ETV Bharat / bharat

Chandrayaan 3: ಬಾಹುಬಲಿ ರಾಕೆಟ್​ ಉಡಾವಣೆ ವೀಕ್ಷಿಸಲು ಶ್ರೀಹರಿಕೋಟಾಗೆ ಹಾರಿದ ಶಾಲಾ ಮಕ್ಕಳು! - 23 ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗಿ

ನಾಳೆ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ Chandrayaan 3 ನೌಕೆ ಉಡಾವಣೆಯಾಗಲಿದ್ದು, ಈ ಉಡಾವಣೆಯನ್ನು ಪಂಜಾಬ್​ನ ಶಾಲಾ ಮಕ್ಕಳು ವೀಕ್ಷಿಸಲಿದ್ದಾರೆ.

CHANDRAYAAN 3 LAUNCH  PUNJAB STUDENTS SEE THE LAUNCH OF CHANDRAYAAN 3  CHANDRAYAAN 3  ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ  ಶ್ರೀಹರಿಕೋಟಾಗೆ ಹಾರಿದ ಶಾಲಾ ಮಕ್ಕಳು  ಉಡಾವಣೆ ವೀಕ್ಷಿಸಲು ಶ್ರೀಹರಿಕೋಟಾಗೆ ಹಾರಿದ ಶಾಲಾ ಮಕ್ಕಳು  Chandrayaan 3 ನೌಕೆ ಉಡಾವಣೆ  ಬಾಹ್ಯಾಕಾಶ ಜಗತ್ತಿನಲ್ಲಿ ಮತ್ತೊಂದು ಮೈಲಿಗಲ್ಲು  ನಾಳೆ Chandrayaan 3 ಮಿಷನ್‌  ಹರ್ಜೋತ್ ಬೇನ್ಸ್ ಟ್ವೀಟ್  23 ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗಿ  ಬಾಹುಬಲಿ ರಾಕೆಟ್​ ಉಡಾವಣೆ
ಬಾಹುಬಲಿ ರಾಕೆಟ್​ ಉಡಾವಣೆ ವೀಕ್ಷಿಸಲು ಶ್ರೀಹರಿಕೋಟಾಗೆ ಹಾರಿದ ಶಾಲಾ ಮಕ್ಕಳು!
author img

By

Published : Jul 13, 2023, 5:20 PM IST

ಚಂಡೀಗಢ, ಪಂಜಾಬ್​ : ನಾಳೆ ಭಾರತವು ವಿಜ್ಞಾನ ಮತ್ತು ಬಾಹ್ಯಾಕಾಶ ಜಗತ್ತಿನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ. ವಾಸ್ತವವಾಗಿ, ನಾಳೆ Chandrayaan 3 ಮಿಷನ್‌ನ ಉಡಾವಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಮಧ್ಯಾಹ್ನ 2:35 ಕ್ಕೆ ಮಾಡಲಿದೆ. ಈ ಐತಿಹಾಸಿಕ ಉಡಾವಣೆಯನ್ನು ತಮ್ಮ ಕಣ್ಣಾರೆ ನೋಡುವವರಲ್ಲಿ ಪಂಜಾಬ್‌ನ ವಿದ್ಯಾರ್ಥಿಗಳೂ ಸೇರಿದ್ದಾರೆ. ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಬೇನ್ಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

  • Envisaging vision of Hon’ble CM @BhagwantMann Ji to provide the best learning experience for the students of School Of Eminence (SOE).

    40 students of SOE from various districts of Punjab are taking off for Sriharikota to witness the launch of #Chandrayaan3.

    On this 3 day trip,… pic.twitter.com/r21ItTwruV

    — Harjot Singh Bains (@harjotbains) July 13, 2023 " class="align-text-top noRightClick twitterSection" data=" ">

ಹರ್ಜೋತ್ ಬೇನ್ಸ್ ಟ್ವೀಟ್: ಶಿಕ್ಷಣ ಸಚಿವ ಹರ್ಜೋತ್ ಬೈನ್ಸ್ ಅವರು ಟ್ವೀಟ್​ವೊಂದನ್ನು ಹಂಚಿಕೊಂಡಿದ್ದಾರೆ. ಟ್ವೀಟ್​ನಲ್ಲಿ, 'ಗೌರವಾನ್ವಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ದೂರದೃಷ್ಟಿಯ ಕಲ್ಪನೆಯಂತೆ ಸ್ಕೂಲ್ ಆಫ್ ಎಮಿನೆನ್ಸ್ (SOE) ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಅನುಭವವನ್ನು ಒದಗಿಸಲು ನಾವು ಯೋಜಿಸಿದ್ದೇವೆ. ಹೀಗಾಗಿ ಪಂಜಾಬ್‌ನ ವಿವಿಧ ಜಿಲ್ಲೆಗಳಿಂದ 40 ಎಸ್‌ಒಇ ವಿದ್ಯಾರ್ಥಿಗಳು ಚಂದ್ರಯಾನ 3 ಉಡಾವಣೆಯನ್ನು ವೀಕ್ಷಿಸಲು ಶ್ರೀಹರಿಕೋಟಾಕ್ಕೆ ತೆರಳುತ್ತಿದ್ದಾರೆ. ಈ 3 ದಿನಗಳ ಪ್ರವಾಸದಲ್ಲಿ ಅವರು ಸಂಪೂರ್ಣ ಶ್ರೀಹರಿಕೋಟಾ ಸೌಲಭ್ಯವನ್ನು ನೋಡುತ್ತಾರೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯ ಬಗ್ಗೆ ಅರಿತುಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

