ರಾಜಣ್ಣ ಸಿರಸಿಲ್ಲ(ತೆಲಂಗಾಣ): ಪ್ರತಿದಿನವೂ ಮಲಗುವ ತೊಟ್ಟಿಲು ಆ ಮಗುವಿಗೆ ನೇಣು ಹಗ್ಗವಾಗಿ ಪರಿಣಮಿಸಿದೆ. ತೊಟ್ಟಿಲಿಗೆ ಕಟ್ಟಿರುವ ಹಗ್ಗದ ಮಧ್ಯೆ ಎಂಟು ತಿಂಗಳ ಮಗುವಿನ ಕುತ್ತಿಗೆ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗಂಭೀರರಾವ್ ಪೇಟೆ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.
ಸಂಬಂಧಿಕರು ಮತ್ತು ಕುಟುಂಬಸ್ಥರ ಪ್ರಕಾರ, ಮುಸ್ತಫಾನಗರ ಗ್ರಾಮದ ಬಂಡಿ ದಿಲೀಪ್ ಮತ್ತು ಕಲ್ಯಾಣಿ ಅವರಿಗೆ ಒಬ್ಬ ಮಗ (3 ವರ್ಷ) ಮತ್ತು ಮಗಳು (8 ತಿಂಗಳು) ಇದ್ದರು. ದಿಲೀಪ್ ತಹಶೀಲ್ದಾರ್ ಕಚೇರಿಯಲ್ಲಿ ವಿಆರ್‌ಎ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬ ಮನೆಯೊಂದರ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದೆ.
ಮಂಗಳವಾರ ಬೆಳಗ್ಗೆ ಒಂಬತ್ತು ಗಂಟೆ ವೇಳೆಗೆ ದಿಲೀಪ್ ಮಲಗಿದ್ದಾಗ ತಾಯಿ ತನ್ನ ಮಗಳು ಐರಾಳನ್ನು ನೈಲಾನ್ ಹಗ್ಗದಿಂದ ಕಟ್ಟಿದ ತೊಟ್ಟಿಲಲ್ಲಿ ಹಾಕಿದ್ದಾರೆ. ಮಗುವಿನ ಮೇಲೆ ಬೇಬಿ ಶಾಲ್ ಅನ್ನು ಸಹ ಹಾಕಿದ್ದರು. ಬಳಿಕ ತಾಯಿ ಮನೆ ಕೆಳಗೆ ಬಟ್ಟೆ ಒಗೆಯಲು ತೆರಳಿದ್ದರು. ಮಲಗಿದ್ದ ಐರಾ ನಿದ್ದೆಯಿಂದ ಎದ್ದು ತೊಟ್ಟಿಲಲ್ಲೇ ಒದ್ದಾಡಿದ್ದಾಳೆ. ಈ ಕ್ರಮದಲ್ಲಿ ನೈಲಾನ್ ಹಗ್ಗದ ಮಧ್ಯೆ ಐರಾಳ ತಲೆ ಸಿಲುಕಿಕೊಂಡಿತ್ತು. ಉಸಿರುಗಟ್ಟುವಿಕೆಯಿಂದ ಐರಾ ಮೂರ್ಛೆ ಹೋಗಿದ್ದಳು. ಬಟ್ಟೆ ತೊಳೆದ ನಂತರ ತಾಯಿ ಹಿಂತಿರುಗಿ ಮಗುವನ್ನು ಗಮನಿಸಿದರು. ಮಲಗಿದೆ ಎಂದುಕೊಂಡಿದ್ದ ತಾಯಿ ಮಗುವಿನ ಚಲನವಲನ ಇಲ್ಲದ ಕಾರಣ ಶಾಲ್ ತೆಗೆದು ನೋಡಿದ್ದಾರೆ. ಮೂರ್ಛೆ ಹೋಗಿದ್ದ ಮಗುವನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಉಸಿರುಗಟ್ಟಿ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಗಂಭೀರ್‌ಪೇಟೆ ಎಸ್‌ಎಸ್‌ಐ ಮಹೇಶ್ ತಿಳಿಸಿದ್ದಾರೆ.
ಓದಿ: ನವಜಾತ ಶಿಶು ಆಸ್ಪತ್ರೆಯಿಂದ ಕದ್ದೊಯ್ದ ಯುವಕ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