ETV Bharat / bharat

ಹೆತ್ತಮ್ಮನ ಚಿಕಿತ್ಸೆಗೋಸ್ಕರ ಹಣ ನೀಡಿ.. ಊರೂರು ತಿರುಗಿ ದೇಣಿಗೆ ಸಂಗ್ರಹಿಸುತ್ತಿರುವ ಮಕ್ಕಳು!

ಜಮೀನು ವಿವಾದದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹೆತ್ತಮ್ಮನ ಚಿಕಿತ್ಸೆಗೋಸ್ಕರ ಮಕ್ಕಳು ಹಣ ಸಂಗ್ರಹಿಸುತ್ತಿದ್ದಾರೆ. ಈ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

children
children
author img

By

Published : May 23, 2021, 5:54 PM IST

ಬಾರಾಬಂಕಿ(ಉತ್ತರ ಪ್ರದೇಶ): ಹೆತ್ತಮ್ಮನನ್ನು ಉಸಿಕೊಳ್ಳಬೇಕೆಂಬ ಮಹದಾಸೆಯಿಂದ ಮೂವರು ಚಿಕ್ಕ ಮಕ್ಕಳು ಊರೂರು ಸುತ್ತಿ ಹಣ ಸಂಗ್ರಹಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಹೆತ್ತಮ್ಮನ ಚಿಕಿತ್ಸೆಗೋಸ್ಕರ ಹಣ ಸಂಗ್ರಹ

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಭೂ-ವಿವಾದಕ್ಕೆ ಸಂಬಂಧಿಸಿದಂತೆ ಎದುರಾಳಿ ಗುಂಪಿನ ಕೆಲವರು ಈ ಮಕ್ಕಳ ತಾಯಿಯ ಮೇಲೆ ಹಲ್ಲೆ ನಡೆಸಿ, ಗಂಭೀರವಾಗಿ ಗಾಯಗೊಳಿಸಿದ್ದಾರೆ. ಹೀಗಾಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕ್ಕ ಮಕ್ಕಳು ಸುತ್ತಮುತ್ತಲಿನ ಊರುಗಳಿಗೆ ತೆರಳಿ ಅಮ್ಮನ ಚಿಕಿತ್ಸೆಗೋಸ್ಕರ ಹಣ ಸಂಗ್ರಹಿಸುತ್ತಿದ್ದಾರೆ.

barabanki
ಬಾರಾಬಂಕಿ ಪೊಲೀಸ್ ಠಾಣೆ

ಇದನ್ನೂ ಓದಿ: ಬೈಕ್​ ಸವಾರನಿಗೆ ಒದೆಯಲು​​ ಮುಂದಾದ ಎಎಸ್​ಐ​​​: ಪೊಲೀಸರ ನಡೆಗೆ ನೆಟ್ಟಿಗರಿಂದ ಆಕ್ರೋಶ

ಮಹಿಳೆ ಉರ್ಮಿಳಾ ಗಂಭೀರವಾಗಿ ಗಾಯಗೊಂಡಿರುವ ಆಕೆಯ ಯೋಗಕ್ಷೇಮ ನೋಡಿಕೊಳ್ಳಲು ಗಂಡ ಆಸ್ಪತ್ರೆಯಲ್ಲಿದ್ದಾರೆ. ಹಾಗಾಗಿ ಚಿಕಿತ್ಸೆಗೆ ಹಣ ಹೊಂದಿಸಲು ಯಾವುದೇ ಹಾದಿ ಕಾಣದಂತಾಗಿದೆ. ಜತೆಗೆ ಲಾಕ್​ಡೌನ್​ ಇರುವ ಕಾರಣ ತಮ್ಮ ಬಳಿ ಹಣವಿಲ್ಲ ಎಂದು ಈ ಕುಟುಂಬ ಅಳಲು ತೋಡಿಕೊಂಡಿದೆ. ಇದರ ಬೆನ್ನಲ್ಲೇ ಚಿಕ್ಕ ಮಕ್ಕಳು ತಮ್ಮ ತಾಯಿಯನ್ನು ಹೇಗಾದರೂ ಮಾಡಿ ಬದುಕಿಸಿಕೊಳ್ಳಬೇಕೆಂದು ಈ ನಿರ್ಧಾರ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.