ETV Bharat / bharat

ಲಗೇಜ್​ಗಿಂತ 'ಕ್ಯಾಂಡಿ' ಮುಖ್ಯ: ಲಗೇಜ್​ ಅಲ್ಲೇ ಬಿಟ್ಟು, ಉಕ್ರೇನ್​ನಿಂದ ಭಾರತಕ್ಕೆ ಶ್ವಾನ ಕರೆತಂದ ವಿದ್ಯಾರ್ಥಿನಿ!

author img

By

Published : Mar 6, 2022, 4:42 PM IST

Updated : Mar 6, 2022, 5:34 PM IST

ಭಾರತೀಯ ರಾಯಭಾರ ಕಚೇರಿಯು ಪೆಕಿಂಗೀಸ್ ತಳಿಯ ನಾಯಿಯೊಂದಿಗೆ ಹಾರಲು ಅವಕಾಶ ನೀಡುವವರೆಗೆ ತನ್ನ ಸಾಕುಪ್ರಾಣಿಯನ್ನು ಬಿಟ್ಟು ಬರುವುದಿಲ್ಲ ಎಂದು ವಿದ್ಯಾರ್ಥಿನಿ ನಿರ್ಧರಿಸಿದ್ದರು. ಕೊನೆಗೆ ಅವರ ಆಸೆಯಂತೆ ಅದಕ್ಕೂ ಅವಕಾಶ ನೀಡಿದ್ದು, ಆಕೆಗೆ ತುಂಬಾ ಖುಷಿಯಾಗಿದೆ.

ಕೊನೆಗೂ ಉಕ್ರೇನ್​ನಿಂದ ಭಾರತ ತಲುಪಿದ ವಿದ್ಯಾರ್ಥಿನಿ

ಚೆನ್ನೈ (ತಮಿಳುನಾಡು): ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಹಲವಾರು ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದು, ಈಗಾಗಲೇ ಬಹುಪಾಲು ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಆದರೆ ಇಲ್ಲೊಂದ ಮನಮಿಡಿಯುವ ಘಟನೆ ಬೆಳಕಿಗೆ ಬಂದಿದೆ.

ಐದನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಕೀರ್ತನಾ ಕೊನೆಗೂ ತನ್ನ ಮುದ್ದಿನ ನಾಯಿ ‘ಕ್ಯಾಂಡಿ’ಯೊಂದಿಗೆ ಚೆನ್ನೈ ತಲುಪಿದ್ದಾರೆ. ಈ ಕ್ಯಾಂಡಿಯನ್ನು ಬಿಟ್ಟು ಬರಲೊಪ್ಪದ ಕೀರ್ತನಾ ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ.

ಇದನ್ನೂ ಓದಿ: ಮಗುವಿನ ಮೇಲೆ ಹುಲಿ ದಾಳಿ.. ಬೆಚ್ಚಿಬಿದ್ದ ಜನ

ಭಾರತೀಯ ರಾಯಭಾರ ಕಚೇರಿಯು ಪೆಕಿಂಗೀಸ್ ತಳಿಯ ನಾಯಿಯೊಂದಿಗೆ ಹಾರಲು ಅವಕಾಶ ನೀಡುವವರೆಗೆ ತನ್ನ ಸಾಕುಪ್ರಾಣಿಯನ್ನು ಬಿಟ್ಟು ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು 'ಆಪರೇಷನ್ ಗಂಗಾ' ಭಾಗವಾಗಿ ಸರ್ಕಾರವು ಹಲವಾರು ವಿಶೇಷ ವಿಮಾನಯಾನ ಸಂಸ್ಥೆಗಳನ್ನು ಸೇವೆಗೆ ನಿಯೋಜಿಸಿವೆ. ಶನಿವಾರ ಕೀರ್ತನಾ 'ಕ್ಯಾಂಡಿ' ಜೊತೆಗೆ ಚೆನ್ನೈ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆ ವೇಳೆ ತಮ್ಮ ಕುಟುಂಬ ಸದಸ್ಯರಿಂದ ಭಾವನಾತ್ಮಕ ಸ್ವಾಗತ ಪಡೆದರು.

ಲಗೇಜ್​ ಅಲ್ಲೇ ಬಿಟ್ಟು, ಉಕ್ರೇನ್​ನಿಂದ ಭಾರತಕ್ಕೆ ಶ್ವಾನ ಕರೆತಂದ ವಿದ್ಯಾರ್ಥಿನಿ!

ಈ ಹಿಂದೆ ಸಾಕುಪ್ರಾಣಿಯನ್ನು ಮರಳಿ ತರಲು ಅವಕಾಶ ನೀಡದ ಕಾರಣ ನಾಲ್ಕು ಬಾರಿ ವಿಮಾನಗಳನ್ನು ರದ್ದುಗೊಳಿಸಬೇಕಾಯಿತು. ನಾನು ಹೆಚ್ಚುವರಿ ಎರಡು-ಮೂರು ದಿನಗಳವರೆಗೆ ಕಾದಿದ್ದೆ. ಕೊನೆಗೂ ರಾಯಭಾರ ಕಚೇರಿಯಿಂದ ನನಗೆ ಕರೆ ಬಂದಿತು, ಅವರು ನನ್ನೊಂದಿಗೆ ಸಾಕುಪ್ರಾಣಿಯನ್ನು ಕರೆತರಲು ಅವಕಾಶ ನೀಡಿದರು ಎಂದು ಕೀರ್ತನಾ ಮಾಧ್ಯಮಗಳಿಗೆ ತಿಳಿಸಿದರು. ಆದರೆ, ಎರಡು ವರ್ಷದ ಪೆಕಿಂಗೀಸ್ ತಳಿಯ ನಾಯಿಮರಿಯನ್ನು ಮರಳಿ ಕರೆತಂದಿರುವ ಅವರು ತನ್ನ ಲಗೇಜ್​ಗಳನ್ನು ಅಲ್ಲೇ ಬರಬೇಕಾಯಿತು.

ನಾಯಿ ಬೇಕು ಅಂದ್ರೆ ಲಗೇಜ್​ ತರುವ ಹಾಗಿಲ್ಲ: ನಾಯಿಮರಿಯನ್ನು ತರಬಹುದು. ಆದರೆ, ನಿಮ್ಮ ಲಗೇಜ್​ಅನ್ನು ತರುವ ಹಾಗಿಲ್ಲ ಎಂದು ಹೇಳಿದ್ದರು. ನಾನು ಅವರ ಷರತ್ತಿಗೆ ಒಪ್ಪಿದೆ. ನನಗೆ ಲಗೇಜ್​ಗಿಂತ ನನ್ನ ಸಾಕುಪ್ರಾಣಿ ಮುಖ್ಯ ಎಂದು ಅದನ್ನೇ ಚೆನ್ನೈಗೆ ತಂದಿರುವೆ ಎನ್ನುತ್ತಾರೆ ಕೀರ್ತನಾ.

ಕೀರ್ತನಾ ತಮಿಳುನಾಡಿನ ಮೈಲಾಡುತುರೈ ನಿವಾಸಿಯಾಗಿದ್ದು, ಉಕ್ರೇನ್‌ನ ಉಜ್ಹೋರೋಡ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದರು.

ಬಿಕ್ಕಟ್ಟಿನಿಂದ ಬಳಲುತ್ತಿರುವ ಉಕ್ರೇನ್‌ನಿಂದ 'ಆಪರೇಷನ್ ಗಂಗಾ' ಅಡಿಯಲ್ಲಿ ಇದುವರೆಗೆ 13,300 ಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ.

Last Updated : Mar 6, 2022, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.