23 ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗಿ: ಪಂಜಾಬ್​ನ 23 ಜಿಲ್ಲೆಗಳ ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ ಎಂದು ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ತಿಳಿಸಿದ್ದಾರೆ. ಇದು 3 ದಿನಗಳ ಕಾಲ ಪ್ರವಾಸ. ವಿದ್ಯಾರ್ಥಿಗಳು ಅಲ್ಲಿಯೇ ಇರುತ್ತಾರೆ. ಇದರೊಂದಿಗೆ ಶ್ರೀಹರಿಕೋಟಾದಲ್ಲಿ ನಡೆಯುತ್ತಿರುವ ಬಾಹ್ಯಾಕಾಶ ಅಧ್ಯಯನದ ಬಗ್ಗೆಯೂ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ನೋಡಿ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೂ ಇದು ಹೊಸ ಅನುಭವವಾಗಲಿದೆ. ಇಸ್ರೋದ 'ಬಾಹುಬಲಿ' ರಾಕೆಟ್ ಎಲ್‌ವಿಎಂ-3 ಜುಲೈ 14 ರಂದು ಚಂದ್ರಯಾನ 3 ಅನ್ನು ಉಡಾವಣೆ ಮಾಡಲಿದೆ. ಇದರೊಂದಿಗೆ ಇದು 140 ಕೋಟಿ ಭಾರತೀಯರ ಭರವಸೆಯನ್ನು ಚಂದ್ರನತ್ತ ಕೊಂಡೊಯ್ಯಲಿದೆ. ISRO ಪ್ರಕಾರ, ಚಂದ್ರಯಾನ-3 ರ ಲ್ಯಾಂಡರ್ ಆಗಸ್ಟ್ 23 ಅಥವಾ 24 ರಂದು ಚಂದ್ರನ ಮೇಲೆ ಲ್ಯಾಂಡ್​ ಮಾಡಬಹುದು. ಹಿಂದಿನ ಮಿಷನ್ ವಿಫಲ ಲ್ಯಾಂಡಿಂಗ್ ಅನ್ನು ಹೊಂದಿದ್ದರೂ ಸಹ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಭಾರತವು ವಿಶ್ವದ ನಾಲ್ಕನೇ ದೇಶವಾಗಲು ಸಿದ್ಧವಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಓದಿ: India Moon Mission: ಚಂದ್ರಯಾನ 3 ಉಡಾವಣೆ ಕ್ಷಣಗಣನೆ ಆರಂಭ.. ನಭಕ್ಕೆ ಜಿಗಿಯಲು ಸಜ್ಜಾದ ಉಪಗ್ರಹ

ಉಪಗ್ರಹ ಉಡಾವಣೆ ಮುನ್ನ ತಿರುಪತಿ ದರ್ಶನ: ಚಂದ್ರಯಾನ -3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಗ್ಗೆ ಇಸ್ರೋ ವಿಜ್ಞಾನಿಗಳ ತಂಡವು ಚಂದ್ರಯಾನದ ಸಣ್ಣ ಮಾದರಿಯೊಂದಿಗೆ ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಚಂದ್ರಯಾನ- 3ರ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿತು. ಈ ವೇಳೆ ಇಸ್ರೋ ವಿಜ್ಞಾನಿಗಳ ಜೊತೆಗೆ ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ವಾಡೇಕರ್ ಇದ್ದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ​ (ಇಸ್ರೋ) ಟ್ವೀಟ್​ ಮಾಡಿ, "ಚಂದ್ರಯಾನದ ಮಿಷನ್​ ರೆಡಿನೆಸ್​ ರಿವ್ಯೂ (ಯೋಜನೆ​ ಸಿದ್ಧತೆ ಪರಿಶೀಲನೆ) ಪೂರ್ಣಗೊಂಡಿದೆ. ಚಂದ್ರಯಾನದ ಉಡಾವಣೆಗೆ ಅನುಮತಿ ಸಿಕ್ಕಿದೆ. ಇಂದಿನಿಂದ ಚಂದ್ರಯಾನಕ್ಕೆ ಕ್ಷಣಗಣನೆ ಆರಂಭವಾಗಲಿದೆ" ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.