ರಾಯ್ಪುರ್(ಛತ್ತೀಸ್ಗಢ): ಇಲ್ಲಿನ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಜೂನ್ 1ರಿಂದ 12ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿದೆ.
ಛತ್ತೀಸ್ಗಢ ಸೆಕೆಂಡರಿ ಎಜುಕೇಶನ್ ಬೋರ್ಡ್(CGBSE) ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ವಿದ್ಯಾರ್ಥಿಗಳು ನಿಗದಿತ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಪಡೆದುಕೊಳ್ಳಬಹುದಾಗಿದೆ. ಜೂನ್ 1ರಿಂದ 5ರವರೆಗೆ ಈ ಪರೀಕ್ಷಾ ಬುಕ್ಲೆಟ್ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳು ಯಾವುದಾದರೂ ದಿನ ಇವುಗಳನ್ನ ಪಡೆದುಕೊಂಡು ಪರೀಕ್ಷೆ ಬರೆಯಬಹುದಾಗಿದೆ. ಇದಾದ ಐದು ದಿನದೊಳಗೆ ಅವುಗಳನ್ನ ಪರೀಕ್ಷಾ ಕೇಂದ್ರಕ್ಕೆ ವಾಪಸ್ ನೀಡುವಂತೆ ತಿಳಿಸಿದೆ. ಒಂದು ವೇಳೆ ಇವುಗಳನ್ನ ವಾಪಸ್ ನೀಡದ ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಗೈರಾಗಿದ್ದಾರೆಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.
-
Chhattisgarh Board of Secondary Education, CGBSE has decided to conduct the CGBSE Class 12 Board Exams 2021 from home. Students would be allowed to collect the question papers from the specified centres, take them home and then submit the answer copies within 5 days.
— Mamta Sharma (@AdvMamtaSharma) May 23, 2021 " class="align-text-top noRightClick twitterSection" data="
">Chhattisgarh Board of Secondary Education, CGBSE has decided to conduct the CGBSE Class 12 Board Exams 2021 from home. Students would be allowed to collect the question papers from the specified centres, take them home and then submit the answer copies within 5 days.
— Mamta Sharma (@AdvMamtaSharma) May 23, 2021Chhattisgarh Board of Secondary Education, CGBSE has decided to conduct the CGBSE Class 12 Board Exams 2021 from home. Students would be allowed to collect the question papers from the specified centres, take them home and then submit the answer copies within 5 days.
— Mamta Sharma (@AdvMamtaSharma) May 23, 2021
ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಇದೀಗ ಮನೆಯಲ್ಲಿ ಕುಳಿತುಕೊಂಡು ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಭಾನುವಾರ ಹಾಗೂ ರಜಾ ದಿನಗಳಲ್ಲೂ ಉತ್ತರ ಪತ್ರಿಕೆ ಸಲ್ಲಿಕೆ ಮಾಡಬಹುದು ಎಂದು ಬೋರ್ಡ್ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ 10ನೇ ತರಗತಿ ಪರೀಕ್ಷೆ ರದ್ಧು ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 21ಕೋಟಿ ಕೋವಿಡ್ ಲಸಿಕೆ ಹಂಚಿಕೆ: ಕೇಂದ್ರ ಸರ್ಕಾರ
ಛತ್ತೀಸ್ಗಢದಲ್ಲಿ 2 ಲಕ್ಷ 90 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬೋರ್ಡ್ ಮಾಹಿತಿ ನೀಡಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಇಂದು ಇದೇ ವಿಚಾರವಾಗಿ ವಿವಿಧ ರಾಜ್ಯದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಇದರ ಬೆನ್ನಲ್ಲೇ ಛತ್ತೀಸ್ಗಢ ಈ ಮಹತ್ವದ ನಿರ್ಧಾರ ಕೈಗೊಂಡಿದೆ.