ಸಂಗರೂರು: ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ವಿರುದ್ಧ ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರನ್ನು ಚನ್ನಿ ಉದ್ದೇಶಿಸಿ ಮಾತನಾಡಿದ್ದು, ಈ ವೇಳೆ ಸಿಎಂ ಜತೆಗೆ ವಿಜೇಂದರ್ ಸಿಂಗ್ಲಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಿಎಂ ಬೃಹತ್ ಆಸ್ಪತ್ರೆ ಉದ್ಘಾಟನೆ ಮಾಡಿದರು. ಹಾಗೆ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳ ಶಿಲಾನ್ಯಾಸವನ್ನೂ ನೆರವೇರಿಸಿದರು. ಆದರೆ, ಈ ವೇಳೆ ಶಿಕ್ಷಕರ ತೀವ್ರ ಪ್ರತಿಭಟನೆ ಎದುರಿಸಬೇಕಾಯಿತು.
ಇದನ್ನೂ ಓದಿ: ಪಾಲ್ಘರ್‌ನಲ್ಲಿ ದ್ವಿಚಕ್ರವಾಹನಗಳ ನಡುವೆ ಅಪಘಾತ: CCTVಯಲ್ಲಿ ದೃಶ್ಯ ಸೆರೆ
ಪಂಜಾಬ್ ಸರ್ಕಾರದ ವಿರುದ್ಧ ಅತಿಥಿ ಶಿಕ್ಷಕರ ಪ್ರತಿಭಟನೆ ತೀವ್ರಗೊಂಡಿದೆ. ಸಿಎಂ ಆಗಮನದ ಹಿನ್ನೆಲೆ ಹೆಚ್ಚಿನ ಸಂಖ್ಯೆ ಶಿಕ್ಷಕರು ಸಭೆಯ ಸ್ಥಳಕ್ಕೆ ತಲುಪಿ ಅಲ್ಲಿ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹ ಮಾಡಿದರು. ಆ ವೇಳೆ, ಪ್ರತಿಭಟನಾ ನಿರತ ಶಿಕ್ಷಕರನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದು ಪ್ರಾಣಿಗಳಂತೆ ವಾಹನಗಳಿಂಗೆ ನೂಕಿದರು.
ಅಷ್ಟೇ ಅಲ್ಲದೆ, ಕೆಲವು ಮಹಿಳಾ ಶಿಕ್ಷಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುವಾಗ ಅವರ ಬಾಯಿಗೆ ಪೊಲೀಸರು ಬಟ್ಟೆ ತುರುಕುವ ಯತ್ನ ವನ್ನೂ ನಡೆಸಿದರು. ಹೀಗೆ ಹಲವಾರು ಪ್ರತಿಭಟನಾ ನಿರತರನ್ನು ಪೊಲೀಸರು ಎಳೆದೋಯ್ದು ತಮ್ಮ ವಶಕ್ಕೆ ಪಡೆದಿದ್ದಾರೆ.