ಧಮ್ತಾರಿ (ಛತ್ತೀಸ್‌ಗಢ): ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯಲ್ಲಿ 32 ಆನೆಗಳ ಹಿಂಡಿನ ಮೂರು ಆನೆಗಳು ಕೃಷಿ ಭೂಮಿಯ ಪಕ್ಕದ 20 ಅಡಿ ಆಳದ ಹೊಂಡಕ್ಕೆ ಬಿದ್ದಿವೆ. ಎರಡು ಆನೆಗಳನ್ನು ರಕ್ಷಿಸಲಾಗಿದ್ದು, ಮೂರನೇ ಆನೆಯ ರಕ್ಷಣೆಯ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ನಿನ್ನೆ ರಾತ್ರಿಯೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಆನೆಗಳ ಹಿಂಡು ಹೊಂಡದ ಸುತ್ತ ಓಡಾಡುತ್ತಿರುವುದರಿಂದ ರಕ್ಷಣಾ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಎಚ್ಚರಿಕೆಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಆನೆಗಳ ನಿರಂತರ ಮೇಲ್ವಿಚಾರಣೆಗಾಗಿ, ಇಲಾಖೆಯು ಸ್ಥಳದ ಬಳಿ ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತಿದೆ ಎಂದು ಡಿಎಫ್‌ಒ ಮಯಾಂಕ್ ಪಾಂಡೆ ತಿಳಿಸಿದ್ದಾರೆ.
ಹಳ್ಳದ ಬಳಿ ಅಳವಡಿಸಲಾದ ಸೋಲಾರ್ ಪ್ಯಾನೆಲ್‌ಗಳ ಸಹಾಯದಿಂದ ಎರಡು ಆನೆಗಳನ್ನು ಹೊರತೆಗೆಯಲಾಗಿದೆ. ಮೂರನೇ ಆನೆಯನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಓದಿ: ಬಸ್ ನಿಲ್ಲಿಸ್ರೋ, ನಾನೂ ಹತ್ಕೋತೀನಿ ಎನ್ನುವಂತೆ ವರ್ತಿಸಿದ ಕಾಡಾನೆ! ವಿಡಿಯೋ ನೋಡಿ