ETV Bharat / bharat

ಮ್ಯೂಸಿಯಂನಲ್ಲಿ ಶಿವಾಜಿ ಮಹಾರಾಜರ ’ವಾಘ್ ನಖ್’ ಪ್ರದರ್ಶನ: ಸುಧೀರ್ ಮುಂಗಂತಿವಾರ್

author img

By ETV Bharat Karnataka Team

Published : Oct 2, 2023, 9:54 AM IST

Updated : Oct 2, 2023, 10:28 AM IST

ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ ಪೌರಾಣಿಕ ವಾಘ್ ನಖ್ ಅಥವಾ ಹುಲಿ ಉಗುರು (ವಾಘ್ ನಖ್) ಮಾದರಿ ಅಸ್ತ್ರ ಬರೊಬ್ಬರಿ 350 ವರ್ಷಗಳ ಬಳಿಕ ಭಾರತಕ್ಕೆ ಮರಳುತ್ತಿದೆ.

Chhatrapati Shivaji
ಛತ್ರಪತಿ ಶಿವಾಜಿ

ಮುಂಬೈ (ಮಹಾರಾಷ್ಟ್ರ) : 'ವಾಘ್ ನಖ್' (ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ ಲೋಹದ ಉಗುರುಗಳು) ಅನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗುವುದು ಮತ್ತು ಸಾರ್ವಜನಿಕರು ಇದನ್ನು ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಲಂಡನ್‌ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ 'ವಾಘ್ ನಖ್​' ಅನ್ನು ರಾಜ್ಯಕ್ಕೆ ತರಲಾಗುವುದು. ಈ ಬಗ್ಗೆ ಬ್ರಿಟನ್ ಸರ್ಕಾರದಿಂದ ಪತ್ರ ಬಂದಿದೆ. ಶಿವಾಜಿ ಮಹಾರಾಜರ ಪ್ರಸಿದ್ಧ 'ಜಗದಂಬಾ' ಖಡ್ಗ ಮತ್ತು 'ವಾಘ್ ನಖ್​ (ಹುಲಿಯ ಉಗುರುಗಳು) ಮಹಾರಾಷ್ಟ್ರಕ್ಕೆ ತರಲು ರಾಜ್ಯ ಸರ್ಕಾರವು ಪತ್ರ ವ್ಯವಹಾರದ ಮೂಲಕ ಬ್ರಿಟಿಷ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಅಕ್ಟೋಬರ್ 3 ರಂದು ಲಂಡನ್‌ನಲ್ಲಿ 'ವಾಘ್ ನಖ್' ಕುರಿತಾದ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗುವುದು, ಈ ವಾಘ್ ನಖ್ ಛತ್ರಪತಿ ಶಿವರಾಯರ ಸಾಧನೆಯ ಪ್ರತೀಕ. ನವೆಂಬರ್ ತಿಂಗಳಲ್ಲಿ ಈ ಹುಲಿ ಉಗುರುಗಳು ಮಹಾರಾಷ್ಟ್ರಕ್ಕೆ ಬರಲಿವೆ" ಎಂದು ಅವರು ತಿಳಿಸಿದ್ದಾರೆ.

1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್, ಶಿವಾಜಿ ಮಹಾರಾಜನನ್ನು ಕೊಲ್ಲಲು ಸಂಚು ರೂಪಿಸಿದ್ದ. ಆದರೆ, ನಮ್ಮ ಮಹಾನಾಯಕ ಶಿವಾಜಿ ಮಹಾರಾಜರು ತನ್ನ ಪ್ರಜೆಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಅಫ್ಜಲ್ ಖಾನ್​ನನ್ನು 'ವಾಘ್ ನಖ್​'ಯಿಂದ ಹತ್ಯೆ ಮಾಡಿದ್ದರು. ಇದೀಗ, ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕವನ್ನು ಆಚರಿಸುತ್ತಿದ್ದೇವೆ. ಇದರ ಸವಿ ನೆನಪಿಗಾಗಿ ಮತ್ತು ಶಿವಾಜಿ ಮಹಾರಾಜರ 350 ವರ್ಷದ ಪಟ್ಟಾಭಿಷೇಕದ ನಿಮಿತ್ತ ಮಹಾರಾಷ್ಟ್ರದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿವೆ. ಮ್ಯೂಸಿಯಂನಲ್ಲಿ 'ವಾಘ್ ನಖ್' ಪ್ರದರ್ಶಿಸುವ ಮೂಲಕ ನಾವು ಜನರಿಗೆ ವೀಕ್ಷಿಸಲು ಅವಕಾಶವನ್ನು ನೀಡುತ್ತೇವೆ" ಎಂದರು.

