ದಂತೇವಾಡ(ಛತ್ತೀಸ್ಗಢ): ಬಡವರಿಗೋಸ್ಕರ ಹತ್ತಾರು ಯೋಜನೆ ಜಾರಿಗೆ ತಂದಿವೆ ಎಂದು ಬಹುತೇಕ ಎಲ್ಲ ಸರ್ಕಾರಗಳು ಜಂಬ ಕೊಚ್ಚಿ ಕೊಳ್ಳುತ್ತವೆ. ಆದರೆ, ಕೆಲವೊಂದು ಪ್ರದೇಶಗಳಲ್ಲಿ ನಡೆಯುವ ಹೃದಯವಿದ್ರಾವಕ ಘಟನೆಗಳು ಕಣ್ಣಲ್ಲಿ ನೀರು ತರಿಸುತ್ತವೆ. ಸದ್ಯ ಅಂತಹದೊಂದು ಘಟನೆ ಛತ್ತೀಸ್ಗಢದ ದಂತೇವಾಡದಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಮಹಿಳೆಯೋರ್ವಳ ಮೃತದೇಹವನ್ನ ಕುಟುಂಬಸ್ಥರು ಮಂಚದಲ್ಲಿಟ್ಟುಕೊಂಡು ಹೊತ್ತು ಸಾಗಿದ್ದಾರೆ. ಆಸ್ಪತ್ರೆಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೊಲೀಸರು ನೋಡಿ, ಅವರಿಗೆ ವಾಹನದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿರಿ: 'ಹೀಗೆ ಮಿಂಚಿ ಹಾಗೂ ಬೆಳೆಯಿರಿ'... ಧೈರ್ಯ ತುಂಬಿದ ಪಾಕ್ ಕ್ಯಾಪ್ಟನ್ಗೆ ಕೊಹ್ಲಿ ಧನ್ಯವಾದ
ದಂತೇವಾಡದ ಕುಕೊಂಡಾ ಬ್ಲಾಕ್ನ ಟಿಕನ್ಪಾಲ್ ನಿವಾಸಿ ಜೋಗಿ ಪೋಡಿಯಂ ಎಂಬ ಮಹಿಳೆ ಅನಾರೋಗ್ಯದಿಂದ ರೆಂಗಾನಾರ್ನಲ್ಲಿ ಸಾವನ್ನಪ್ಪಿದ್ದರು. ಹಣದ ಇಲ್ಲದ ಹಿನ್ನೆಲೆಯಲ್ಲಿ ಆಕೆಯ ಮೃತದೇಹವನ್ನ ಮಂಚದಲ್ಲಿಟ್ಟುಕೊಂಡು ಹೆಗಲ ಮೇಲೆ ಹೊತ್ತು ಕಾಲ್ನಡಿಗೆ ಮೂಲಕ ತೆರಳಿದ್ದರು. ಮೃತದೇಹವನ್ನ ಸುಮಾರು 10 ಕಿಲೋ ಮೀಟರ್ವರೆಗೆ ಹೊತ್ತೊಯ್ದಿದ್ದರು. ಆ ಬಳಿಕ ಅಲ್ಲಿ ಪೊಲೀಸರು ಅವರಿಗೆ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಅಂತ್ಯಕ್ರಿಯೆ ನಡೆಸಲು ಪೊಲೀಸರು ನಗದು ಸಹಾಯ ಮಾಡಿದ್ದಾರೆ.