ತಮಿಳುನಾಡು : ಐಐಟಿ ಮದ್ರಾಸ್‌ನಲ್ಲಿ ಅತಿಥಿ ಉಪನ್ಯಾಸಕ ಮತ್ತು ಸಂಶೋಧನಾ ವಿದ್ವಾಂಸರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೃತದೇಹ ಅರ್ಧ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಉನ್ನಿ ಕೃಷ್ಣನ್ ನಾಯರ್ ಎಂದು ಗುರುತಿಸಲಾಗಿದೆ.
ಉನ್ನಿ ಕೃಷ್ಣನ್ ಅವರು ಕೇರಳ ಮೂಲದವರಾಗಿದ್ದಾರೆ. ಇವರ ತಂದೆ ಇಸ್ರೋದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಡೆತ್ನೋಟ್ ಸಹ ಸಿಕ್ಕಿದ್ದು, ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.
ಇದನ್ನು ಓದಿ: ಐಐಟಿ-ಎಂನಲ್ಲಿ ಜಾತಿ ತಾರತಮ್ಯ ಎಂದು ಆರೋಪಿಸಿ ಪ್ರಾಧ್ಯಾಪಕರಿಂದ ರಾಜೀನಾಮೆ!
ಕೊಟ್ಟುಪುರಂ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೆಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇನ್ನು, ಪ್ರಕರಣದ ಹೆಚ್ಚಿನ ತನಿಖೆ ನಡೆಸಲು ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.