ನವದೆಹಲಿ: ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ವಿವಾದಿತ ಪ್ರದೇಶದಲ್ಲಿ'ಚೀನಾ 100 ಮನೆಗಳ ಗ್ರಾಮ' ನಿರ್ಮಿಸಿದೆ ಎಂಬ ಬಿಜೆಪಿ ಸಂಸದ ತಾಪೀರ್ ಗಾವೋ ಹೇಳಿಕೆಗೆ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಸರ್ಕಾರದಿಂದ ಉತ್ತರ ಕೇಳಿದ್ದಾರೆ.
ಬಿಜೆಪಿ ಸಂಸದರು ಮಾಡಿದ ಆರೋಪ ನಿಜವಾಗಿದ್ದರೆ, ಸರ್ಕಾರ ಮತ್ತೆ ಚೀನಾಕ್ಕೆ ಕ್ಲೀನ್ ಚಿಟ್ ನೀಡುತ್ತದೆಯೇ ಅಥವಾ ಅದಕ್ಕೆ ಹಿಂದಿನ ಸರ್ಕಾರಗಳನ್ನು ದೂಷಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಅರುಣಾಚಲ ಪ್ರದೇಶ ಭಾರತೀಯ ರಾಜ್ಯ. ಆದರೆ, ಚೀನಾ ಇದನ್ನು ತನ್ನ ಪ್ರದೇಶ ಎಂದು ಪರಿಗಣಿಸುತ್ತದೆ. ಎರಡು ನೆರೆಯ ರಾಷ್ಟ್ರಗಳ ನಡುವೆ ಗಡಿ ವಿವಾದವಿದ್ದು, ಕಳೆದ ವರ್ಷ ಜೂನ್‌ನಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆಫ್ ಆರ್ಮಿ (ಪಿಎಲ್‌ಎ) ನಡುವೆ ರಕ್ತಸಿಕ್ತ ಘರ್ಷಣೆಯ ನಂತರ ಪೂರ್ವ ಲಡಾಖ್‌ನಲ್ಲಿ ಸೈನ್ಯವನ್ನು ನಿರ್ಮಿಸಲಾಗಿದೆ. ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಭಾರತ 20 ಸೈನಿಕರನ್ನು ಕಳೆದುಕೊಂಡಿದೆ. ಚೀನಾ ಸಹ ಅನೇಕ ಸೈನಿಕರನ್ನು ಕಳೆದುಕೊಂಡಿದ್ದು, ಅದು ಸಾವು - ನೋವುಗಳ ಬಗ್ಗೆ ಬಹಿರಂಗಪಡಿಸಿಲ್ಲ.
ಅರುಣಾಚಲ ಪ್ರದೇಶದ ವಿವಾದಿತ ಪ್ರದೇಶದಲ್ಲಿ ಚೀನಾ 100 ಮನೆಗಳ ಗ್ರಾಮ, ಬಜಾರ್ ಮತ್ತು ಎರಡು ಪಥದ ರಸ್ತೆಯನ್ನು ನಿರ್ಮಿಸಿದೆ ಎಂದು ಬಿಜೆಪಿ ಸಂಸದ ತಾಪೀರ್ ಗಾವೋ ಆರೋಪಿಸಿದ್ದಾರೆ. ಇದು ನಿಜವಾಗಿದ್ದರೆ, ವಿವಾದಿತ ಪ್ರದೇಶವನ್ನು ಚೀನಾದ ಪ್ರಜೆಗಳ ಶಾಶ್ವತ ವಸಾಹತು ಪ್ರದೇಶವನ್ನಾಗಿ ಪರಿವರ್ತಿಸುವ ಮೂಲಕ ಚೀನಿಯರು ಯಥಾಸ್ಥಿತಿಯನ್ನು ಬದಲಾಯಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಈ ಚಕಿತಗೊಳಿಸುವ ಸಂಗತಿಗಳ ಬಗ್ಗೆ ಸರ್ಕಾರ ಏನು ಹೇಳುತ್ತದೆ. ಸರ್ಕಾರ ಚೀನಾಕ್ಕೆ ಮತ್ತೊಂದು ಕ್ಲೀನ್ ಚಿಟ್ ನೀಡುತ್ತದೆಯೇ? ಅಥವಾ ಹಿಂದಿನ ಸರ್ಕಾರಗಳನ್ನು ದೂಷಿಸುತ್ತದೆಯೇ ಎಂದು ಸರಣಿ ಟ್ಟೀಟ್ ಮೂಲಕ ಕಿಡಿಕಾರಿದ್ದಾರೆ.