ನವದೆಹಲಿ: ಭಾರತದ ಈಶಾನ್ಯ ದಿಕ್ಕಿನಲ್ಲಿರುವ ಪುಟ್ಟ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಕಳೆದ ಶನಿವಾರ ಮತ್ತು ಭಾನುವಾರ ಜಿ20 ರಹಸ್ಯ ಸಭೆ ನಡೆಯಿತು. ವಿಶ್ವಾಸನೀಯ ಮೂಲಗಳ ಪ್ರಕಾರ, ಚೀನಾ ಈ ಸಭೆಯಲ್ಲಿ ಪಾಲ್ಗೊಂಡಿಲ್ಲ. ಚೀನಾದ ಪ್ರತಿನಿಧಿಗಳು ಸಭೆಗೆ ಹಾಜರಾಗಿಲ್ಲ ಎಂದು ಅರುಣಾಚಲ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಮಹತ್ವದ ಸಭೆ ನಡೆದಿದೆ. ಜಿ20 ದೇಶಗಳ ಸುಮಾರು 100 ಪ್ರತಿನಿಧಿಗಳು ಸೇರಿದಂತೆ ಭಾರತೀಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಆದರೆ, ಚೀನಾದ ಒಬ್ಬ ಪ್ರತಿನಿಧಿಯೂ ಹಾಜರಾಗಿರಲಿಲ್ಲ ಎಂದು ಅವರು ಹೇಳಿದರು. ಸಭೆ ಅತ್ಯಂತ ಗೌಪ್ಯವಾಗಿ ನಡೆದಿದೆ ಎಂದು ಹೇಳಲಾಗಿದೆ. ಮಾಧ್ಯಮ ಪ್ರಸಾರಕ್ಕೂ ಅವಕಾಶವಿರಲಿಲ್ಲ. ಸಭೆಯ ನಂತರ ಅರುಣಾಚಲ ಸರ್ಕಾರದ ಮಾಧ್ಯಮ ಪ್ರತಿನಿಧಿಗಳು ಟ್ವಿಟರ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
-
The G20 summit in Arunachal is not only a geopolitical and diplomatic commitment, but also a testament to the spirit of universal brotherhood embodied by the mantra of "One Earth, One Family, and One Future," stated Chief Minister Pema Khandu.
— CMO Arunachal (@ArunachalCMO) March 27, 2023 " class="align-text-top noRightClick twitterSection" data="
More: https://t.co/QuBVsjhOei pic.twitter.com/lvBV1OdAaF
">The G20 summit in Arunachal is not only a geopolitical and diplomatic commitment, but also a testament to the spirit of universal brotherhood embodied by the mantra of "One Earth, One Family, and One Future," stated Chief Minister Pema Khandu.
— CMO Arunachal (@ArunachalCMO) March 27, 2023
More: https://t.co/QuBVsjhOei pic.twitter.com/lvBV1OdAaFThe G20 summit in Arunachal is not only a geopolitical and diplomatic commitment, but also a testament to the spirit of universal brotherhood embodied by the mantra of "One Earth, One Family, and One Future," stated Chief Minister Pema Khandu.
— CMO Arunachal (@ArunachalCMO) March 27, 2023
More: https://t.co/QuBVsjhOei pic.twitter.com/lvBV1OdAaF
ಅರುಣಾಚಲ ಪ್ರದೇಶ ಟಿಬೆಟ್‌ನ ಭಾಗ ಎಂದು ಚೀನಾ ಪ್ರತಿಪಾದಿಸುತ್ತಿರುವುದು ಗೊತ್ತೇ ಇದೆ. ಆದರೆ ಭಾರತ ಕಾಲಕಾಲಕ್ಕೆ ಡ್ರ್ಯಾಗನ್ ದೇಶದ ವಿಸ್ತರಣಾವಾದವನ್ನು ಖಂಡಿಸುತ್ತಿದೆ. ಅರುಣಾಚಲ ಪ್ರದೇಶ ತನ್ನ ಅವಿಭಾಜ್ಯ ಅಂಗ ಎಂದು ಭಾರತ ಚೀನಾಕ್ಕೆ ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಜಿ20 ಸಭೆಗೆ ಚೀನಾ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿಲ್ಲ.
