ಭದ್ರಾಕ್(ಒಡಿಶಾ): ಇಲ್ಲೊಂದು ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಮಕ್ಕಳು ಏನೇ ಮಾಡಿದರೂ ಚೆಂದಾ ಅಂತಾರೆ. ಆದರೆ, ಈ ವಿಡಿಯೋ ಮಾತ್ರ ದೇಶದ ಪರಿಸ್ಥಿತಿ ಹಾಗೂ ಕೆಲ ರಾಜಕಾರಣಿಗಳ ಬೇಜವಾಬ್ದಾರಿಗೆ ಹಿಡಿದ ಕೈ ಗನ್ನಡಿಯಂತಿದೆ.
ಭದ್ರಾಕ್‌ನ ಬಾಗ್ಮರಾ ಗ್ರಾಮದ ಮಕ್ಕಳು ಕಲ್ಲು, ಇಟ್ಟಿಗೆ ತುಂಡುಗಳನ್ನು ಸಂಗ್ರಹಿಸಿ ಸ್ವಯಂಪ್ರೇರಣೆಯಿಂದ ರಸ್ತೆಗಳನ್ನು ಸರಿಪಡಿಸುತ್ತಿರುವ ವಿಡಿಯೋ ಈಗ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಚಿಣ್ಣರು ಕಲ್ಲುಗಳನ್ನು ಹಾಳಾದ ರಸ್ತೆ ಹಾಗೂ ಗುಂಡಿಗೆ ತೆಗೆದುಕೊಂಡು ಹೋಗಿ ಸುರಿಯುತ್ತಿದ್ದಾರೆ.
ನಾವು ಈ ಸಂಬಂಧ ಮಾಹಿತಿಯನ್ನು ಪರಿಶೀಲಿಸಬೇಕಾಗಿದೆ. ಅದು ನಿಜವೆಂದು ತಿಳಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾಕ್ ಬಿಡಿಒ ಮನೋಜ್ ಬೆಹೆರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.