ETV Bharat / bharat

ಚೀನಾ ಕುತಂತ್ರ: ಗಡಿ ಮೇಲೆ ಅಧಿಪತ್ಯಕ್ಕೆ ಕ್ಸಿಯೋಕಾಂಗ್ ಗ್ರಾಮ ಯೋಜನೆ! - ಚೀನಾ ಕುತಂತ್ರ

ಭಾರತ ಮತ್ತು ಚೀನಾದ ನಡುವೆ ಗಾಲ್ವನ್ ಸಂಘರ್ಷ ನಡೆದ ಮೇಲೆ ಗಡಿ ಸಮಸ್ಯೆ ಉಲ್ಬಣವಾಯಿತು ಎಂದು ಮೇಲ್ನೋಟಕ್ಕೆ ಅನಿಸುತ್ತದೆಯಾದರೂ, ಇದಕ್ಕೂ ಮೊದಲೇ ಚೀನಾ ಕುತಂತ್ರವೊಂದನ್ನು ರೂಪಿಸುತ್ತಿತ್ತು ಎಂಬುದು ಈಗ ಬಹಿರಂಗವಾಗಿದೆ.

China's '2,41,000-people plan' to man blurry India border
ಚೀನಾ ಕುತಂತ್ರ: ಗಡಿ ಮೇಲೆ ಅಧಿಪತ್ಯಕ್ಕೆ ಕ್ಸಿಯೋಕಾಂಗ್ ಗ್ರಾಮ ಯೋಜನೆ!
author img

By

Published : Sep 28, 2021, 8:55 AM IST

ನವದೆಹಲಿ: ಗಡಿಗಳಲ್ಲಿ ಭದ್ರತೆಗಾಗಿ ಏನೆಲ್ಲಾ ಮಾಡಬಹುದು? ಎಂಬ ಪ್ರಶ್ನೆಗಳು ಮೂಡಿದಾಗ ಭದ್ರತಾ ಪಡೆಗಳ ಹೆಚ್ಚಳ ಅಥವಾ ಗಡಿಗೆ ಶಸ್ತ್ರಗಳ ಪೂರೈಕೆ ಮುಂತಾದ ಯೋಚನೆಗಳು ಬರಬಹುದು. ಆದರೆ, ನಮ್ಮ ನೆರೆ ರಾಷ್ಟ್ರ ಚೀನಾ ಬೇರೊಂದು ತಂತ್ರವನ್ನು ಹೂಡಿದೆ.

ಹೌದು, ಗಡಿಯಲ್ಲಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿ, ಆ ಮೂಲಕ ಭಾರತ - ಚೀನಾದ ನಡುವಿನ ಮ್ಯಾಕ್​ಮೊಹನ್ ಗಡಿಯ ಮೇಲೆ ಪೂರ್ಣ ಅಧಿಪತ್ಯ ಸ್ಥಾಪನೆಗೆ ಚೀನಾ ಹೊರಟಿದೆ. ಸುಮಾರು 628 ಗ್ರಾಮಗಳನ್ನು ಗಡಿಯಲ್ಲಿ ಸೃಷ್ಟಿಸಲಿದೆ.

ಕನ್​ಫ್ಯೂಷಿಯಸ್ ಪ್ಲಾನ್..

ಚೀನಾ ನಿರ್ಮಾಣ ಮಾಡಲು ಹೊರಟಿರುವ ಗ್ರಾಮಗಳನ್ನು ಕ್ಸಿಯೋಕಾಂಗ್ ಎಂದು ಕರೆಯಲಾಗುತ್ತದೆ. ಈ ಕ್ಸಿಯೋಕಾಂಗ್ ಎಂದರೆ ಚೀನಾ ಭಾಷೆಯಲ್ಲಿ ಎಲ್ಲವನ್ನೂ ಒಳಗೊಂಡ ಮತ್ತು ಫಲವತ್ತಾದ ಎಂಬ ಅರ್ಥವಿದೆ. ಇಂತಹ ಗ್ರಾಮಗಳನ್ನು ನಿರ್ಮಾಣ ಮಾಡಿ ಗಡಿಯಲ್ಲಿ ತನ್ನ ಅಧಿಪತ್ಯ ಸ್ಥಾಪನೆಗೆ ಚೀನಾ ಮುಂದಾಗಿದೆ.

