ETV Bharat / bharat

2018ರ ಐಎಲ್​ಎಫ್​ಎಸ್​ ಹಗರಣ; ಲಕ್ಷ ಕೋಟಿ ವಂಚಕ​ ರವಿ ಪಾರ್ಥಸಾರಥಿ ಬಂಧನ - 2018 ರ ಆರ್ಥಿಕ ಬಿಕ್ಕಟ್ಟು

1 ಲಕ್ಷ ಕೋಟಿ ರೂ.ಗಳ ಹಗರಣದಲ್ಲಿ ಭಾಗಿಯಾಗಿದ್ದ ಐಎಲ್ ಮತ್ತು ಎಫ್ಎಸ್ ಗ್ರೂಪ್​ನ ಮಾಜಿ ಅಧ್ಯಕ್ಷ ರವಿ ಪಾರ್ಥಸಾರಥಿ ಅವರನ್ನು ಇಂದು ಬಂಧಿಸಲಾಗಿದೆ. ಈ ಬಗ್ಗೆ ಇಒಡಬ್ಲ್ಯೂ ಡಿಎಸ್​ಪಿ ಪ್ರಕಾಶ್ ಬಾಬು ದೃಢಪಡಿಸಿದರು.

ravi-parthasarathy
ಕಿಂಗ್​ಪಿನ್​ ರವಿ ಪಾರ್ಥಸಾರಥಿ ಬಂಧನ
author img

By

Published : Jun 11, 2021, 8:26 PM IST

ಚೆನ್ನೈ: 2018 ರಲ್ಲಿ ಹಣಕಾಸು ಸೇವೆಗಳ ಮಾರುಕಟ್ಟೆಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ಹುಟ್ಟುಹಾಕಿದ 1 ಲಕ್ಷ ಕೋಟಿ ರೂ.ಗಳ ಹಗರಣದಲ್ಲಿ ಐಎಲ್ ಮತ್ತು ಎಫ್ಎಸ್ ಗ್ರೂಪ್​ನ ಮಾಜಿ ಅಧ್ಯಕ್ಷ ರವಿ ಪಾರ್ಥಸಾರಥಿ ಅವರನ್ನು ಬಂಧಿಸಲಾಗಿದೆ ಎಂದು ಚೆನ್ನೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ತಿಳಿಸಿದೆ. ಪಾರ್ಥಸಾರಥಿಯನ್ನು ಬಂಧಿಸಿ 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

200 ಕೋಟಿ ರೂ.ಗಳನ್ನು ಕಳೆದುಕೊಂಡ 63 ಮೂನ್ಸ್ ಟೆಕ್ನಾಲಜೀಸ್ ಲಿಮಿಟೆಡ್ ನೀಡಿದ ದೂರಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಒಡಬ್ಲ್ಯೂ ಹೇಳಿದೆ. ಇತರ ವಿವಿಧ ಠೇವಣಿದಾರರಿಂದ ದೂರುಗಳನ್ನು ಸಹ ಇಒಡಬ್ಲ್ಯೂ ದೂರು ಸ್ವೀಕರಿಸಿದೆ.

2021 ರ ಸಿಆರ್​ಎಲ್​ಒಪಿ ಸಂಖ್ಯೆ 2007ರಲ್ಲಿ ಆರೋಪಿ ಪಾರ್ಥಸಾರಥಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಐಎಲ್ ಮತ್ತು ಎಫ್ಎಸ್ ಟ್ರಾನ್ಸಪೋರ್ಟೇಶನ್ ನೆಟ್ವರ್ಕ್ಸ್ ಇಂಡಿಯಾ ಲಿಮಿಟೆಡ್ (ಐಟಿಎನ್ಎಲ್) ನ ವಂಚನೆಗೊಳಗಾದ ಠೇವಣಿದಾರರು ಮತ್ತು ಹೂಡಿಕೆದಾರರು ತಮ್ಮ ದೂರುಗಳನ್ನು ಇಒಡಬ್ಲ್ಯೂಗೆ ರವಾನಿಸಬಹುದು ಎಂದು ಹೇಳಿದೆ.

ಅಕ್ಟೋಬರ್ 1, 2018 ರಂದು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನಿರ್ದೇಶನದ ಮೂಲಕ ಮೂಲಸೌಕರ್ಯ ಗುತ್ತಿಗೆ ಮತ್ತು ಹಣಕಾಸು ಸೇವೆಗಳ ಲಿಮಿಟೆಡ್ (ಐಎಲ್ ಮತ್ತು ಎಫ್‌ಎಸ್) ನಿಯಂತ್ರಣವನ್ನು ತೆಗೆದುಕೊಳ್ಳಲು ಮತ್ತು ಪಾರ್ಥಸಾರಥಿಯನ್ನು ಬಂಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತು. ಹಿಂದಿನ ಮಂಡಳಿಯು ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಪರಿಗಣಿಸಲಾಗಿದ್ದರಿಂದ ಬ್ಯಾಂಕರ್ ಉದಯ್ ಕೊಟಕ್ ಅವರ ನೇತೃತ್ವದಲ್ಲಿ ಹೊಸ ಮಂಡಳಿಯನ್ನು ರಚಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.