ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಇವರ ಎದುರಾಳಿಯಾಗಿ ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಸ್ಪರ್ಧೆ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜೊತೆ ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ್ ಆಜಾದ್ ಮಾತುಕತೆ ನಡೆಸಿದ್ದರು. ಆದರೆ, ಮೈತ್ರಿ ಯಶಸ್ವಿಯಾಗದ ಕಾರಣ ಇದೀಗ ಆಜಾದ್ ಸಮಾಜ್ ಪಾರ್ಟಿ 33 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದ್ದು, ಗೋರಖ್ಪುರ ಕ್ಷೇತ್ರದಿಂದ ಚಂದ್ರಶೇಖರ್ ಆಜಾದ್ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೇ ಮೊದಲ ಸಲ ವಿಧಾನಸಭೆ ಚುನಾವಣೆಗಿಳಿದಿರುವ ಆಜಾದ್ ಅತಿದೊಡ್ಡ ಅಗ್ನಿ ಪರೀಕ್ಷೆಗೊಳಪಡಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಯೋಗಿ-ಆಜಾದ್ ಮೊದಲ ಫೈಟ್
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಚಂದ್ರಶೇಖರ್ ಆಜಾದ್ ಇದೇ ಮೊದಲ ಸಲ ಸ್ಪರ್ಧೆ ಮಾಡಿದ್ದಾರೆ. ಈಗಾಗಲೇ ಐದು ಸಲ ಸಂಸದರಾಗಿರುವ ಸಿಎಂ ಯೋಗಿ ಮೊದಲ ಬಾರಿಗೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.
![Chandrashekhar will contest from Gorakhpur](https://etvbharatimages.akamaized.net/etvbharat/prod-images/14234455_lko.jpeg)
ಇದನ್ನೂ ಓದಿರಿ: ಬ್ರಹ್ಮೋಸ್ ಕ್ಷಿಪಣಿಯ ಹೊಸ ಆವೃತ್ತಿಯ ಪರೀಕ್ಷೆ ಯಶಸ್ವಿ
35 ವರ್ಷದ ಚಂದ್ರಶೇಖರ್ ಆಜಾದ್ ಭೀಮ್ ಆರ್ಮಿ ಸಂಘಟನೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, 2020ರಲ್ಲಿ ಆಜಾದ್ ಸಮಾಜ್ ಪಾರ್ಟಿ ಆರಂಭಿಸಿದ್ದು, ಇದೀಗ ಚುನಾವಣಾ ಕಣಕ್ಕಿಳಿದಿದ್ದಾರೆ.
403 ವಿಧಾನಸಭಾ ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಫೆ. 10ರಿಂದ ವೋಟಿಂಗ್ ಆರಂಭಗೊಳ್ಳಲಿದೆ. ಅದಕ್ಕಾಗಿ ಆಡಳಿತ ಪಕ್ಷ ಬಿಜೆಪಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ನಡುವೆ ನೇರ ಸ್ಪರ್ಧೆ ಇದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