ETV Bharat / bharat

ಚಾಕುವಿಗೆ ಸಿಲುಕಿ ಸಾವಿನ ದವಡೆಯಿಂದ ಬಾಲಕ ಪಾರು, ಕೋತಿಗಳ ರೂಪದಲ್ಲಿ ಕೊನೆಗೂ ಬಿಡದ ಸಾವು - ಬಾಲಕನಿಗೆ ಕೋತಿಗಳ ರೂಪದಲ್ಲಿ ಬಂದ ಸಾವು

ಮನೆಯ ಛಾವಣಿ ಮೇಲೆ ಕೋತಿಗಳ ಓಡಾಟದಿಂದ ಕಲ್ಲು ಬಿದ್ದು ಎರಡೂವರೆ ವರ್ಷದ ಬಾಲಕ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.

Child survives knife cut but dies in a quirky raid by monkeys
ಬಾಲಕನಿಗೆ ಕೋತಿಗಳ ರೂಪದಲ್ಲಿ ಬಂದ ಸಾವು
author img

By

Published : Apr 18, 2023, 5:10 PM IST

ಹುಸ್ನಾಬಾದ್ (ತೆಲಂಗಾಣ): ವಿಧಿಯಾಟ ಬಲ್ಲವರಾರು ಎಂಬ ಮಾತಿದೆ. ನಾಲ್ಕು ತಿಂಗಳ ಹಿಂದೆ ಪ್ರಾಣಾಪಾಯದ ಸ್ಥಿತಿಗೆ ತಲುಪಿದ್ದ ಪುಟ್ಟ ಮಗುವೊಂದನ್ನು ಪೋಷಕರು ಲಕ್ಷಾಂತರ ಹಣ ಖರ್ಚು ಮಾಡಿ ಬದುಕಿಸಿಕೊಂಡಿದ್ದರು. ಆದರೆ, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಆ ಮಗುವಿಗೆ ಸಾವು ಕೋತಿಗಳ ರೂಪದಲ್ಲಿ ಬಂದೆರಗಿದೆ.

ಇದನ್ನೂ ಓದಿ: ಅನ್ನನಾಳದಲ್ಲಿ ಸಿಲುಕಿದ್ದ ಹನುಮಂತನ ಮೂರ್ತಿ ಹೊರತೆಗೆದು ಮಗುವಿನ ಜೀವ ಉಳಿಸಿದ ವೈದ್ಯರು..!

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಹುಸ್ನಾಬಾದ್‌ ಜಿಲ್ಲೆಯ ಕಾಟ್ಕೂರು ಗ್ರಾಮದಲ್ಲಿ ಇಂತಹದ್ದೊಂದು ದುರಂತ ವರದಿಯಾಗಿದೆ. ಸೋಮವಾರ ಕೋತಿಗಳ ಓಡಾಟದಿಂದ ಕಲ್ಲು ಬಿದ್ದು ಎರಡೂವರೆ ವರ್ಷದ ಅಭಿನವ್ ಎಂಬ ಮಗು ಮೃತಪಟ್ಟಿತು. ದೇವನೂರಿ ಶ್ರೀಕಾಂತ್ ಮತ್ತು ರಜಿತಾ ಎಂಬ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ತಿಂಗಳ ಹಿಂದಷ್ಟೇ ಅಭಿನವ್ ಮನೆಯಲ್ಲಿ ಬಾಗಿಲು ದಾಟುವಾಗ ಕಾಲು ಜಾರಿ ಬಿದ್ದಿದ್ದ. ಆಗ ನೆಲದ ಮೇಲಿದ್ದ ಚಾಕು ಆತನಿಗೆ ತಗುಲಿ ಕತ್ತಿಗೆ ಪೆಟ್ಟಾಗಿತ್ತು. ನಾಲ್ಕು ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಾಲಕ ಚೇತರಿಸಿಕೊಂಡಿದ್ದ. ಆದರೆ, ಇದರ ನಡುವೆ ವಿಧಿಯಾಟವೇ ಬೇರೆಯಾಗಿದೆ.

ಇದನ್ನೂ ಓದಿ: ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶ್ರೀಕಾಂತ್-ರಜಿತಾ ದಂಪತಿ ಸ್ಲ್ಯಾಬ್ ಹಾಕಿರುವ ಮನೆ ಹೊಂದಿದ್ದಾರೆ. ಗಾಳಿ ಮತ್ತು ಬೆಳಕಿಗಾಗಿ ಕೊಠಡಿಗಳು ಮತ್ತು ಅಡುಗೆಮನೆ ನಡುವೆ ಖಾಲಿ ಜಾಗ ಬಿಡಲಾಗಿದೆ. ಈ ಖಾಲಿ ಜಾಗದಲ್ಲಿ ಹೆಚ್ಚಿನ ಗಾಳಿಗೆ ವಸ್ತುಗಳು ಹಾರಿಹೋಗದಂತೆ ತಡೆಯಲು ಹಗುರವಾದ ಮರದ ತಪ್ಪಲಿನ ಛಾವಣಿ ಹಾಕಿ ಕಲ್ಲುಗಳನ್ನು ಇಟ್ಟಿದ್ದರು. ಸೋಮವಾರ ಮಂಗಗಳು ಇದೇ ಖಾಲಿ ಜಾಗದಿಂದ ಮನೆಗೆ ನುಗ್ಗಿವೆ. ಇದನ್ನು ಗಮನಿಸಿದ ರಜಿತಾ ಮಂಗಗಳನ್ನು ಓಡಿಸಲು ಅಡುಗೆ ಕೋಣೆಗೆ ಹೋಗಿದ್ದಾರೆ. ಆಗ ಮಗ ಅಭಿನವ್ ಸಹ ಜೊತೆಗಿದ್ದ. ಇದೇ ವೇಳೆ ಮಂಗಗಳು ಖಾಲಿ ಜಾಗದಿಂದ ಓಡಿ ಹೋಗಲು ಯತ್ನಿಸಿ ಮರದ ತಪ್ಪಲಿನ ಛಾವಣಿ ಮೇಲೇರಿಸಿದ್ದ ಕಲ್ಲುಗಳ ಮೇಲೆ ಜಿಗಿದಿವೆ. ಆ ಕಲ್ಲುಗಳು ಕೆಳಗಡೆ ಜಾರಿ ನೇರವಾಗಿ ಬಾಲಕನ ತಲೆ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸರಪಂಚ್ ಅಶೋಕ್ ರೆಡ್ಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆಯಿಂದ ತಮ್ಮ ಪ್ರೀತಿಯ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ. ಕುಟುಂಬದ ಸ್ನೇಹಿತರು ಮತ್ತು ನೆರೆಹೊರೆಯವರನ್ನೂ ಶೋಕದಲ್ಲಿ ಮುಳಗಿಸುವಂತೆ ಮಾಡಿದೆ.

ಇದನ್ನೂ ಓದಿ: ಮೂರಂಸ್ತಿನ ರೈಸ್​ ಮಿಲ್​ ಕಟ್ಟಡ ಕುಸಿತ: ಇಬ್ಬರ ಸಾವು, 30 ಕ್ಕೂ ಅಧಿಕ ಮಂದಿ ನಾಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.