ETV Bharat / bharat

15 ವರ್ಷ ಕಳೆದ್ರೂ ಮಕ್ಕಳಾಗಲಿಲ್ಲ: ಇಬ್ಬರು ಕಾಲ್​ ಗರ್ಲ್ಸ್​ ಬಲಿ ನೀಡಿದ ದಂಪತಿ - ಮಧ್ಯಪ್ರದೇಶ ಅಪರಾಧ ಸುದ್ದಿ

15 ವರ್ಷವಾದ್ರೂ ಸಂತಾನ ಭಾಗ್ಯ ದೊರೆಯದ ದಂಪತಿ ಮಾಟ-ಮಂತ್ರಗಳನ್ನು ನಂಬಿ ಇಬ್ಬರು ಕಾಲ್​ ಗರ್ಲ್ಸ್​ ಪ್ರಾಣ ತೆಗೆದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯಾರ್​ನಲ್ಲಿ ನಡೆದಿದೆ.

childless couple sacrifices 2 sex workers, childless couple sacrifices 2 sex workers in 1 week, childless couple sacrifices 2 sex workers in 1 week under black magic, MadyaPradesh news, MadyaPradesh crime news, 2 ಲೈಂಗಿಕ ಕಾರ್ಯಕರ್ತರನ್ನು ಬಲಿ ಕೊಟ್ ಮಕ್ಕಳಾಗದ ದಂಪತಿ, ಒಂದೇ ವಾರದಲ್ಲಿ 2 ಲೈಂಗಿಕ ಕಾರ್ಯಕರ್ತರನ್ನು ಬಲಿ ಕೊಟ್ ಮಕ್ಕಳಾಗದ ದಂಪತಿ, ಮಾಟಮಂತ್ರ ಪ್ರಭಾವದಿಂದಾಗಿ 2 ಲೈಂಗಿಕ ಕಾರ್ಯಕರ್ತರನ್ನು ಬಲಿ ಕೊಟ್ ಮಕ್ಕಳಾಗದ ದಂಪತಿ, ಮಧ್ಯಪ್ರದೇಶ ಸುದ್ದಿ, ಮಧ್ಯಪ್ರದೇಶ ಅಪರಾಧ ಸುದ್ದಿ,
ಕಾಲ್​ ಗರ್ಲ್ಸ್​ ಕೊಂದ ಆರೋಪಿಗಳ ಬಂಧನ
author img

By

Published : Oct 25, 2021, 8:37 AM IST

ಗ್ವಾಲಿಯಾರ್​: ಜಗತ್ತು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದರೂ ಕೆಲವು ಪ್ರದೇಶಗಳಲ್ಲಿ ಮೂಢನಂಬಿಕೆಗಳು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಮಾಟ-ಮಂತ್ರಗಳ ನೆಪದಲ್ಲಿ ಮುಗ್ಧ ಜೀವಗಳು ಬಲಿಯಾಗುತ್ತಿವೆ.

15 ವರ್ಷಗಳಿಂದಲೂ ಸಂತಾನ ಭಾಗ್ಯ ಕಾಣದ ದಂಪತಿ ಮಕ್ಕಳನ್ನು ಪಡೆಯಲು ಮಂತ್ರವಾದಿಗಳತ್ತ ಮುಖ ಮಾಡಿದ್ದಾರೆ. ಮಂತ್ರವಾದಿಗಳು ಹೇಳಿದ ಪ್ರಕಾರ ನಡೆದುಕೊಂಡಿರುವ ದಂಪತಿ ಇಬ್ಬರು ಕಾಲ್‌ ಗರ್ಲ್ಸ್ ಅ​ನ್ನು ಬಲಿ ಪಡೆದಿದ್ದಾರೆ.

ಪೊಲೀಸರ ತನಿಖೆ ಪ್ರಕಾರ, ಗ್ವಾಲಿಯಾರ್​ ನಗರದ ನಿವಾಸಿ ಬಂಟು ಬದೌರಿಯಾ ಮತ್ತು ಮಮತಾ ದಂಪತಿಗೆ 15 ವರ್ಷಗಳ ಹಿಂದೆ ವಿವಾಹವಾಗಿದೆ. ಆದ್ರೆ ಅವರಿಗೆ ಇಲ್ಲಿಯವರೆಗೂ ಮಕ್ಕಳಾಗಿಲ್ಲ. ಮಕ್ಕಳನ್ನು ಹೊಂದುವ ಉದ್ದೇಶದಿಂದಾಗಿ ಬದೌರಿಯಾ ದಂಪತಿ ತಮ್ಮ ಸ್ನೇಹಿತ ನೀರಜ್​ ಪರ್ಮಾರ್‌ನನ್ನು ಭೇಟಿ ಮಾಡಿದ್ದಾರೆ. ನೀರಜ್​ ಬೇರಾರೂ ಅಲ್ಲ, ಬಂಟು ಪತ್ನಿಯ ಸಹೋದರಿಯ ಬಾಯ್​ಫ್ರೆಂಡ್​ ಆಗಿದ್ದಾನೆ ಎಂದು ಗ್ವಾಲಿಯಾರ್​ ಎಸ್​ಪಿ ಅಮಿತ್​ ಸಾಂಘಿ ಹೇಳಿದ್ದಾರೆ.

