ಚೆನ್ನೈ: ಹಣದಾಸೆ ಮತ್ತು ಫೋನ್ಗಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಕೋವಿಡ್ ರೋಗಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದೆ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ತಿರುವೊಟ್ಟಿಯೂರ್‌ನ ರತಿ ದೇವಿ (40) ಚೆನ್ನೈ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡುತ್ತಿದ್ದಳು. ಮೇ 23ರಂದು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಸುನೀತಾ ಎಂಬ ಗೃಹಿಣಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂತ್ರಸ್ತೆ ಸುನೀತಾ ಬಳಿ ನಗದು ಮತ್ತು ಫೋನ್ನನ್ನು ನೋಡಿದ ರತಿ ದೇವಿ ತನ್ನ ಅವಸರಕ್ಕಾಗಿ ಕಳ್ಳತನ ಮಾಡಲು ಮುಂದಾಗಿದ್ದಾರೆ.
ಸ್ಕೇಚ್ ಪ್ರಕಾರ ಸುನೀತಾಳನ್ನು ರತಿ ದೇವಿ ಆಸ್ಪತ್ರೆಯ ಕೊನೆ ಅಂತಸ್ತಿಗೆ ಕರೆದೊಯ್ದಿದ್ದಳು. ಬಳಿಕ ರತಿ ದೇವಿ ಸುನೀತಾಳ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ ನಗದು ಮತ್ತು ಫೋನ್ನನ್ನು ಕಳ್ಳತನ ಮಾಡಿ ಯಾರಿಗೂ ತಿಳಿಯದಂತೆ ನಾಟಕವಾಡಿದ್ದಾಳೆ. ಈ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ಮೇಲೆ ಅನುಮಾನ ಮೂಡಿತ್ತು. ತನಿಖೆ ವೇಳೆ ರತಿ ದೇವಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಆಕೆಯನ್ನು ಬಂಧಿಸಿ ನಗದು ಮತ್ತು ಫೋನ್ನನ್ನು ವಶ ಪಡಿಸಿಕೊಂಡಿದ್ದಾರೆ.