ETV Bharat / bharat

ಜಪಾನ್‌ನ ಮಿಲಿಟರಿ ನೆಲೆಗಳ ಸುತ್ತಲಿನ ಭೂಮಿ ಹಿಡಿತಕ್ಕೆ ಚೀನಾ ಮಾಸ್ಟರ್​ ಪ್ಲಾನ್​​! - ಜಪಾನಿನ ದ್ವೀಪಗಳಲ್ಲಿ ಸೈಟ್​​

ಜಪಾನ್‌ನಲ್ಲಿ ಮಿಲಿಟರಿ ನೆಲೆಗಳ ಸುತ್ತ ಚೀನಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಜಪಾನಿನ ಅಧಿಕಾರಿಗಳು ಹೇಳಿದ್ದಾರೆ

chinese-acquiring-land-around-military-bases-in-japan-report

author img

By

Published : May 21, 2021, 4:35 PM IST

Updated : May 21, 2021, 4:45 PM IST

ಟೋಕಿಯೊ: ಜಪಾನ್‌ನ ಮಿಲಿಟರಿ ನೆಲೆಗಳ ಸುತ್ತಲಿನ 700 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಚೀನೀ ಅನುದಾನಿತ ಜಮೀನುಗಳ ವ್ಯವಹಾರಗಳು ಪತ್ತೆಯಾಗಿವೆ ಎಂಬ ಬಗ್ಗೆ ಜಪಾನಿನ ತನಿಖಾ ಗುಂಪು ಪತ್ತೆ ಮಾಡಿದೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಈ ಹೂಡಿಕೆಗಳು ಮತ್ತು ಖರೀದಿ ಯೋಜನೆಗಳನ್ನು ಚೀನಾದ ನೇತೃತ್ವದ ವಿದೇಶಿ ನಿಗಮಗಳು ನಡೆಸುತ್ತಿದ್ದು, ಜಪಾನ್‌ನ ಸುರಕ್ಷತೆಗೆ ಅಪಾಯವನ್ನುಂಟುಮಾಡಬಹುದು ಎಂದು ವರದಿ ಮಾಡಿದೆ. ಮಿಲಿಟರಿ ಸ್ಥಾಪನೆಗಳ ಸುತ್ತಮುತ್ತಲಿನ ಭೂಮಿಯ ಆಸ್ತಿ ಹಕ್ಕುಗಳ ಬಗ್ಗೆ ಕಳೆದ ವರ್ಷ ಸಮಗ್ರ ತನಿಖೆ ನಡೆಸಿದ ನಂತರ ಜಪಾನಿನ ಅಧಿಕಾರಿಗಳು ಈ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜಪಾನಿನ ದ್ವೀಪಗಳಲ್ಲಿ ಸೈಟ್​​ಗಳನ್ನು ಖರೀದಿಸಲು ಚೀನಾ ಮುಂದಾಗುತ್ತಿದೆ ಎಂಬ ವದಂತಿಗಳು ಹೆಚ್ಚಾದ ನಂತರ ಈ ವಿವಾದ ಉದ್ಭವಿಸಿದೆ ಎಂದು ವರದಿ ಮಾಡಿದೆ.

ಸ್ವಾಧೀನಗೊಂಡ ಪ್ರದೇಶಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಹಾಗೆ ಈ ತಾಣಗಳು ಜಪಾನ್ ಸ್ವರಕ್ಷಣಾ ಪಡೆಗಳು, ಯುನೈಟೆಡ್ ಸ್ಟೇಟ್ಸ್ ಆರ್ಮಿ ಜಪಾನ್‌ನ ಮಿಲಿಟರಿ ನೆಲೆ, ಜಪಾನ್‌ನ ಕರಾವಳಿ ಕಾವಲು ಪಡೆ, ಮತ್ತು ಬಾಹ್ಯಾಕಾಶ ಅಭಿವೃದ್ಧಿಯ ಸುತ್ತಮಿತ್ತಲಿನ ಪ್ರದೇಶಗಳಾಗಿದ್ದು, ಚೀನಾದ ಸದ್ದಿಲ್ಲದ ಭೂ ಸ್ವಾಧೀನವನ್ನ ಕಂಡುಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

ಈ ತಾಣಗಳಿಂದ ಜಪಾನೀಸ್ ಮತ್ತು ಅಮೇರಿಕನ್ ವಿಮಾನವಾಹಕ ನೌಕೆಗಳು, ವಿಮಾನಗಳು ಮತ್ತು ಸಿಬ್ಬಂದಿಗಳ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹಾಗೆ ಕನಗಾವಾ ಪ್ರಾಂತ್ಯದ ಅಮೆರಿಕ ಮಿಲಿಟರಿ ನೆಲೆಗೆ ಹತ್ತಿರವಿರುವ ಒಂದು ಜಾಗವನ್ನು ಖರೀದಿಸಿದ ಖರೀದಿದಾರರಲ್ಲಿ ಒಬ್ಬರು ಬೀಜಿಂಗ್ ಸರ್ಕಾರಕ್ಕೆ ಸೇರಿದವರು ಎಂದು ಶಂಕಿಸಲಾಗಿದೆ.

ಈ ಖರೀದಿದಾರನು ಹತ್ತಿರದ ಹಲವಾರು ಎತ್ತರದ ಕಟ್ಟಡಗಳನ್ನು ಸಹ ಹೊಂದಿದ್ದಾನೆ. ಓಕಿನಾವಾ ದ್ವೀಪದಲ್ಲಿನ ಅಮೆರಿಕನ್ ನೆಲೆಯ ಸುತ್ತಲಿನ ಇತರ ವಹಿವಾಟು ಯೋಜನೆಗಳು ಮತ್ತು ಟೊಟೊರಿ ಪ್ರಾಂತ್ಯದ ಜಪಾನಿನ ರಕ್ಷಣಾ ಆವರಣಗಳನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಚೀನಾದ ಹೂಡಿಕೆದಾರರು ಈ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದೆ.

Last Updated : May 21, 2021, 4:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.