ETV Bharat / bharat

ಕಳೆದ 7 ವರ್ಷಗಳಲ್ಲಿ ಕೇಂದ್ರದಿಂದ 6.98 ಲಕ್ಷ ಉದ್ಯೋಗಿಗಳ ನೇಮಕಾತಿ: ಸಚಿವ ಜೀತೇಂದ್ರ ಸಿಂಗ್‌ - ರಾಜ್ಯಸಭೆಯಲ್ಲಿ ಸಚಿವ ಜೀತೇಂದ್ರ ಸಿಂಗ್‌ ಹೇಳಿಕೆ

ಎನ್‌ಡಿಎ ಸರ್ಕಾರ ಬಂದ 2014 ರಿಂದ ಈವರೆಗೆ ಸುಮಾರು 6.98 ಲಕ್ಷ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್‌ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

Centre recruited 6.98 lakh employees since 2014, higher than previous 7 years of UPA: Minister
ಕಳೆದ 7 ವರ್ಷಗಳಲ್ಲಿ ಕೇಂದ್ರದಿಂದ 6.98 ಲಕ್ಷ ಉದ್ಯೋಗಿಗಳ ನೇಮಕಾತಿ - ಸಚಿವ ಜೀತೇಂದ್ರ ಸಿಂಗ್‌
author img

By

Published : Dec 2, 2021, 4:43 PM IST

ನವದೆಹಲಿ: ಕಳೆದ 7 ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ವಿವಿಧ ಇಲಾಖೆಗಳಿಗೆ ಸುಮಾರು 6.98 ಲಕ್ಷ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆಗಳು ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಜೀತೇಂದ್ರ ಸಿಂಗ್‌ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನೇಮಕಾತಿ ಪ್ರಕ್ರಿಯೆ ತ್ವರಿತಗೊಳಿಸಿದೆ. ಮಾತ್ರವಲ್ಲದೇ ಅದೆ ಸಮಯದಲ್ಲಿ ಹೊಸ ಹುದ್ದೆಗಳನ್ನು ರಚಿಸುವ ಪ್ರಯತ್ನಗಳನ್ನು ಮಾಡಿದೆ ಎಂದು ವಿವರಿಸಿದರು.

2007-08 ರಿಂದ 2013-14 ರ ನಡುವೆ 6,19,027 ಹುದ್ದೆಗಳನ್ನು ಮೂರು ಪ್ರಮುಖ ನೇಮಕಾತಿ ಏಜೆನ್ಸಿಗಳಾದ ಸ್ಟಾಫ್ ಸೆಲೆಕ್ಷನ್ ಕಮಿಷನ್, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಹಾಗೂ ರೈಲ್ವೆ ನೇಮಕಾತಿ ಮಂಡಳಿಯಿಂದ ಭರ್ತಿ ಮಾಡಲಾಗಿದೆ. 2014ರಲ್ಲಿ 36,45,584 ರಷ್ಟು ಇದ್ದ ಮಂಜೂರಾತಿಯನ್ನು 2020ರಲ್ಲಿ 40,04,941ಕ್ಕೆ ಏರಿಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಖಾಲಿ ಹುದ್ದೆಗಳ ನೇಮಕಾತಿ ನಿರಂತರ ಪ್ರಕ್ರಿಯೆಯಾಗಿದೆ. ಇಲಾಖೆಯಿಂದ ವರದಿಯಾದ ಖಾಲಿ ಹುದ್ದೆಗಳು ಭರ್ತಿಯಾಗುವ ಹೊತ್ತಿಗೆ ಕೆಲವು ಹೊಸ ಹುದ್ದೆಗಳು ಸೃಷ್ಟಿಯಾಗುತ್ತವೆ. ನಿವೃತ್ತಿ, ರಾಜೀನಾಮೆ, ಮರಣ, ಬಡ್ತಿ ಹಾಗೂ ಇತರ ಕಾರಣಗಳಿಂದಾಗಿ ಖಾಲಿ ಹುದ್ದೆಗಳು ಉಂಟಾಗುತ್ತವೆ.

ಕೇಂದ್ರದಲ್ಲಿ 8.72 ಹುದ್ದೆಗಳು ಖಾಲಿ

2020ರ ಮಾರ್ಚ್ ವೇಳೆಗೆ 31,32,698 ನೌಕರರ ಉದ್ಯೋಗಕ್ಕೆ ಮಂಜೂರಾಗಿದ್ದು, 8,72,243 ಹುದ್ದೆಗಳು ಖಾಲಿ ಇವೆ. ಕಳೆದ ಐದು ಹಣಕಾಸು ವರ್ಷಗಳಲ್ಲಿ ಮೂರು ಏಜೆನ್ಸಿಗಳಿಂದ 4,44,813 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಒಂದು ಹುದ್ದೆಯು ಎರಡರಿಂದ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಖಾಲಿಯಾಗಿದ್ದರೆ ಅದನ್ನು ರದ್ದು ಪಡಿಸಲು ಪರಿಗಣಿಸಲ್ಪಟ್ಟಿದೆ ಎಂದು ಸಿಂಗ್‌ ಸದನಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರ ವಿಭಜಿಸುವ ಕೆಲಸ.. ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದ ಟಿಕಾಯತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.