ಮಂಡಿ (ಚಂಡೀಗಢ): ಭೂಕುಸಿತದ ಹಿನ್ನೆಲೆ ಕಳೆದ ಒಂದು ವಾರದಿಂದ ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ತೀವ್ರ ತೊಂದರೆ ಅನುಭವಿಸಿದ್ದ ಚಾಲಕರು ಸದ್ಯ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ವಾರದ ನಂತರ ಚಂಡೀಗಢ - ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ವಾಹನ ಸಂಚಾರ ಆರಂಭವಾಗಿದೆ. ಪ್ರಸ್ತುತ ಏಕಮುಖ ವಾಹನಗಳ ಸಂಚಾರಕ್ಕೆ ಮಾತ್ರ ಪುನಾರಂಭಗೊಂಡಿದೆ. ಗಮನಾರ್ಹವಾಗಿ, ಜುಲೈ 8ರಂದು ಸಂಜೆ 6.30ಕ್ಕೆ ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿಯು 6 ಮೈಲಿಗಳಷ್ಟು ಭಾರಿ ಭೂಕುಸಿತದಿಂದಾಗಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು.
-
#WATCH | Himachal Pradesh | Chandigarh-Manali national highway closed following landslide near Six Mile area in Mandi.
— ANI (@ANI) July 11, 2023 " class="align-text-top noRightClick twitterSection" data="
(Video - drone visuals) pic.twitter.com/yZE6v4GR43
">#WATCH | Himachal Pradesh | Chandigarh-Manali national highway closed following landslide near Six Mile area in Mandi.
— ANI (@ANI) July 11, 2023
(Video - drone visuals) pic.twitter.com/yZE6v4GR43#WATCH | Himachal Pradesh | Chandigarh-Manali national highway closed following landslide near Six Mile area in Mandi.
— ANI (@ANI) July 11, 2023
(Video - drone visuals) pic.twitter.com/yZE6v4GR43
ನೆಮ್ಮದಿಯ ನಿಟ್ಟುಸಿರು ಬಿಟ್ಟ ವಾಹನ ಸವಾರರು: ಇದೇ ಸಮಯದಲ್ಲಿ, ಕಮಂದ್‌ನ ಘೋಡಾ ಫಾರ್ಮ್ ಬಳಿ ಭಾರಿ ಭೂಕುಸಿತದಿಂದಾಗಿ ಪರ್ಯಾಯ ಮಾರ್ಗವಾದ ಕಮಂದ್ ಕತೌಲಾವನ್ನು 3 ದಿನಗಳವರೆಗೆ ಮುಚ್ಚಲಾಗಿತ್ತು. ಇದನ್ನು ಸದ್ಯ ವಾಹನ ಸಂಚಾರಕ್ಕೆ ಒಂದು ಮಾರ್ಗವನ್ನು ತೆರೆಯಲಾಗಿದೆ. ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿಯ ಪುನಶ್ಚೇತನದೊಂದಿಗೆ, ಮಂಡಿಯಿಂದ ಸುಂದರನಗರದವರೆಗೆ ಸಿಲುಕಿರುವ ನೂರಾರು ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇದೀಗ ಚಂಡೀಗಢ - ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ಸಂಚಾರವನ್ನು ಮಾತ್ರ ಮರುಆರಂಭಿಸಲಾಗಿದೆ. ಇಲ್ಲಿಂದ ಪರ್ಯಾಯ ಮಾರ್ಗದ ಮೂಲಕ ವಾಹನಗಳು ಸಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪುನಾರಂಭಕ್ಕೆ ಎನ್‌ಎಚ್‌ಎಐ, ಕಂಪನಿ ಹಾಗೂ ಚತುಷ್ಪಥ ಕಾಮಗಾರಿಯಲ್ಲಿ ತೊಡಗಿದ್ದ ಗುತ್ತಿಗೆದಾರರ ಶ್ರಮ ಫಲ ನೀಡಿದೆ.
ಈ ರಾಷ್ಟ್ರೀಯ ಹೆದ್ದಾರಿಯನ್ನು ಪುನರಾರಂಭಿಸಲು, ಯಂತ್ರೋಪಕರಣಗಳನ್ನು ಪ್ರತಿದಿನ 16 ಗಂಟೆಗಳ ಕಾಲ ನಿರಂತರವಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದವು. 4 ದಿನಗಳ ಕಾಲ 16 ಗಂಟೆಗಳ ನಿರಂತರ ಕಲ್ಲು ಮತ್ತು ಮಣ್ಣು ತೆಗೆಯಲಾಯಿತು. ನಂತರ ಈ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ: ಭಾರಿ ಮಳೆಯಿಂದಾಗಿ ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿಯನ್ನು ಭೂಕುಸಿತದಿಂದ ಮುಚ್ಚಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಚಂದ್ರ ತಿಳಿಸಿದ್ದಾರೆ. 6 ಮೈಲಿಗಳಷ್ಟು ಪ್ರದೇಶದಲ್ಲಿ ದೊಡ್ಡ ಭೂಕುಸಿತ ಸಂಭವಿಸಿತ್ತು. ಕಠಿಣ ಪರಿಶ್ರಮದ ನಂತರ ಏಕಮುಖ ಸಂಚಾರವನ್ನು ಪುನರಾಭಿಸಲಾಗಿದೆ. ದ್ವಿಮುಖ ಸಂಚಾರ ಮತ್ತೆ ಪ್ರಾರಂಭಿಸಲು ಇನ್ನೂ ಒಂದು ವಾರ ಬೇಕಾಗುತ್ತದೆ. ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಆರಂಭವಾಗಿದ್ದರಿಂದ ಚಾಲಕರು ಕುಲು ತನಕ ಪ್ರಯಾಣಿಸಬಹುದು. ಸುಮಾರು 400 ವಾಹನಗಳು ಮಂಡಿಯಲ್ಲಿ ಸಿಲುಕಿಕೊಂಡಿದ್ದು, ಅವುಗಳನ್ನು ಕುಲು ಕಡೆಗೆ ಕಳುಹಿಸಲಾಗುತ್ತಿದೆ. ಅದೇ ಸಮಯದಲ್ಲಿ, ಕುಲುವಿನಲ್ಲಿ ಸಿಲುಕಿರುವ ಸುಮಾರು 100 ವಾಹನಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಪಂಜಾಬ್ದಲ್ಲಿ ವಿದ್ಯುತ್ ಕ್ಷಾಮ...! ಗ್ರಿಡ್‌ಗಳು ಜಲಾವೃತ, ವಿದ್ಯುತ್ ಪೂರೈಕೆಗೆ ಪಿಎಸ್‌ಪಿಸಿಎಲ್ ಶತಪ್ರಯತ್ನ