ಅಂದಹಾಗೆ ಈ ಗ್ರಾಮಗಳ ಪರಿಕಲ್ಪನೆ ಇಂದು, ನಿನ್ನೆಯದಲ್ಲ. ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸ ಈ ಕಿಯೋಕಾಂಗ್ ಗ್ರಾಮಗಳಿಗೆ ಇದೆ. ಚೀನಾದ ದಾರ್ಶನಿಕ ಕನ್​ಫ್ಯೂಷಿಯಸ್​ನ ಕಾಲದಲ್ಲಿ ಈ ಪರಿಕಲ್ಪನೆ ಇತ್ತು ಎಂದು ಹೇಳಲಾಗುತ್ತಿದೆ.

ಮುಕ್ತಾಯದ ಹಂತಕ್ಕೆ ಬಂದಿದೆ..

2017ರಿಂದ ಈ ಗ್ರಾಮಗಳ ನಿರ್ಮಾಣ ನಡೆಯುತ್ತಿದೆ. ಭಾರತ ಚೀನಾದ ಮಧ್ಯೆ ಗಡಿ ಪ್ರದೇಶವಿದ್ದು, ಕಾರಾಕೋರಂ ಶ್ರೇಣಿ ಮತ್ತು ಹಿಮಾಲಯ ಪರ್ವತದಂತಹ ಹವಾಮಾನ ವೈಪರಿತ್ಯಗಳನ್ನು ಎದುರಿಸುವ ಪ್ರದೇಶಗಳಲ್ಲೂ ಇಂತಹ ಗ್ರಾಮಗಳ ನಿರ್ಮಾಣ ಮಾಡಲಾಗುತ್ತದೆ.

ಪಶ್ಚಿಮದಲ್ಲಿ ಲಡಾಖ್​​ನಿಂದ ಪೂರ್ವದಲ್ಲಿ ಅರುಣಾಚಲ ಪ್ರದೇಶದವರೆಗೆ ಈ ಗ್ರಾಮಗಳ ನಿರ್ಮಾಣ ಮಾಡಲಾಗುತ್ತಿದ್ದು, ಗಡಿಯಲ್ಲಿರುವ 21 ಕೌಂಟಿಗಳಲ್ಲಿ, ಒಟ್ಟು 62,160 ಕುಟುಂಬಗಳಿರುವ 2,41,835 ಜನಸಂಖ್ಯೆಯಿರುವ ಗ್ರಾಮಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಆ ಜನಸಂಖ್ಯೆಯಲ್ಲಿ ಟಿಬೆಟ್​ನ ಜನತೆಯೂ ಇದ್ದಾರೆ.

ಖರ್ಚಾಗಿದ್ದು ಇಷ್ಟು..

ಹಿಂದಿನ ವರ್ಷ 604 ಗ್ರಾಮಗಳನ್ನು ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಖರ್ಚಾಗಿದ್ದು, 30 ಬಿಲಿಯನ್ ಯುವಾನ್ (4.6 ಬಿಲಿಯನ್ ಡಾಲರ್ - ಅ​ಂದರೆ ಭಾರತೀಯ ಲೆಕ್ಕದಲ್ಲಿ 33,953 ಕೋಟಿ ರೂ. ) ಇನ್ನುಳಿದ 24 ಗ್ರಾಮಗಳನ್ನು 2021ರ ಅಂತ್ಯದ ವೇಳೆಗೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಟಿಬೆಟ್ ಸ್ವಾಯುತ್ತ ಪ್ರದೇಶ (TAR-Tibet Autonomous Region)ದ ಗಡಿ ರಕ್ಷಣೆ, ಸಾರ್ವಜನಿಕ ಭದ್ರತೆ ಮತ್ತು ಬಡತನ ನಿರ್ಮೂಲನೆ ಇಲಾಖೆಗಳಿಂದ ಹಣ ತೆಗೆದುಕೊಳ್ಳಲಾಗಿದೆ.

ಈ ಕ್ಸಿಯೋಕಾಂಗ್ ಗ್ರಾಮಗಳನ್ನು ಗಡಿ ರಕ್ಷಣಾ ಗ್ರಾಮಗಳು ಎಂದು ಕರೆಯಾಗುತ್ತದೆ. ಭಾರತ ಚೀನಾ ಸಂಘರ್ಷ ನಡೆದ ಮೇಲೆ ಇವುಗಳ ನಿರ್ಮಾಣ ಕಾರ್ಯ ಅತ್ಯಂತ ವೇಗವಾಗಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಗ್ರಾಮಗಳೂ ಅನಾವರಣಗೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ದಿನಕ್ಕೊಂದು ರೂಲ್ಸ್.. ಇನ್ಮೇಲೆ ಅಫ್ಘಾನಿಸ್ತಾನದಲ್ಲಿ ಗಡ್ಡದ ಶೇವ್​, ಟ್ರಿಮ್​ ಮಾಡುವುದು ನಿಷಿದ್ಧ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.