ETV Bharat / bharat

ದಂತೇವಾಡ ಎನ್‌ಕೌಂಟರ್‌ನಲ್ಲಿ ಮೋಸ್ಟ್‌ ವಾಂಟೆಡ್​ ಮಹಿಳಾ ನಕ್ಸಲ್ ಹತ್ಯೆ

24 ವರ್ಷದ ಮೋಸ್ಟ್​ ವಾಂಟೆಡ್​ ಮಹಿಳಾ ನಕ್ಸಲ್​ಳನ್ನು ಛತ್ತೀಸ್​ಗಢದ ದಂತೇವಾಡದಲ್ಲಿ ಭದ್ರತಾ ಪಡೆ ಹೊಡೆದುರುಳಿಸಿದೆ. ಈಕೆಯ ಇರುವಿಕೆಯ ಸುಳಿವು ನೀಡಿದವರಿಗೆ 2 ಲಕ್ಷ ರೂ. ನೀಡುವುದಾಗಿ ಈ ಹಿಂದೆ ಪೊಲೀಸರು ಘೋಷಿಸಿದ್ದರು.

Woman Naxal
ದಂತೇವಾಡ ಎನ್‌ಕೌಂಟರ್‌ನಲ್ಲಿ ವಾಂಟೆಡ್​ ಮಹಿಳಾ ನಕ್ಸಲ್ ಹತ್ಯೆoman Naxal
author img

By

Published : May 31, 2021, 11:14 AM IST

ದಂತೇವಾಡ: ಛತ್ತೀಸ್​ಗಢದ ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಯ ಗುಂಡೇಟಿಗೆ ಮೋಸ್ಟ್​ ವಾಂಟೆಡ್​ ಮಹಿಳಾ ನಕ್ಸಲ್​​ಳನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಂತೇವಾಡದ ಗೀದಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗುಮಾಲ್ನರ್ ಗ್ರಾಮದ ಬಳಿ ಭದ್ರತಾ ಪಡೆಯು ನಕ್ಸಲ್ ವಿರೋಧಿ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ಇಂದು ಬೆಳಗ್ಗೆ 6.30 ರ ಸುಮಾರಿಗೆ ನಕ್ಸಲರು ಗುಂಡು ಹಾರಿಸಿದ್ದಾರೆ. ಈ ವೇಳೆ ನಡೆದ ಎನ್​​ಕೌಂಟರ್​ನಲ್ಲಿ ಮಹಿಳಾ ನಕ್ಸಲ್ ವೈಕೊ ಪೆಕ್ಕೊ (24)ಳನ್ನು ಹೊಡೆದುರುಳಿಸಲಾಗಿದೆ. ಉಳಿದ ನಕ್ಸಲರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಮುಂದುವರೆದ ಮಿಲಿಟರಿ ವಿರೋಧಿ ಸಂಘರ್ಷ: ಈವರೆಗೆ ಬಲಿಯಾದ ಜನರೆಷ್ಟು ಗೊತ್ತೇ?

ವೈಕೊ ಪೆಕ್ಕೊಗಾಗಿ ಅನೇಕ ದಿನಗಳಿಂದ ಪೊಲೀಸರು ಬಲೆ ಬೀಸಿದ್ದು, ಈಕೆಯ ಇರುವಿಕೆಯ ಸುಳಿವು ನೀಡಿದವರಿಗೆ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಇನ್ನು ಘಟನಾ ಸ್ಥಳದಿಂದ ಈಕೆಯ ಮೃತದೇಹವನ್ನು ಹಾಗೂ ನಾಡ ಬಂದೂಕುಗಳು, 2 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸೇರಿದಂತೆ ಇತರ ಶಸ್ತ್ರಾಸ್ತ್ರ-ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಂತೇವಾಡ ಪೊಲೀಸ್​ ವರಿಷ್ಠಾಧಿಕಾರಿ ಅಭಿಶೇಕ್​ ಪಲ್ಲವಾ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.