ETV Bharat / bharat

ಗಣರಾಜ್ಯೋತ್ಸವ ಸಂಭ್ರಮದ ವೇಳೆ ವಿದ್ಯುತ್​​ ಸ್ಪರ್ಶ; ಓರ್ವ ವಿದ್ಯಾರ್ಥಿ ಸಾವು, ಮೂವರು ಮಕ್ಕಳಿಗೆ ಗಾಯ - ವಿದ್ಯುತ್​ ಸ್ಪರ್ಶದಿಂದ ವಿದ್ಯಾರ್ಥಿ ದುರ್ಮರಣ

Traumatic Accident In Buxar : ಗಣರಾಜ್ಯೋತ್ಸವದ ವೇಳೆ ಧ್ವಜಾರೋಹಣ ಮಾಡ್ತಿದ್ದ ಸಂದರ್ಭದಲ್ಲಿ ವಿದ್ಯುತ್​ ಸ್ಪರ್ಶವಾಗಿದ್ದು, ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..

Traumatic Accident In Buxar
Traumatic Accident In Buxar
author img

By

Published : Jan 26, 2022, 4:23 PM IST

ಬಕ್ಸಾರ್​(ಬಿಹಾರ) : ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡ್ತಿದ್ದಾಗ ವಿದ್ಯುತ್​​ ಸ್ಪರ್ಶದಿಂದ ಓರ್ವ ಮಗು ಸಾವನ್ನಪ್ಪಿದ್ದು, ಉಳಿದಂತೆ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬಿಹಾರದ ಬಕ್ಸಾರ್​​ನ ಇಟಾರ್ಹಿ ಬ್ಲಾಕ್​​ನ ನಾಥ್​ಪುರ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವ ಮೂವರು ಮಕ್ಕಳನ್ನ ಈಗಾಗಲೇ ವೈದ್ಯಕೀಯ ಚಿಕಿತ್ಸೆಗಾಗಿ ಸದರ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಮುಂದುವರೆದಿದೆ.

ಘಟನೆ ಬೆನ್ನಲ್ಲೇ ಆಕ್ರೋಶಗೊಂಡಿರುವ ಗ್ರಾಮಸ್ಥರು ರಸ್ತೆ ತಡೆ ನಡೆಸಿ, ಕೆಲಕಾಲ ಪ್ರತಿಭಟನೆ ನಡೆಸಿದ್ದು, ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿರಿ: ವಯಸ್ಸು ಬರೋಬ್ಬರಿ 126.. ಶಿವನ ಆರಾಧಕನಿಗೆ ಒಲಿದ 'ಪದ್ಮಶ್ರೀ'.. ಬಾಬಾ ಶಿವಾನಂದ​ ಅವರ ಆರೋಗ್ಯದ ಗುಟ್ಟು ಗೊತ್ತಾ?

ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಧ್ವಜಾರೋಹಣ ಮಾಡ್ತಿದ್ದಾಗ ತ್ರಿವರ್ಣ ಧ್ವಜದ ಕಂಬ ದಿಢೀರ್​​ ಆಗಿ ವಿದ್ಯುತ್​ ತಂತಿ ಮೇಲೆ ಬಿದ್ದಿದೆ. ಈ ವೇಳೆ ವಿದ್ಯುತ್​ ಸ್ಪರ್ಶದಿಂದ ದುರ್ಘಟನೆ ನಡೆದಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.