ETV Bharat / bharat

ಈ ಪ್ರದೇಶದಲ್ಲಿವೆ ಸಾವಿರ ವಿವಿಧ ಬಗೆಯ ಮಾವು..! ಏನುಂಟು ಏನಿಲ್ಲ...!! - ಸಾವಿರ ವಿವಿಧ ತಳಿಗಳ ಹಣ್ಣಿಗೆ ಬಸ್ತಾರ್​ ಪ್ರಸಿದ್ಧ

ಬಸ್ತಾರ್‌ನ ಪ್ರಸಿದ್ಧ ಇಂದ್ರಾವತಿ ನದಿಯ ದಡದ ಪಕ್ಕದಲ್ಲಿರುವ ಈ ತೋಟದಲ್ಲಿ ನೈಸರ್ಗಿಕವಾಗಿ ಬೆಳೆಯುವ ಮಾವು ಸಾಕಷ್ಟು ರಸಭರಿತ ಮತ್ತು ರುಚಿಯಾಗಿತ್ತದೆ. ಬೇಸಿಗೆ ಕಾಲದಲ್ಲಿ ಇಲ್ಲಿನ ಜನರ ಆದಾಯದ ಮೂಲವೇ ಮಾವು. ಶತಮಾನಕ್ಕಿಂತ ಹಿಂದಿನಿಂದಲೂ ಇರುವ ಈ ತೋಟದಲ್ಲಿ 1,000 ವಿಧದ ಮಾವಿನಹಣ್ಣುಗಳಿವೆ.

ಶತಮಾನದ ಸಹಸ್ರ ಮಾವು
ಶತಮಾನದ ಸಹಸ್ರ ಮಾವು
author img

By

Published : Jun 14, 2021, 6:14 PM IST

ಜಗದಲ್ಪುರ: ನೈಸರ್ಗಿಕ ಸೌಂದರ್ಯ ಮತ್ತು ದಟ್ಟ ಕಾಡುಗಳಿಂದ ಆವೃತವಾಗಿರುವ ಬಸ್ತಾರ್ ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ಪ್ರವಾಸಿ ಸ್ಥಳಗಳು ಮತ್ತು ಪ್ರಸಿದ್ಧ ಸಾಲ್ ವ್ಯಾನ್ ಬಸ್ತಾರ್‌ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಬಸ್ತಾರ್​ನಲ್ಲಿ ಯಥೇಚ್ಛವಾಗಿ ಅರಣ್ಯ ಉತ್ಪನ್ನಗಳಿರುವುದರಿಂದ ಬಹಳ ಶ್ರೀಮಂತ ಪ್ರದೇಶವಾಗಿದೆ. ಇಲ್ಲಿನ ಅರಣ್ಯ ಉತ್ಪನ್ನಗಳು ದೇಶ ಮತ್ತು ವಿದೇಶಗಳಿಗೆ ರಫ್ತಾಗುತ್ತವೆ. ವಿಶೇಷವಾಗಿ ಹುಣಸೆ ಹಣ್ಣು, ಮಾವಿನಹಣ್ಣು ಚಿರೋಂಜಿ ಇಲ್ಲಿನ ಬುಡಕಟ್ಟು ಜನರಿಗೆ ಪ್ರಮುಖ ಆದಾಯದ ಮೂಲಗಳಾಗಿವೆ. ಬಸ್ತಾರ್​​ನಲ್ಲಿ ಛತ್ತೀಸ್​ಗಢದ ಅತಿ ದೊಡ್ಡ ಮಾವಿನ ಉದ್ಯಾನವೂ ಇದೆ. 100 ರಿಂದ 150 ಎಕರೆ ಪ್ರದೇಶದಲ್ಲಿ ಹರಡಿರುವ ಮಾವಿನ ತೋಟ ಬಸ್ತಾರ್​ಗೆ ಮತ್ತಷ್ಟು ಮೆರುಗು ಕೊಡುತ್ತದೆ.

ಬಸ್ತಾರ್‌ನ ಪ್ರಸಿದ್ಧ ಇಂದ್ರಾವತಿ ನದಿಯ ದಡದ ಪಕ್ಕದಲ್ಲಿರುವ ಈ ತೋಟದಲ್ಲಿ ನೈಸರ್ಗಿಕವಾಗಿ ಬೆಳೆಯುವ ಮಾವು ಸಾಕಷ್ಟು ರಸಭರಿತ ಮತ್ತು ರುಚಿಯಾಗಿತ್ತದೆ. ಬೇಸಿಗೆ ಕಾಲದಲ್ಲಿ ಇಲ್ಲಿನ ಜನರ ಆದಾಯದ ಮೂಲವೇ ಮಾವು. ಶತಮಾನಕ್ಕಿಂತ ಹಿಂದಿನಿಂದಲೂ ಇರುವ ಈ ತೋಟದಲ್ಲಿ 1,000 ವಿಧದ ಮಾವಿನಹಣ್ಣುಗಳಿವೆ. ಇಲ್ಲಿರುವ ಬಹುತೇಕ ಮರಗಳು ಸುಮಾರು 300 ರಿಂದ 400 ವರ್ಷಗಳಷ್ಟು ಹಳೆಯವು ಎಂದು ತಜ್ಞರು ಹೇಳಿದ್ದಾರೆ.

‘ಇಲ್ಲಿ ಬೆಳೆಯುವ ಮಾವುಗಳಿಗೆ ಎಲ್ಲಿಲ್ಲದ ಬೇಡಿಕೆ’

ಡೊಂಗಘಾಟ್‌ನ ಸ್ಥಳೀಯರು ಈ ಮಾವಿನಹಣ್ಣನ್ನು ಮಾರುಕಟ್ಟೆಯಲ್ಲಿ ಮತ್ತು ಹೆದ್ದಾರಿ ಪಕ್ಕಲ್ಲಿ ಮಾರಾಟ ಮಾಡುತ್ತಾರೆ. ಮರದ ಮೇಲೆಯೇ ಹಣ್ಣಾಗುವ ಮಾವನ್ನು ಕಿತ್ತು ತಂದು ಮಾರಾಟ ಮಾಡುವುದರಿಂದ ಜನರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಮರಗಳು ಅತಿ ಎತ್ತರವಾಗಿರುವುದರಿಂದ ಏರುವುದು ಅಸಾಧ್ಯ. ಹಾಗಾಗಿಯೇ ಹಣ್ಣಾಗಿ ಕೆಳಗೆ ಬಿದ್ದ ಮಾವನ್ನು ಮಾತ್ರ ಇಲ್ಲಿನ ಜನರು ಮಾರಾಟ ಮಾಡುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.