ETV Bharat / bharat

ಲೂಡೋ ಆಡುತ್ತಿದ್ದ ಮಗನ ಕೊಂದು ರಹಸ್ಯವಾಗಿ ಮಣ್ಣು ಮಾಡಿದ ತಂದೆ: ಕೃತ್ಯ ಬಾಯ್ಬಿಡದಂತೆ ಪತ್ನಿಗೂ ಬೆದರಿಕೆ! - ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ತಂದೆಯಿಂದ ಮಗನ ಕೊಲೆ

ತಾನು ಥಳಿಸಿರುವುದರಿಂದಲೇ ಮಗ ಮೃತಪಟ್ಟಿರುವುದು ಅರಿತ ಆರೋಪಿ ತಂದೆ ನಂತರ ರಹಸ್ಯವಾಗಿ ಅಂತ್ಯಕ್ರಿಯೆ ಮಾಡಿದ್ದಾನೆ. ಅಲ್ಲದೇ, ಮಗನ ಕೊಲೆ ಬಗ್ಗೆ ಯಾರಿಗೂ ಹೇಳಿದಂತೆ ಪತ್ನಿಗೂ ಜೀವ ಬೆದರಿಕೆ ಹಾಕಿದ್ದ ಆರೋಪಿ ಈಗ ಜೈಲು ಸೇರಿದ್ದಾನೆ.

child-died-after-beating-father-over-playing-ludo-in-azamgarh
ಲೂಡೋ ಆಡುತ್ತಿದ್ದ ಮಗನ ಕೊಂದು ರಹಸ್ಯವಾಗಿ ಮಣ್ಣು ಮಾಡಿದ ತಂದೆ
author img

By

Published : Jun 11, 2022, 9:10 PM IST

ಅಜಂಗಢ ( ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೊಬೈಲ್​ನಲ್ಲಿ ಲೂಡೋ ಆಡವಾಡುತ್ತಿದ್ದ ಎಂಟು ವರ್ಷದ ಮಗನನ್ನು ತಂದೆ ಹೊಡೆದು ಕೊಲೆ ಮಾಡಿ, ನಂತರ ರಹಸ್ಯವಾಗಿ ಅಂತ್ಯಕ್ರಿಯೆ ಮಾಡಿದ್ದಾನೆ. ನಂತರ ಈ ವಿಷಯ ಯಾರಿಗೂ ತಿಳಿಯದಂತೆ ಪತ್ನಿಗೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

ಇಲ್ಲಿನ ರೌನಪರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹುಲಾ ಬಗೀಚಾ ಗ್ರಾಮದಲ್ಲಿ ಜೂ.9ರಂದು ಈ ಘಟನೆ ನಡೆದಿದೆ. ಅಂದು ಬಾಲಕ ಧರ್ಮವೀರ್​ (8) ಮನೆಯ ಬಳಿಯೇ ಮೇಕೆ ಮೇಯಿಸುತ್ತಿದ್ದ. ಇದರ ನಡುವೆ ಬಿಡುವಿನ ವೇಳೆಯಲ್ಲಿ ಮೊಬೈಲ್​​ನಲ್ಲಿ ಲೂಡೋ ಆಡುತ್ತಿದ್ದ. ಇದನ್ನು ಕಂಡ ತಂದೆ ಜಿತೇಂದ್ರ ಕೋಪಗೊಂಡ ಮಗನಿಗೆ ತೀವ್ರವಾಗಿ ಥಳಿಸಿದ್ದಾನೆ. ಇದಾದ ಬಳಿಕ ಮನೆಗೆ ಕರೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾನೆ. ನಂತರ ರಾತ್ರಿ 9.30ರ ಸುಮಾರಿಗೆ ಕೊಠಡಿಗೆ ಹೋಗಿ ನೋಡಿದಾಗ ಧರ್ಮವೀರ್​ ಸಾವನ್ನಪ್ಪಿದ್ದಾನೆ.

ಉತ್ತರ ಪ್ರದೇಶದ ಅಜಂಗಢ ಹೆಚ್ಚುವರಿ ಎಸ್​​ಪಿ ಸಿದ್ಧಾರ್ಥ್

ರಹಸ್ಯವಾಗಿ ಅಂತ್ಯಕ್ರಿಯೆ: ತಾನು ಥಳಿಸಿರುವುದರಿಂದಲೇ ಮಗ ಮೃತಪಟ್ಟಿರುವುದನ್ನು ಅರಿತ ಆರೋಪಿ ತಂದೆ ಜಿತೇಂದ್ರ ನಂತರ ರಹಸ್ಯವಾಗಿ ಅಂತ್ಯಕ್ರಿಯೆ ಮಾಡಿದ್ದಾನೆ. ತನ್ನ ಸಹೋದರ ಉಪೇಂದ್ರ ಮತ್ತು ನೆರೆಮನೆಯ ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ಪಾಪಿ ತಂದೆ ಮಗನ ಶವವನ್ನು ಗೋಣಿಚೀಲಗಳಲ್ಲಿ ಹಾಕಿಕೊಂಡು ನದಿಯ ದಡದಲ್ಲಿ ಮಣ್ಣು ಮಾಡಿ ಬಂದಿದ್ದಾನೆ.

ಪತ್ನಿಗೂ ಜೀವ ಬೆದರಿಕೆ: ಮಗನ ಕೊಲೆ ಬಗ್ಗೆ ಯಾರಿಗಾದರೂ ಹೇಳಿದರೆ ಆಕೆಯನ್ನೂ ಕೊಲೆ ಮಾಡುವುದಾಗಿ ಪತ್ನಿ ಬಬಿತಾರಿಗೂ ಜಿತೇಂದ್ರ ಜೀವ ಬೆದರಿಕೆ ಹಾಕಿದ್ದಾನೆ. ಆದರೆ, ಬಾಲಕ ಸಾವನ್ನಪ್ಪಿರುವ ಸುದ್ದಿ ಅದೇಗೋ ಮೌ ಜಿಲ್ಲೆಯಲ್ಲಿರುವ ಬಬಿತಾರ ತಾಯಿ ಮುನ್ರಾ ದೇವಿಗೆ ಗೊತ್ತಾಗಿದೆ. ಅಂತೆಯೇ, ಪರಿಚಯಸ್ಥ ಪವನ್ ರೈ ಎಂಬುವವರ ಜೊತೆಗೆ ಮುನ್ರಾ ದೇವಿ ಮನೆಗೆ ತಲುಪಿದ್ದಾರೆ. ಅಲ್ಲಿ ಮೊಮ್ಮಗ ಕೊಲೆಯಾದ ವಿಷಯ ಖಚಿತವಾದ ಬಳಿಕ ಪೊಲೀಸ್​ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ.

ಆಗ ಪೊಲೀಸರು ಬಂದು ಆರೋಪಿ ಜಿತೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನ ಕೃತ್ಯ ಪಾಪಿ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಪೊಲೀಸರು ನದಿಯ ದಡದಲ್ಲಿ ಮಣ್ಣು ಮಾಡಲಾಗಿದ್ದ ಬಾಲಕನ ಶವವನ್ನು ಹೊರಗೆತೆದು ಮರಣೋತ್ತರ ಪರೀಕ್ಷೆ ಕೈಗೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಪಿಎಂ ರೋಜಗಾರ್ ಯೋಜನೆಯಡಿ ಪಡೆದ ಆಟೋಗೆ ಮೋದಿ, ಭಾಗವತ್ ಫೋಟೋ ಹಾಕಿದ ಮುಸ್ಲಿಂ ವ್ಯಕ್ತಿಗೆ ಸಂಕಷ್ಟ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.