ETV Bharat / bharat

ಚೀನಾ ವಿಮಾನ ದುರಂತ: ಭಾರತದ ವಿಮಾನಗಳ ಮೇಲೆ ತೀವ್ರ ನಿಗಾ - ಚೀನಾ ವಿಮಾನ ದುರಂತ

ಚೀನಾದಲ್ಲಿ 132 ಜನರಿದ್ದ ವಿಮಾನ ಪತನಗೊಂಡ ಬೆನ್ನಲ್ಲೇ ಭಾರತೀಯ ವಿಮಾನಯಾನ ಸಂಸ್ಥೆಗಳು ಎಚ್ಚರಿಕೆ ವಹಿಸಿವೆ.

indian-flights
ಭಾರತ ವಿಮಾನಗಳ
author img

By

Published : Mar 21, 2022, 9:02 PM IST

ನವದೆಹಲಿ: ಚೀನಾದಲ್ಲಿ ವಿಮಾನ ಪತನಗೊಂಡು ಭೀತಿ ಸೃಷ್ಟಿಸಿರುವ ಬೆನ್ನಲ್ಲೇ ಭಾರತೀಯ ವಿಮಾನಯಾನ ಸಂಸ್ಥೆಗಳು ಎಚ್ಚರಿಕೆ ವಹಿಸಿವೆ. ಎಲ್ಲಾ ವಿಮಾನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಜಿಸಿಎ ಮುಖ್ಯಸ್ಥ ಅರುಣ್​ಕುಮಾರ್​, 132 ಜನರಿದ್ದ ಚೀನಾದ ಈಸ್ಟರ್ನ್​ ಏರ್​ಲೈನ್ಸ್​ ವಿಮಾನ ಪತನಗೊಂಡು ಆತಂಕ ಸೃಷ್ಟಿಸಿದೆ. ಹೀಗಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳಾದ ಸ್ಪೈಸ್‌ಜೆಟ್, ವಿಸ್ತಾರಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ವಿಮಾನ ಸುರಕ್ಷತೆಯು ಗಂಭೀರ ವ್ಯವಹಾರವಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮ ಬೋಯಿಂಗ್​ 737 ಸರಣಿಯ ವಿಮಾನಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂದಿದ್ದಾರೆ.

ಪತನಗೊಂಡ ಚೀನಾದ ವಿಮಾನದಲ್ಲಿ 132 ಜನರಲ್ಲಿ 123 ಪ್ರಯಾಣಿಕರು ಮತ್ತು 9 ಸಿಬ್ಬಂದಿ ಇದ್ದರು. ಯಾವುದೇ ವಿದೇಶಿ ಪ್ರಯಾಣಿಕರು ಇರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ದುರ್ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಳವಳ ವ್ಯಕ್ತಪಡಿಸಿದ್ದಾರೆ.

ಓದಿ: ನೋಯ್ಡಾದಲ್ಲಿ ದೇಗುಲಕ್ಕೆ ನುಗ್ಗಿ ಶಿವಲಿಂಗ ವಿರೂಪ: ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.