ಇದನ್ನೂ ಓದಿ : ಲಂಡನ್​ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ ಛತ್ರಪತಿ ಶಿವಾಜಿಯ 'ವಾಘ್​ ನಖ್​': ಹಿಂತಿರುಗಿಸಲು ಒಪ್ಪಿದ ಬ್ರಿಟನ್​ ಸರ್ಕಾರ

'ಜಗದಂಬಾ' ಖಡ್ಗ ಹಾಗೂ 'ವಾಘ್ ನಖ್ ಮರಾಠಾ ಸಾಮ್ರಾಜ್ಯದ ಐತಿಹಾಸಿಕ ಕಲಾಕೃತಿಗಳಾಗಿದ್ದು, ಮರಾಠರ ಭವ್ಯ ಇತಿಹಾಸವನ್ನು ಸಾರಿ ಹೇಳುತ್ತವೆ. ಛತ್ರಪತಿ ಶಿವಾಜಿ ಮರಾಠಿ ಜನರ ಸ್ಫೂರ್ತಿಯ ಮೂಲ ಮತ್ತು ಜನ ನಾಯಕ. ಆದ್ದರಿಂದ, ಈ ಎರಡನ್ನು ತರುವುದು ನಮ್ಮ ಕರ್ತವ್ಯ. ಪ್ರಸ್ತುತ ಬ್ರಿಟನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಈ ಎರಡು ಆಯುಧಗಳನ್ನು ಇರಿಸಲಾಗಿದ್ದು, ಈ ಕಲಾಕೃತಿಗಳನ್ನು ನವೆಂಬರ್‌ನಲ್ಲಿ ಮಹಾರಾಷ್ಟ್ರಕ್ಕೆ ತರಲಾಗುವುದು, ಇದು ರಾಜ್ಯದ ಜನರಿಗೆ ಸಾಮಾನ್ಯ ವಿಷಯವಲ್ಲ, ನಮ್ಮ ನಂಬಿಕೆಯ ಸಂಕೇತ ಎಂದು ಸಚಿವರು ಹೇಳಿದರು.

ಇದನ್ನೂ ಓದಿ : ಛತ್ರಪತಿ ಶಿವಾಜಿಯ ಅಪರೂಪದ 'ವಾಘ್ ನಖ್' ಇಂಗ್ಲೆಂಡ್​ನಿಂದ ಭಾರತಕ್ಕೆ: ಸಂಸ್ಕೃತಿ ಸಚಿವಾಲಯ

ಪ್ರತಿಪಕ್ಷಗಳ ಟೀಕೆ: ಇನ್ನು ವಾಘ್​ ನಖ್​ ಅನ್ನು ಮಹಾರಾಷ್ಟ್ರಕ್ಕೆ ತರುತ್ತಿರುವ ರಾಜ್ಯ ಸರ್ಕಾರದ ಪ್ರಯತ್ನವನ್ನು ವಿಪಕ್ಷಗಳು ಟೀಕಿಸಿವೆ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ. ಚುನಾವಣೆ ಸಮೀಪಿಸುತ್ತಿದ್ದು, ಆಡಳಿತ ಪಕ್ಷ ಈ ಕುತಂತ್ರ ನಡೆಸಿದೆ ಎಂದು ಆರೋಪಿಸಿವೆ.

Last Updated : Oct 2, 2023, 10:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.