ಜಿ20 ಗುಂಪಿನ ರಾಷ್ಟ್ರಗಳ ಮುಖ್ಯಸ್ಥರ ಮುಖ್ಯ ಸಮ್ಮೇಳನವು ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿದೆ. ಆ ಸಭೆಗೂ ಮುನ್ನ ದೇಶಾದ್ಯಂತ 50 ಪ್ರಮುಖ ನಗರಗಳಲ್ಲಿ ವಿವಿಧ ಕ್ಷೇತ್ರಗಳು ಮತ್ತು ವಿಷಯಗಳ ಕುರಿತು ಮಹತ್ವದ ಸಭೆಗಳು ಜರುಗುತ್ತಿವೆ. ಇದರ ಅಂಗವಾಗಿ ಇಟಾನಗರದಲ್ಲಿ ‘ಸಂಶೋಧನಾ ಆವಿಷ್ಕಾರ ಉಪಕ್ರಮ’ ಎಂಬ ವಿಷಯದ ಕುರಿತು ಎರಡು ದಿನಗಳ ಕಾಲ ಸಭೆ ನಡೆಸಲಾಗಿದೆ.
ಜಾಗತಿಕ ಆರ್ಥಿಕತೆಯ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಮರಳಿ ತರಲು ವಿಶ್ವದ ಪ್ರಮುಖ ಆರ್ಥಿಕತೆಗಳು ಮತ್ತು ವಿತ್ತೀಯ ವ್ಯವಸ್ಥೆಗಳು ಕಾರ್ಯನಿರ್ವಹಿಸಬೇಕು. ಜಾಗತಿಕವಾಗಿ ಪರಿಣಾಮ ಬೀರುವ ಸಮರ್ಥನೀಯ ಸಾಲದ ಮಟ್ಟಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಕುಸಿತ ಕಂಡು ಬರುತ್ತಿರುವ ಬಗ್ಗೆ ಪ್ರಧಾನಿ ಮೋದಿ ಜಿ20 ಉದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಉಲ್ಲೇಖಿಸಿದ್ದರು.
ದೆಹಲಿಯಲ್ಲಿ ನಡೆಯಲಿದೆ ಜಿ20 ಸಭೆ: ಭಾರತವು ಈ ವರ್ಷದ ಡಿಸೆಂಬರ್‌ನಲ್ಲಿ ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಇದರ ಮಹತ್ವದ ಸಭೆಗಳು 2023ರ ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ವರ್ಷದ ಜೂನ್ನಲ್ಲಿ ಎಸ್‌ಕೆಐಸಿಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಶ್ರೀನಗರದಲ್ಲಿ ಜಿ20 ಶೃಂಗಸಭೆ ಆಯೋಜಿಸಲಾಗುವುದು. ಇದು ನಮಗೆ ಹೆಮ್ಮೆಯ ವಿಷಯ. ಅಲ್ಲದೇ ಆಡಳಿತವು ಇದಕ್ಕಾಗಿ ವಿಶೇಷ ಸಮಿತಿ ರಚಿಸಿದೆ ಎಂದು ಹೇಳಿದ್ದರು. ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2023 ರ ಸೆಪ್ಟಂಬರ್‌ನಲ್ಲಿ ದೆಹಲಿಯಲ್ಲಿ ಜಿ20 ಸಭೆಗಳನ್ನು ನಡೆಸಲಾಗುವುದು ಎಂದು ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ: G20 ಸಭೆ: ಜಾಗತಿಕ ಆರ್ಥಿಕತೆಗೆ ಸ್ಥಿರತೆಯನ್ನು ನೀಡುವ ವಿತ್ತೀಯ ವ್ಯವಸ್ಥೆಗೆ ಪ್ರಧಾನಿ ಮೋದಿ ಕರೆ