ನವದೆಹಲಿ: ಆಗಸ್ಟ್ 26 ರಂದು ನಿವೃತ್ತಿ ಹೊಂದಲಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ತಮ್ಮ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡುವಂತೆ ಕಾನೂನು ಸಚಿವರು ಸೂಚಿಸಿದ್ದಾರೆ. ನಿನ್ನೆ ಮುಖ್ಯ ನ್ಯಾಯಾಧೀಶರ ಸಚಿವಾಲಯ ಸಿಜೆಐ ಎನ್ ವಿ ರಮಣ್ ಅವರಿಗೆ ತಮ್ಮ ಉತ್ತರಾಧಿಕಾರಿ ಯ ಹೆಸರನ್ನು ಶಿಫಾರಸು ಮಾಡುವಂತೆ ವಿನಂತಿ ಮಾಡಿದೆ.
ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ನ್ಯಾಯಮೂರ್ತಿ ಯು.ಯು ಲಲಿತ್ ಅವರು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವ ಸರತಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಸುಪ್ರೀಂಕೋರ್ಟ್‌ಗೆ ನೇರವಾಗಿ ನೇಮಕಗೊಂಡಿರುವ ಯು.ಯು ಲಲಿತ್ ಅವರು ನವೆಂಬರ್ 8 ರಂದು ನಿವೃತ್ತಿ ಹೊಂದಲಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಮೂರು ತಿಂಗಳಿಗಿಂತ ಕಡಿಮೆ ಅವಧಿ ಹೊಂದಿರುತ್ತಾರೆ.
ನಿಯಮದ ಪ್ರಕಾರ, ಕಾನೂನು ಸಚಿವರು ತಮ್ಮ ನಿವೃತ್ತಿ ಹೊಂದುವ ಸಿಜೆಐ ಅವರಿಂದ ತಮ್ಮ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡಲು ಶಿಫಾರಸು ಕೇಳಲಾಗುತ್ತದೆ. ಸಾಮಾನ್ಯವಾಗಿ, ಭಾರತದ ಹಾಲಿ ಮುಖ್ಯ ನ್ಯಾಯಮೂರ್ತಿ ನಿವೃತ್ತರಾಗುವ ಒಂದು ತಿಂಗಳೊಳಗೆ ಈ ಶಿಫಾರಸು ಕೇಳಲಾಗುತ್ತದೆ.