ಮಾಟಮಂತ್ರ ಮಾಡುತ್ತಿದ್ದ ಮಂತ್ರವಾದಿ ಗಿರ್ವಾರ್​ ಯಾದವ್​ ಬಳಿ ಬಂಟು ಬದೌರಿಯಾರನ್ನು ದಂಪತಿಯನ್ನು ನೀರಜ್​ ಕರೆದೊಯ್ದಿದ್ದಾನೆ. ಆದ್ರೆ ವ್ಯಕ್ತಿಯೊಬ್ಬರ ಬಲಿ ನೀಡಿದ್ರೆ ನಿಮಗೆ ಸಂತಾನ ಭಾಗ್ಯ ಸಿಗುತ್ತೆ ಎಂದು ಮಂತ್ರವಾದಿ ಬದೌರಿಯಾ ದಂಪತಿಗೆ ನಂಬಿಸಿದ್ದಾನೆ. ಇದನ್ನು ನಂಬಿದ ದಂಪತಿ ವ್ಯಕ್ತಿಯನ್ನು ಬಲಿ ನೀಡಲು ಮುಂದಾಗಿದ್ದಾರೆ.

ಬಲಿಗಾಗಿ ವ್ಯಕ್ತಿ ಹುಡುಕಾಟದಲ್ಲಿ ನೀರಜ್​ ಪರ್ಮಾರ್ ನಿರತರಾಗಿದ್ದನು. ಈ ತಿಂಗಳು 13ನೇ ದಿನಾಂಕದಂದು ಸೆಕ್ಸ್​ ವರ್ಕರ್​ವೊಬ್ಬಳನ್ನು ಕರೆದೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಶವವನ್ನು ನೀರಜ್ ಮತ್ತು ನೀರಜ್​ನ ಗರ್ಲ್​ಫ್ರೆಂಡ್​ ಬೈಕ್​ ಮೇಲೆ ತರಲು ಯತ್ನಿಸಿದ್ದಾರೆ. ಈ ವೇಳೆ ರಸ್ತೆ ಮಧ್ಯೆದಲ್ಲಿ ಶವ ಕೆಳಗೆ ಬಿದ್ದಿದೆ. ಇದರಿಂದ ಗಾಬರಿಗೊಂಡ ಇಬ್ಬರು​ ಶವವನ್ನು ರಸ್ತೆಯ ಪಕ್ಕದಲ್ಲೇ ಎಸೆದು, ಆಕೆಯ ದೇಹದ ಮೇಲೆ ಎಲೆಗಳನ್ನು ಮುಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಷ್ಟಾದ್ರೂ ಸಹ ಅವರು ಬಲಿ ವಿಷಯದಲ್ಲಿ ಹಿಂದೆ ಸರಿಯಲಿಲ್ಲ. ವಾರದ ಬಳಿಕ ಅಂದ್ರೆ ಅಕ್ಟೋಬರ್​ 20ಕ್ಕೆ ಮತ್ತೊಂದು ಕಾಲ್​ ಗರ್ಲ್​ ಕರೆಸಿ ಆಕೆಗೆ ಮತ್ತು ಬರುವ ಔಷಧಿ ನೀಡಿ ಮಂತ್ರವಾದಿ ಬಳಿ ಕರೆದೊಯ್ದಿದ್ದಾರೆ. ಬಳಿಕ ಮಂತ್ರವಾದಿ ಪೂಜೆ ಮಾಡಿ ಆಕೆಯನ್ನು ಬಲಿ ಕೊಟ್ಟಿದ್ದಾನೆ ಎಂದು ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

ಮೊದಲು ಸಾವನ್ನಪ್ಪಿದ್ದ ಕಾಲ್​ ಗರ್ಲ್​ ದೇಹ ರಸ್ತೆ ಪಕ್ಕದಲ್ಲಿ ಬಿದ್ದಿರುವ ಸಂಗತಿ ಈ ತಿಂಗಳು 21ಕ್ಕೆ ಪೊಲೀಸರಿಗೆ ದೊರೆತಿತ್ತು. ಕೂಡಲೇ ಪೊಲೀಸರು ತನಿಖೆ ಪ್ರಾರಂಭಿಸಿದಾಗ ಪ್ರಮುಖ ಆರೋಪಿ ನೀರಜ್​ ಸಿಕ್ಕಿಬಿದ್ದಿದ್ದಾನೆ. ಬಳಿಕ ನೀರಜ್​ ನಡೆದ ಘಟನೆ ಬಗ್ಗೆ ಪೊಲೀಸರ ಮುಂದೆ ಎಳೆ-ಎಳೆಯಾಗಿ ಬಿಡಿಸಿ ಹೇಳಿದ್ದಾನೆ. ನಂತರ ಪೊಲೀಸರು ಮಂತ್ರವಾದಿ ಸಹಿತ ಐವರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.