ಹೈದರಾಬಾದ್/ರಾಯಪುರ: ಈಗಿನ ಬರ್ತಡೇ ಪಾರ್ಟಿ ಹಾಗೂ 80-90ರ ದಶಕದಲ್ಲಿ ನಡೆಯುತ್ತಿದ್ದ ಬರ್ತಡೇ ಪಾರ್ಟಿಗಳು ತುಂಬಾ ವಿಭಿನ್ನವಾಗಿವೆ. ಈಗಿನ ಕಾಲದಲ್ಲಿ ಬಿಯರ್, ಚಿಕನ್ಗಳೊಂದಿಗೆ ಪಬ್, ಬಾರ್ನಲ್ಲಿ ಮೋಜು ಮಸ್ತಿ ಮಾಡಿದ್ರೆ, ಹಿಂದಿನ ಕಾಲದಲ್ಲಿ ತುಂಬಾ ಸರಳವಾಗಿ ಇವುಗಳ ಆಚರಣೆ ಮಾಡಲಾಗ್ತಿತ್ತು.
ಆಗಿನ ಕಾಲದಲ್ಲಿ ಆಚರಣೆ ಮಾಡಲಾಗ್ತಿದ್ದ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಯಾವ ರೀತಿ ತಿಂಡಿ - ತಿನಿಸು ನೀಡಲಾಗ್ತಿತ್ತು ಎಂಬುದನ್ನ ನೆನಪಿಸುವ ಉದ್ದೇಶದಿಂದ ಛತ್ತೀಸ್ಗಢ ಐಎಎಸ್ ಅಧಿಕಾರಿ ಅವನೀಶ್ ಶರಣ್ ವಿಶೇಷವಾದ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.
-
80s - 90s Kid’s Birthday Party Snacks.❤️ pic.twitter.com/jtaS1NdwLB
— Awanish Sharan (@AwanishSharan) April 24, 2022 " class="align-text-top noRightClick twitterSection" data="
">80s - 90s Kid’s Birthday Party Snacks.❤️ pic.twitter.com/jtaS1NdwLB
— Awanish Sharan (@AwanishSharan) April 24, 202280s - 90s Kid’s Birthday Party Snacks.❤️ pic.twitter.com/jtaS1NdwLB
— Awanish Sharan (@AwanishSharan) April 24, 2022
ಈ ಚಿತ್ರದಲ್ಲಿ ಸಮೋಸ, ಗುಲಾಮ್ ಜಾಮೂನ್, ಬಿಸ್ಕತ್, ಮಿಕ್ಸ್ಚರ್ ಇದ್ದು, 80-90ರ ದಶಕದಲ್ಲಿ ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಈ ತಿನಿಸು ಮಕ್ಕಳಿಗೆ ನೀಡಲಾಗ್ತಿತ್ತು. ಹುಟ್ಟುಹಬ್ಬದ ಪಾರ್ಟಿಯ ತಿಂಡಿಗಳ ಚಿತ್ರವನ್ನ ಅವನೀಶ್ ಶರಣ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಅದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಶೇರ್ ಸಹ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಸುಮಾರು 44 ಸಾವಿರಕ್ಕೂ ಹೆಚ್ಚಿನ ಜನರಿಂದ ಲೈಕ್ ಆಗಿದ್ದು, 1400 ಜನರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸುಳ್ಳು ಮಾಹಿತಿ ಪ್ರಸಾರ: ಪಾಕಿಸ್ತಾನದ ಆರು ಸೇರಿ 16 ಯೂಟ್ಯೂಬ್ ಚಾನೆಲ್ಗಳ ಮೇಲೆ ಕೇಂದ್ರದ ನಿರ್ಬಂಧ
ಆಗಿನ ಬರ್ತಡೇ ಪಾರ್ಟಿಗಳಲ್ಲಿ ಯಾರೋ ಕಲರ್ ಪೆನ್ಸಿಲ್, ಸ್ಕೆಚ್ ಪೆನ್, ಕಂಪಾಸ್ ಬಾಕ್ಸ್ ಉಡುಗೊರೆಯಾಗಿ ನೀಡಿದ್ರೆ, ಕೆಲವರು ಆ ಸಂದರ್ಭದಲ್ಲಿ ಪ್ರಸಾರವಾಗ್ತಿದ್ದ ಟಿವಿಗಳಲ್ಲಿನ ಧಾರಾವಾಹಿ ಮೆಲುಕು ಹಾಕಿದ್ದಾರೆ.