ನವದೆಹಲಿ: ಭಾರತದ ಪ್ಯಾರಾ ಒಲಿಂಪಿಕ್ ಚಾಂಪಿಯನ್ ಅವನಿ ಲೇಖರಾ ಫ್ರಾನ್ಸ್ನ ಚಟಿರಾಕ್ಸ್ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ 2ನೇ ಚಿನ್ನದ ಪದಕ ಕೊರಳಿಗೇರಿಸಿಕೊಳ್ಳುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮಹಿಳೆಯರ 50 ಮೀಟರ್ ರೈಫಲ್ ತ್ರಿ ಪೊಸಿಷನ್‌ನ ಎಸ್‌ಎಚ್1 ವಿಭಾಗದಲ್ಲಿ ಅವನಿ ಚಿನ್ನದ ಪದಕ ಸಾಧನೆ ಮಾಡಿದರು.
ಅನುಭವಿ ಆಟಗಾರರಾದ ಸ್ಲೋವಾಕಿಯಾದ ವೆರೋನಿಕಾ ವಡೋವಿಕೋವಾ (456.6) ಮತ್ತು ಸ್ವೀಡನ್‌ನ ಅನ್ನಾ ನಾರ್ಮನ್ (441.9) ಅವರನ್ನು ಹಿಂದಿಕ್ಕಿರುವ ಅವನಿ, (458.3) ಅಂಕ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದರು. ಇದಕ್ಕೂ ಮುನ್ನ ಇವರು, ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದರು.
-
Proud of @AvaniLekhara for winning another Gold at #Chateauroux2022.
— Narendra Modi (@narendramodi) June 11, 2022 " class="align-text-top noRightClick twitterSection" data="
Her determination to scale new heights is remarkable. I congratulate her on this feat and wish her the very best for the future. pic.twitter.com/Oetj5Gj8SO
">Proud of @AvaniLekhara for winning another Gold at #Chateauroux2022.
— Narendra Modi (@narendramodi) June 11, 2022
Her determination to scale new heights is remarkable. I congratulate her on this feat and wish her the very best for the future. pic.twitter.com/Oetj5Gj8SOProud of @AvaniLekhara for winning another Gold at #Chateauroux2022.
— Narendra Modi (@narendramodi) June 11, 2022
Her determination to scale new heights is remarkable. I congratulate her on this feat and wish her the very best for the future. pic.twitter.com/Oetj5Gj8SO
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅವನಿ ಲೇಖರಾಗೆ ಅಭಿನಂದಿಸಿದ್ದಾರೆ. 'ಮತ್ತೊಂದು ಚಿನ್ನದ ಪದಕ ಗೆದ್ದಿದ್ದಕ್ಕಾಗಿ ನಮ್ಮ ಹೆಮ್ಮೆಯ ಅವನಿಗೆ ಅಭಿನಂದನೆಗಳು. ಜಯ ಗಳಿಸುವ ಆಕೆಯ ಸಂಕಲ್ಪ ಗಮನಾರ್ಹ. ಮುಂಬರುವ ಪಂದ್ಯಗಳಿಗೆ ಸಹ ಶುಭ ಹಾರೈಸುತ್ತೇನೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಏಷ್ಯಾ ಕಪ್ ಫುಟ್ಬಾಲ್: 2-1 ಗೋಲುಗಳಿಂದ ಅಫ್ಘಾನಿಸ್ತಾನಕ್ಕೆ ಸೋಲುಣಿಸಿದ ಭಾರತ