂದೆ ಮೈಕ್ರೋಸಾಫ್ಟ್​​ ಮಾಹಿತಿ ನೀಡಿತ್ತು.

ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಚೀನಾ ಸರ್ಕಾರದ ಬೆಂಬಲಿತ ಹ್ಯಾಕಿಂಗ್ ತಂಡಗಳು ಭಾರತ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳ ಕಂಪ್ಯೂಟರ್ ನೆಟ್‌ವರ್ಕ್‌ ಮತ್ತು ಲೋಡ್ ರವಾನೆ ಕೇಂದ್ರಗಳನ್ನು ಗುರಿಯಾಗಿಸಿವೆ ಎಂಬ ಮಾಹಿತಿ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.