ETV Bharat / bharat

ಬಲೋದ್​ನಲ್ಲಿ ಹೆಚ್ಚಾದ ಆನೆಗಳ ಹಾವಳಿ: ಮನೆ ಧ್ವಂಸ

ಬಲೋದ್ ಜಿಲ್ಲೆಯಲ್ಲಿ ಹೆಚ್ಚಿದ ಆನೆಗಳ ಹಾವಳಿ- ದಾಳಿ ಮಾಡಿ ಮನೆ ಧ್ವಂಸ-ಗಜಪಡೆಯನ್ನು ಕಾಡಿಗೆ ಓಡಿಸಲು ತಂಡವನ್ನು ಕರೆಸಲು ಅರಣ್ಯ ಇಲಾಖೆ ಸಿದ್ಧತೆ

Chanda elephant team havoc in Balod
ಬಲೋದ್​ನಲ್ಲಿ ಹೆಚ್ಚಾದ ಆನೆಗಳ ಹಾವಳಿ
author img

By

Published : Jul 11, 2022, 4:20 PM IST

ಬಲೋದ್: ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ಪುಂಡಾನೆಗಳ ಗುಂಪೊಂದು ಅವಾಂತರ ಸೃಷ್ಟಿಸುತ್ತಿದೆ. ಜಿಲ್ಲಾ ಕೇಂದ್ರದ 2 ಕಿ.ಮೀ ವ್ಯಾಪ್ತಿಯೊಳಗೆ ಆನೆಗಳ ಗುಂಪು ನುಗ್ಗಿದೆ. ಹಾಗಾಗಿ ಜಂಟಿ ಜಿಲ್ಲಾ ಕಚೇರಿ ಅಲರ್ಟ್ ಆಗಿದೆ. ಅಲ್ಲದೇ ಸುಮಾರು ಹನ್ನೇರಡು ಹಳ್ಳಿಗಳಿಗೂ ಎಚ್ಚರಿಕೆ ನೀಡಲಾಗಿದೆ. ಅರಣ್ಯ ಇಲಾಖೆ ತಂಡ ಆನೆಗಳ ಮೇಲೆ ನಿರಂತರ ನಿಗಾ ಇರಿಸಿದೆ. ಆದ್ರೂ ಕೂಡ ಇದೀಗ ಆನೆಗಳ ಹಿಂಡು ಮನೆಯೊಂದನ್ನೂ ಧ್ವಂಸ ಮಾಡಿವೆ. ಇದರಿಂದ ಜನ ಭಯಭೀತರಾಗಿದ್ದಾರೆ.

ಬಲೋದ್​ನಲ್ಲಿ ಹೆಚ್ಚಾದ ಆನೆಗಳ ಹಾವಳಿ

ಗ್ರಾಮೀಣ ಪ್ರದೇಶಗಳಿಗೆ ಈ ಹಿಂದೆ ಬಲೋದ್ ಆಡಳಿತ ಮತ್ತು ಅರಣ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೆ ಇದೀಗ ಜಂಟಿ ಜಿಲ್ಲಾಸ್ಪತ್ರೆ ಕೂಡ ಆನೆಗಳ ಪೀಡಿತ ಪ್ರದೇಶಕ್ಕೆ ಸೇರ್ಪಡೆಯಾಗಿದೆ. ಇದರೊಂದಿಗೆ ಗ್ರಾಮತಲ್ಗಾಂವ್, ಆದಮಾಬಾದ್ ವಿಶ್ರಾಂತಿ ಗೃಹ, ಜಂಟಿ ಜಿಲ್ಲಾ ಕಚೇರಿ, ಸಂರಕ್ಷಿತ ಮೀಸಲು ಕೇಂದ್ರ, ಝಲ್ಮಲಾ, ಸಿಯೋನಿ, ಡಿಯೋರ್ತರೈ, ಸೆಮಾರ್ಕೋನಾ, ಆಂಧಿಯಾಟೋಲಾ, ದೇವರಭಟ್, ಗಸ್ತಿತೋಲಾಗಳಲ್ಲೂ ಆನೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾ ಕೇಂದ್ರದಿಂದ 2 ಕಿ.ಮೀ ದೂರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಆನೆಗಳ ಗುಂಪು ಓಡಾಡುತ್ತಿದೆ. ಜಲಾಶಯದ ದಡದಲ್ಲಿ ಮೇವು ಹಾಗೂ ನೀರಿನ ಲಭ್ಯತೆ ಇರುವುದರಿಂದ ಆನೆಗಳ ಹಿಂಡು ಇಲ್ಲಿ ಬೀಡು ಬಿಟ್ಟಿವೆ.

ಮನೆ ಧ್ವಂಸ: ತಾಳಗಾಂವ್‌ನಲ್ಲಿ ರಾಧೇಲಾಲ್ ಠಾಕೂರ್ ಅವರ ಮನೆಯನ್ನು ಆನೆಗಳ ತಂಡ ಕೆಡವಿದೆ. ಇದರಿಂದ ಗ್ರಾಮದ ಜನರು ಭಯಭೀತರಾಗಿದ್ದಾರೆ. ಅಲ್ಲದೇ ಮುಖ್ಯರಸ್ತೆಯಲ್ಲಿ ಆನೆಗಳ ಓಡಾಟವೂ ಕಂಡು ಬರುತ್ತಿದೆ. ಅರಣ್ಯ ಇಲಾಖೆಯ ತಂಡ ಆನೆಗಳನ್ನು ಜನವಸತಿ ಪ್ರದೇಶದಿಂದ ಓಡಿಸಲು ಪ್ರಯತ್ನಿಸುತ್ತಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಜನವಸತಿ ಪ್ರದೇಶದಲ್ಲಿ ಆನೆಗಳ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆ ಅವುಗಳನ್ನು ಓಡಿಸಲು ಹೊರಗಿನಿಂದ ತಂಡವನ್ನು ಕರೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಈ ಮೊದಲು ಕೂಡ ಬಂಗಾಳದಿಂದ ತಂಡವನ್ನು ಕರೆಸಲಾಗಿತ್ತು. ಆದರೆ ಅದರಲ್ಲಿ ಯಶಸ್ಸು ಸಿಕ್ಕಿರಲಿಲ್ಲ.

ಇದನ್ನೂ ಓದಿ: ಯುವಕನಿಗೆ ಕಿಡ್ನಿ ಸಮಸ್ಯೆ: ಚಿಕಿತ್ಸೆಗಾಗಿ ರೋಗಿಗೆ ಬಂಗಾರದ ಬಳೆಯನ್ನೇ ನೀಡಿದ್ರು ಸಚಿವೆಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.