ETV Bharat / bharat

ಮಾಜಿ ಒಲಿಂಪಿಯನ್ ಪಿಟಿ ಉಷಾ ವಿರುದ್ಧ ವಂಚನೆ ಕೇಸ್ - ಪಿಟಿ ಉಷಾ ಮತ್ತು ಇತರರ ವಿರುದ್ಧ ದೂರು ದಾಖಲು

ಕೋಯಿಕ್ಕೋಡ್ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎವಿ ಜಾರ್ಜ್ ಅವರು ಜೆಮ್ಮಾ ಜೋಸೆಫ್ ಅವರ ದೂರನ್ನು ವೆಲ್ಲಾಯಿಲ್ ಪ್ರದೇಶದ ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ವಿಸ್ತೃತ ತನಿಖೆಗೆ ಸೂಚನೆ ನೀಡಿದ್ದಾರೆ. ಪಿಟಿ ಉಷಾ ಮತ್ತು ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ..

Cheating case registered against PT Usha, six others of construction firm
ಮಾಜಿ ಒಲಿಂಪಿಯನ್ ಪಿಟಿ ಉಷಾ ವಿರುದ್ಧ ವಂಚನೆ ಕೇಸ್
author img

By

Published : Dec 19, 2021, 3:03 PM IST

ಚೆನ್ನೈ, ತಮಿಳುನಾಡು : ಮಾಜಿ ಒಲಿಂಪಿಯನ್ ಪಿಟಿ ಉಷಾ ವಿರುದ್ಧ ವಂಚನೆಯ ಕೇಸ್ ದಾಖಲಾಗಿದೆ. ಮಾಜಿ ಅಥ್ಲೀಟ್​ ಜೆಮ್ಮಾ ಜೋಸೆಪ್ ಪಿಟಿ ಉಷಾ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಪಿಟಿ ಉಷಾ ವಿರುದ್ಧ ಭಾರತೀಯ ದಂಡ ಸಂಹಿತೆ 420ರ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಪಿಟಿ ಉಷಾ ಬಿಲ್ಡರ್ ಜೊತೆ ಸೇರಿ ತನಗೆ ವಂಚಿಸಿದ್ದಾರೆ ಎಂದು ಜೆಮ್ಮಾ ಜೋಸೆಫ್ ದೂರಿನಲ್ಲಿ ಆರೋಪಿಸಿದ್ದಾರೆ.

ಜೆಮ್ಮಾ ಜೋಸೆಫ್ ಕೋಯಿಕ್ಕೋಡ್‌ನಲ್ಲಿ ಪಿಟಿ ಉಷಾ ಅವರ ಗ್ಯಾರೆಂಟಿ ಮೇರೆಗೆ 1,012 ಚದರ ಅಡಿ ನಿವೇಶನವನ್ನು ಖರೀದಿಸಿದರು. ಹಂತ ಹಂತವಾಗಿ ಸುಮಾರು 46 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದ್ದರು. ಆದರೆ, ಬಿಲ್ಡರ್ ಈಗ ನಿವೇಶನ ನೋಂದಣಿ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಜೆಮ್ಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೋಯಿಕ್ಕೋಡ್ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎವಿ ಜಾರ್ಜ್ ಅವರು ಜೆಮ್ಮಾ ಜೋಸೆಫ್ ಅವರ ದೂರನ್ನು ವೆಲ್ಲಾಯಿಲ್ ಪ್ರದೇಶದ ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ವಿಸ್ತೃತ ತನಿಖೆಗೆ ಸೂಚನೆ ನೀಡಿದ್ದಾರೆ. ಪಿಟಿ ಉಷಾ ಮತ್ತು ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಹುಲ್​​ ದ್ರಾವಿಡ್​ ಬಯೋಪಿಕ್​​ನಲ್ಲಿ ಸುದೀಪ್​ ನಟನೆ? ಹಕ್ಕು ತಂದ್ರೆ ಸಿನಿಮಾ ಮಾಡ್ತೀನಿ ಎಂದ ಕಬೀರ್ ಖಾನ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.